Top

ಗ್ರಾಹಕರಿಗೆ ಕೆಎಂಎಫ್​ನಿಂದ ಗುಡ್ ನ್ಯೂಸ್

ಕಿಸ್ಮಾಸ್ ಹಾಗೂ ಹೊಸ ವರ್ಷದ ಸಮಯದಲ್ಲಿ ಗ್ರಾಹಕರಿಗೆ ಕೆಎಂಎಫ್ ಇಂದಿನಿಂದ್ಲೇ ನಂದಿನಿ ಸಿಹಿ ಉತ್ಸವ ಹಾಗೂ ನಂದಿನಿ ಚೀಸ್ ಫೆಸ್ಟ್ ಆಯೋಜನೆ ಮಾಡುವ ಮೂಲಕ ಬಂಪರ್ ಕೊಡುಗೆ ನೀಡಿದೆ.

ಗ್ರಾಹಕರಿಗೆ ಕೆಎಂಎಫ್​ನಿಂದ ಗುಡ್ ನ್ಯೂಸ್
X

ಬೆಂಗಳೂರು: ರಾಜ್ಯದಲ್ಲಿ ಹಾಲು ಉತ್ಪಾದನೆ ಯಲ್ಲಿ ಮೈಲುಗಲ್ಲು ಸಾಧಿಸಿರುವ ಕೆಎಂಎಫ್ ಇದೀಗ ಮತ್ತೊಂದು ಸಂಭ್ರಮಾಚರಣೆಗೆ ಮುಂದಾಗಿದೆ. ರಾಜ್ಯಾದ್ಯಂತ ಇಂದಿನಿಂದ 15 ದಿನಗಳ ಕಾಲ ನಂದಿನಿ ಉತ್ಸವ ನಡೆಯುತ್ತಿದ್ದು,ಗ್ರಾಹಕರಿಗೆ ರಿಯಾಯಿತಿ ದರದ ನಂದಿನಿ ಉತ್ಪನ್ನಗಳ ಮಾರಟ ನಡೆಯುತ್ತಿದೆ. ಕಿಸ್ಮಾಸ್ ಹಾಗೂ ಹೊಸ ವರ್ಷದ ಸಮಯದಲ್ಲಿ ಗ್ರಾಹಕರಿಗೆ ಕೆಎಂಎಫ್ ಇಂದಿನಿಂದ್ಲೇ ನಂದಿನಿ ಸಿಹಿ ಉತ್ಸವ ಹಾಗೂ ನಂದಿನಿ ಚೀಸ್ ಫೆಸ್ಟ್ ಆಯೋಜನೆ ಮಾಡುವ ಮೂಲಕ ಬಂಪರ್ ಕೊಡುಗೆ ನೀಡಿದೆ.

ಕೆಎಂಎಫ್ ಹಾಲು ಉತ್ಪಾದನೆಯಲ್ಲಿ ಮಹತ್ವದ ಮೈಲಿಗಲ್ಲು ಗಳನ್ನ ಸಾಧಿಸಿದೆ. ಕಳೆದ 40 ವರ್ಷಗಳಿಂದ ಗ್ರಾಹಕರಿಗೆ ರುಚಿ ರುಚಿಯಾದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಗ್ರಾಹಕರಿಗೆ ವಿವಿಧ ಕೊಡುಗೆಯನ್ನ ನೀಡುತ್ತಾ ಬಂದಿದೆ. ಇದರಿಂದ ರಾಜ್ಯದ ಮನೆ ಮನೆಯಲ್ಲಿಯೂ ನಂದಿನಿ ಅಚ್ಚುಮೆಚ್ಚಿನ ಬ್ರ್ಯಾಂಡ್ ಆಗಿದೆ.ಕಳೆದ ನಾಲ್ಕು ವರ್ಷದಿಂದ ಸತತವಾಗಿ ಕೆಎಂಎಫ್ ವರ್ಷದಲ್ಲಿ ಎರಡು ಭಾರಿ ನಂದಿನಿ ಸಿಹಿ ಉತ್ಸವ ಆಚರಣೆ ಮಾಡುತ್ತಿದ್ದು, ಈ ಭಾರಿಯೂ ಇಂದಿನಿಂದ ಜನವರಿ 7 ವರಿಗೆ ರಾಜ್ಯಾದ್ಯಂತ ನಂದಿನಿ ಉತ್ಸವ ಆಯೋಜನೆ ಮಾಡಿದೆ. ಇಂದು ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿಯ ಬಳಿ ಇರುವ ನಂದಿನಿ ಪಾರ್ಲರ್ ನಲ್ಲಿ ನಂದಿನಿ ಸಹಿ ಉತ್ಸವ ಹಾಗೂ ನಂದಿನಿ ಚೀಸ್ ಫೆಸ್ಟ್ ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಚಾಲನೆ ನೀಡಿದರು. ಈ ವೇಳೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್,ಶಾಸಕ ನಂಜೇಗೌಡ ಭಾಗಿಯಾಗಿದರು.

ನಂದಿನಿ ಸಿಹಿ ಉತ್ಸವ ಹಿನ್ನೆಲೆಯಲ್ಲಿ ಗ್ರಾಹಕರನ್ನ ನಂದಿನಿ ಉತ್ಪನ್ನಗಳದತ್ತ ಆಕರ್ಷಣೆ ಮಾಡಲು ಎಲ್ಲಾ ನಂದಿನಿ ಸಿಹಿ ಉತ್ಪನ್ನಗಳಾದ ಮೈಸೂರು ಪಾಕ್, ಪೇಡಾ, ಧಾರವಾಡ, ಕೇಸರ್, ಏಲಕ್ಕಿಪೇಡ, ಬಾದಾಮ್, ಕ್ಯಾಶು, ಡ್ರೈಪ್ರೊರ್ಟ್ಸ್, ಕೋಕೋನಟ್, ರಸಗುಲ್ಲಾ ಜೊತೆಗೆ ಸಿಹಿ ಉತ್ಪನ್ನ ಗಳಾದ ಸಿರಿಧಾನ್ಯ ಲಡ್ಡು,ಸಿರಿಧಾನ್ಯ ಹಾಲಿ ನ ಪುಡಿ,ಚಕ್ಕಿ ಲಾಡು,ಸಿರಿಧಾನ್ಯ ಪಾಯಸ,ಸಿರಿಧಾನ್ಯ ಸಿಹಿ ಪೊಂಗಲ್,ಇತ್ಯಾದಿ ಎಲ್ಲಾ ಉತ್ಪನ್ನ ಗಳ ಮಾರಾಟ ದರದ ಮೇಲೆಶೇ 10 ರಷ್ಟು ರಿಯಾಯಿತಿ ಯನ್ನ ನೇರವಾಗಿ ಗ್ರಾಹಕರಿಗೆ ನೀಡಲಾಗುತ್ತದೆ. 15 ದಿನಗಳ ಕಾಲ ಜನ ಸದುಪಯೋಗ ಪಡೆಸಿಕೊಳ್ಳಬಹುದು ಅಂತ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಇನ್ನೂ ಹೊಸ ವರ್ಷದ ಸಮಯದಲ್ಲಿ ಗ್ರಾಹಕರಿಗೆ ಅನುಕೂಲ ವಾಗಲಿದೆ ಅಂತ ಸಿಹಿ ಉತ್ಪನ್ನ ಗಳ ಜೊತೆಗೆ ನಂದಿನಿ ಚೀಸ್ ಫೆಸ್ಟ್ ಸಹ ಆಯೋಜನೆ ಮಾಡಿದೆ. ಇಂದಿನಿಂದ ಸುಮಾರು45 ದಿನಗಳ ಅವಧಿಗೆ ಎಲ್ಲಾ ಚೀಸ್ ಉತ್ಪನ್ನ ಗಳ ಮಾರಟ ದರ ಶೇ.5ರ ರಷ್ಟು ರಿಯಾಯಿತಿ ಯನ್ನ ನೀಡಲಾಗುತ್ತದೆ. ನಂದಿನಿ ಚೀಸ್ ಅತ್ಯುತ್ತಮ ಹಾಲಿನ ಉತ್ಪನ್ನವಾಗಿದ್ದು, ಅದರಲ್ಲಿ ಕ್ಯಾಲ್ಸಿಯಂ ಮತ್ತು ಮಿಟಮಿನ್ ಹೆಚ್ಚಾಗಿದ್ದು, ಹಲ್ಲುಗಳು ಹಾಗೂ ಸ್ನಾಯುಗಳನ್ನ ಬಲಪಡುಸಲು ಇದು ಸಹಕಾರಿ. ಅಲ್ಲದೆ ಕೀಲು ನೋವು ಮೂಳೆಸವೆತ,ಮೈಗ್ರೇನ್ ತಡೆಗಟ್ಟುತ್ತದೆ. ಜೊತೆಗೆ ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ. ರಾಜ್ಯಾದ್ಯಂತ ರಿಯಾಯಿತಿ ಗ್ರಾಹಕರಿಗೆ ಸಿಗಲಿದೆ. ನಂದಿನಿಸಿಹಿ ಉತ್ಸವ ಜತೆಗೆ ನಂದಿನಿ ಚೀಸ್ ಫೆಸ್ಟ್ ಕೂಡ ಆರಂಭವಾಗಿದ್ದು,

ಒಟ್ಟಿನಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ಜನರ ಅಚ್ಚುಮೆಚ್ಚಿನ ಬ್ರ್ಯಾಂಡ್ ಆಗಿರುವ ಕೆಎಂಎಫ್ ಹೊಸ ವರ್ಷ ಸಂದರ್ಭದಲ್ಲಿ ನಂದಿನಿ ಸಹಿ ಉತ್ಸವ ಹಾಗೂ ನಂದಿನಿ ಚೀಸ್ ಫೆಸ್ಟ್ ಆಯೋಜನೆ ಮಾಡುವ ಮೂಲಕ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಗ್ರಾಹಕರು ನೆಚ್ಚಿನ ಬ್ರ್ತಾಂಡ್ ನ್ನ ಸದುಪಯೋಗ ಪಡಿಸಿಕೊಳ್ಳಿ ಅಂತ ಕೆಎಂಎಫ್ ಮನವಿ ಮಾಡಿದೆ.

Next Story

RELATED STORIES