Top

ನಾನು ಟವಲ್ ಹಾಸಿದ್ರೆ, ಬಿಜೆಪಿ ಪಕ್ಷಕ್ಕೆ ನೀನು ಕಂಬಳಿಯನ್ನೇ ಹಾಕಿದ್ದಿಯಲ್ಲಪ್ಪ - ಹೆಚ್​ ವಿಶ್ವನಾಥ್

ಸಮ್ಮಿಶ್ರ ಸರ್ಕಾರದಲ್ಲಿ ಯಾರ್ಯಾರಿಗೆ ಎಷ್ಟು ಗೌರವ ಇತ್ತು. ಯಾರ್ಯಾರು ಹೇಗೆ ನಡೆದುಕೊಳ್ಳುತ್ತಿದ್ರು ಅಂತ ಅವರೇ ಸತ್ಯ ಹೇಳುತ್ತಿದ್ದಾರೆ

ನಾನು ಟವಲ್ ಹಾಸಿದ್ರೆ, ಬಿಜೆಪಿ ಪಕ್ಷಕ್ಕೆ ನೀನು ಕಂಬಳಿಯನ್ನೇ ಹಾಕಿದ್ದಿಯಲ್ಲಪ್ಪ - ಹೆಚ್​ ವಿಶ್ವನಾಥ್
X

ಮೈಸೂರು: ನಾನು ಟವಲ್ ಹಾಸಿದ್ರೆ ನೀನು ರಗ್​ಅನ್ನೇ ಹಾಸುತ್ತಿದ್ದಿಯಲ್ಲಪ್ಪ, ಬಿಜೆಪಿ ಪಕ್ಷಕ್ಕೆ ನೀನು ಕಂಬಳಿಯನ್ನೇ ಹಾಕಿದ್ದಿಯಲ್ಲಪ್ಪ ಎಂದು ಎಂಎಲ್​ಸಿ ಹೆಚ್​.ವಿಶ್ವನಾಥ್ ಅವರು ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಇನ್ನೊಂದು ಪಕ್ಷ ಇದ್ದರೆ ಅದಕ್ಕೂ ಹೆಚ್.ವಿಶ್ವನಾಥ್ ಟವೆಲ್ ಹಾಕುತ್ತಿದ್ದರು ಎಂಬ ಹೆಚ್ಡಿಕೆ ಹೇಳಿಕೆ ಬಗ್ಗೆ ಮೈಸೂರಿನ ಕೆ.ಆರ್​ ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್ ಪಕ್ಷ, ಪಕ್ಷವೇ ಅಲ್ಲ ಎಂದು ಹೇಳಿದ್ದಾರೆ. ಇತ್ತ ಕುಮಾರಸ್ವಾಮಿ ನಾನು ಸಮ್ಮಿಶ್ರ ಸರ್ಕಾರದಲ್ಲಿ ಕ್ಲರ್ಕ್ ಆಗಿದ್ದೆ ಎಂದಿದ್ದಾರೆ. ಇದರಲ್ಲೆ ಗೊತ್ತಾಗುತ್ತೆ ಸಮ್ಮಿಶ್ರ ಸರ್ಕಾರ ಬಿಳೋಕೆ ನಾವ್ಯಾರು ಕಾರಣರಲ್ಲ ಅಂತ(?) ಹಳ್ಳಿಯ ಗಾದೆಯಂತೆ ಕಂತೆಗೆ ತಕ್ಕ ಬೊಂತೆ ಎಂಬಂತಾಗಿದೆ ಎಂದರು.

ಅವರವರ ಆರೋಪ ಪ್ರತ್ಯಾರೋಪದಿಂದಲೇ ಸಮ್ಮಿಶ್ರ ಸರ್ಕಾರ ಉರುಳಿತು. ಸಗಣಿ ಹಾಗೂ ಹುಲ್ಲು ಗಾಡಿಯನ್ನ ಎತ್ತಿಕೊಂಡು ಚಿನ್ನ ಇದೆ ಅಂತ ಊರಾಚೆ ಹೋಗಿದ್ರಂತೆ. ಬೆಳಗ್ಗೆ ಎದ್ದು ನೋಡಿದಾಗ ಒಂದು ಗಾಡಿಯಲ್ಲಿ ಸಗಣಿ ಇನ್ನೊಂದು ಗಾಡಿಯಲ್ಲಿ ಹುಲ್ಲಿನ ಸೋಪ್ಪು ಇತ್ತಂತೆ. ಇವರ ಕಥೆಯೂ ಹಾಗೇ ಇದೆ ಎಂದು ಹೇಳಿದ್ದಾರೆ.

ಇನ್ನು ಸಮ್ಮಿಶ್ರ ಸರ್ಕಾರದಲ್ಲಿ ಯಾರ್ಯಾರಿಗೆ ಎಷ್ಟು ಗೌರವ ಇತ್ತು. ಯಾರ್ಯಾರು ಹೇಗೆ ನಡೆದುಕೊಳ್ಳುತ್ತಿದ್ರು ಅಂತ ಅವರೇ ಸತ್ಯ ಹೇಳುತ್ತಿದ್ದಾರೆ. ಈ ಸತ್ಯ ಕೇಳಿ ನನಗೆ ಬಹಳ ಸಂತೋಷ ಆಗುತ್ತಿದೆ ಎಂದು ವಿಧಾನ ಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್ ಅವರು ಹೇಳಿದ್ದಾರೆ.

Next Story

RELATED STORIES