Top

ಅಕ್ಟೋಬರ್​ನಿಂದ ಪದವಿ ತರಗತಿ ಆರಂಭ, ಸೆಪ್ಟೆಂಬರ್​ 1 ರಿಂದಲೇ ಆನ್​ಲೈನ್​ ತರಗತಿ

ತರಗತಿಗಳನ್ನು ಆರಂಭಿಸಲು ಯುಜಿಸಿ ನೀಡಿರುವ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಎಲ್ಲಾ ರೀತಿಯ ಪೂರ್ವಭಾವಿ ಸಿದ್ಧತೆ

ಅಕ್ಟೋಬರ್​ನಿಂದ ಪದವಿ ತರಗತಿ ಆರಂಭ, ಸೆಪ್ಟೆಂಬರ್​ 1 ರಿಂದಲೇ ಆನ್​ಲೈನ್​ ತರಗತಿ
X

ಬೆಂಗಳೂರು: ಅಕ್ಟೋಬರ್​ನಿಂದ ಪದವಿ ತರಗತಿ ಆರಂಭವಾಗಲಿದ್ದು, ಸೆಪ್ಟೆಂಬರ್ 1ರಿಂದಲೇ ಆನ್​ಲೈನ್​ ತರಗತಿ ನಡೆಯಲಿದೆ ಎಂದು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಎನ್​ ಅಶ್ವಥ್​ ನಾರಾಯಣ್ ಅವರು ಬುಧವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ತರಗತಿ ಆರಂಭದ ಬಗ್ಗೆ ಮಾರ್ಗಸೂಚಿ ಬರಬೇಕಿದೆ. ಸೆಪ್ಟೆಂಬರ್​ ತಿಂಗಳಲ್ಲಿ ಪದವಿ ಪರೀಕ್ಷೆಗಳು ನಡೆಯಲಿವೆ. ಮುಂದಿನ ತಿಂಗಳಿಂದ ಆನ್​ಲೈನ್​​ನ​ ಎಲ್ಲ ಶೈಕ್ಷಣಿಕ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಚಾಲನೆ ಸಿಗಲಿದೆ ಎಂದು ಹೇಳಿದ್ದಾರೆ.

ಇನ್ನು ಅಕ್ಟೋಬರ್ ತಿಂಗಳಿಂದಲೇ ಎಲ್ಲಾ ಕಾಲೇಜುಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕಾಗುತ್ತದೆ. ತರಗತಿಗಳನ್ನು ಆರಂಭಿಸಲು ಯುಜಿಸಿ ನೀಡಿರುವ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಎಲ್ಲಾ ರೀತಿಯ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.

ಸದ್ಯ ಕೇಂದ್ರ ಸರಕಾರದ ಆದೇಶ ಬರುತ್ತಿದ್ದಂತೆ ರಾಜ್ಯವು ಕಾರ್ಯೋನ್ಮುಖವಾಗಲಿದೆ. ಅಂತಿಮ ವರ್ಷದ ಪದವಿ ಪರೀಕ್ಷೆ ನಡೆಯಲಿದೆ. ಪದವಿ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಪರೀಕ್ಷೆ ನಡೆಯುತ್ತದೆ. ಬ್ಯಾಕ್ಲಾಗ್ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲಾಗುವುದು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿಎಂ ಅಶ್ವಥ್​ ನಾರಾಯಣ್ ಅವರು ಭವರಸೆ ನೀಡಿದ್ದಾರೆ.

Next Story

RELATED STORIES