Top

ನಮ್ಮ ಕುಟುಂಬದ ರಾಜಕಾರಣ ಆರಂಭ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ಮಾತು

ಹರದನಹಳ್ಳಿ ಆಂಜನೇಯ ಸೇವಾ ಸೊಸೈಟಿಯಿಂದ ನಮ್ಮ ಕುಟುಂಬದ ರಾಜಕಾರಣ ಆರಂಭ ಆಯ್ತು.

ನಮ್ಮ ಕುಟುಂಬದ ರಾಜಕಾರಣ ಆರಂಭ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ಮಾತು
X

ಬೆಂಗಳೂರು: ಹರದನಹಳ್ಳಿ ಆಂಜನೇಯ ಸೇವಾ ಸೊಸೈಟಿಯಿಂದ ನಮ್ಮ ಕುಟುಂಬದ ರಾಜಕಾರಣ ಆರಂಭ ಆಯ್ತು. ಅಲ್ಲಿಂದ ಕೆಂಪುಕೋಟೆವರೆಗೂ ನಮ್ಮ ಕುಟುಂಬ ರಾಜಕಾರಣ ಮಾಡಿದ್ದೇವೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಗುರುವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಈಗಲೂ ಸಹ ದೊಡ್ಡ ಚುನಾವಣೆ ಇರಲಿ, ಸಣ್ಣ ಚುನಾವಣೆ ಇರಲಿ ನಮ್ಮ ಜವಬ್ದಾರಿ ನಿರ್ವಹಿಸುತ್ತೇವೆ. ಸೋಲು-ಗೆಲುವು ಬೇರೆ ವಿಚಾರ. ಕಾರ್ಯಕರ್ತರಿಗೆ ಉತ್ಸಾಹ ತುಂಬಲು ನಾವು ಪ್ರತಿ ಚುನಾವಣೆಯಲ್ಲಿ ಭಾಗಿಯಾಗಿದ್ದೇನೆ. ಇದು ನಮ್ಮ ಕುಟುಂಬದ ಗುಣ ಎಂದಿದ್ದಾರೆ.

ಅದೇ ಕಾರಣದಿಂದ ಮೈಮುಲ್ ಚುನಾವಣೆಯಲ್ಲಿ ಭಾಗಿಯಾಗಿದ್ದೇವೆ. ಇಲ್ಲಿ ಯಾರ ಪ್ರತಿಷ್ಠೆಯ ವಿರುದ್ದವು ನಾವು ಚುನಾವಣೆ ನಡೆಸುತ್ತಿಲ್ಲ. ಕಾರ್ಯಕರ್ತರಿಗೆ ಉತ್ಸಾಹ ತುಂಬು ಶಕ್ತಿ ಎಷ್ಟಿದೆ ಅಂತ ತೋರಿಸಲು ಈ ಚುನಾವಣೆಯಲ್ಲಿ ಭಾಗಿ ಆಗುತ್ತಿದ್ದೇನೆ ಎಂದು ಹೇಳಿದರು.

ಮೈಮುಲ್ ಚುನಾವಣೆಯಲ್ಲಿ ನಾನು ನೇರವಾಗಿ ಭಾಗಿ ಆಗುತ್ತೇನೆ. ಮತ ಕೇಳಲು ನಾನು ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ, ಹುಣಸೂರಿಗೆ ಭೇಟಿ ನೀಡುತ್ತೇನೆ. ಸಹಕಾರಿ ಕ್ಷೇತ್ರದ ಚುನಾವಣಾ ಪ್ರಚಾರಕ್ಕೂ ಭಾಗಿಯಾಗುತ್ತೇನೆ. ಇದೇ ಶನಿವಾರ ಮೈಮುಲ್ ಚುನಾವಣಾ ಪ್ರಚಾರಕ್ಕಾಗಿ ಮೈಸೂರಿಗೆ ಬರ್ತಿನಿ. ನಾನು ಯಾವುದೇ ಪ್ರತಿಷ್ಠೆಗೋಸ್ಕರ ಈ ಚುನಾವಣೆಯಲ್ಲಿ ಭಾಗಿ ಆಗುತ್ತಿಲ್ಲ. ಇಲ್ಲಿನ ವ್ಯವಸ್ಥೆ ಸರಿಪಡಿಸಲು ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಹೆಚ್ಡಿಕೆ ಅವರು ಹೇಳಿದ್ದಾರೆ.

Next Story

RELATED STORIES