Top

Gram panchayat Election 2020: ರಾಜ್ಯ ಚುನಾವಣೆ ಆಯೋಗದಿಂದ ದಿನಾಂಕ ಘೋಷಣೆ

5,762 ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 92,121 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ

Gram panchayat Election 2020: ರಾಜ್ಯ ಚುನಾವಣೆ ಆಯೋಗದಿಂದ ದಿನಾಂಕ ಘೋಷಣೆ
X

ಬೆಂಗಳೂರು: ರಾಜ್ಯದ 5,762 ಗ್ರಾಮ ಪಂಚಾಯತಿ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿದ್ದು, ಮೊದಲ ಹಂತದ ಮತದಾನ ಡಿಸೆಂಬರ್​ 22, ಎರಡನೇ ಹಂತದ ಮತದಾನ ಡಿಸೆಂಬರ್​ 27ರಂದು ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನು ನಡೆಸಿದ ರಾಜ್ಯ ಚುನಾವಣೆ ಆಯೋಗ, 5,762 ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 92,121 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಮೊದಲ ಹಂತದ ವೇಳಾಪಟ್ಟಿ ಹೀಗಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ ಡಿಸೆಂಬರ್ 07, ಕೊನೆ ದಿನಾಂಕ ಡಿಸೆಂಬರ್​ 11. ನಾಮಪತ್ರ ಪರಿಶೀಲನೆ ಡಿಸೆಂಬರ್​ 12ರಂದು ನಡೆಯಲಿದೆ. ನಾಮಪತ್ರ ವಾಪಸ್​ ಪಡೆಯಲು ಡಿಸೆಂಬರ್​ 14 ಕೊನೆ ದಿನವಾಗಿದೆ. ಡಿಸೆಂಬರ್​ 22ರಂದು ಮತದಾನ ನಡೆಯಲಿದೆ.

ಎರಡನೇ ಹಂತದ ವೇಳಾಪಟ್ಟಿ ಹೀಗಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ ಡಿಸೆಂಬರ್​ 11, ಕೊನೆಯ ದಿನಾಂಕ ಡಿಸೆಂಬರ್​ 16, ನಾಮಪತ್ರ ಪರಿಶೀಲನೆ ಡಿಸೆಂಬರ್ 17, ನಾಮಪತ್ರ ವಾಪಸ್​ ಪಡೆಯಲು ಡಿಸೆಂಬರ್​ 19ರಂದು ಕೊನೆಯ ದಿನವಾಗಿದೆ. ಡಿಸೆಂಬರ್​ 27 ಮತದಾನ ನಡೆಯಲಿದೆ.

ಇನ್ನು ಚುನಾವಣೆ ಫಲಿತಾಂಶವು ಡಿಸೆಂಬರ್​ 30ರಂದು ಹೊರಬರಲಿದೆ.

Next Story

RELATED STORIES