Top

ಪಕ್ಷದಿಂದ ದೂರ ಉಳಿದ ಶಾಸಕರಿಗೆ ಮಾಜಿ ಸಿಎಂ ಹೆಚ್ಡಿಕೆ ಟಾಂಗ್​

ನನ್ನ ಮುಂದಿರೋದು ಪಕ್ಷ ಸಂಘಟನೆ ಮಾತ್ರ. ಕಾರ್ಯಕರ್ತರ ಜೊತೆ ಸೇರಿ ಪಕ್ಷ ಸಂಘಟನೆ ನನ್ನ ಗುರಿ

ಪಕ್ಷದಿಂದ ದೂರ ಉಳಿದ ಶಾಸಕರಿಗೆ ಮಾಜಿ ಸಿಎಂ ಹೆಚ್ಡಿಕೆ ಟಾಂಗ್​
X

ಬೆಂಗಳೂರು: ಪಕ್ಷದ ಕೆಲವು ಶಾಸಕರು ತುಂಬ ದೂರ ಹೋಗಿದ್ದಾರೆ. ಅವರ ಬಗ್ಗೆ ನಾನು ಪದೇ ಪದೇ ಮಾತನಾಡಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಶನಿವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಈಗಾಗಲೇ ಹಲವರು ಅವರ ಜೊತೆ ಮಾತನಾಡಿದ್ದಾರೆ. ಅದರ ಬಗ್ಗೆ ನಾನು ಚಿಂತೆ ಮಾಡಲ್ಲ, ನನ್ನ ಮುಂದಿರೋದು ಪಕ್ಷ ಸಂಘಟನೆ ಮಾತ್ರ. ಕಾರ್ಯಕರ್ತರ ಜೊತೆ ಸೇರಿ ಪಕ್ಷ ಸಂಘಟನೆ ನನ್ನ ಗುರಿ ಎಂದು ಹೆಚ್ಡಿಕೆ ಅವರು ಪಕ್ಷದಿಂದ ದೂರ ಉಳಿದ ಶಾಸಕರಿಗೆ ಟಾಂಗ್ ಕೊಟ್ಟಿದ್ದಾರೆ.

ಮೀಸಲಾತಿಗಾಗಿ ಶ್ರೀಗಳ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಸ್ವಾಮೀಜಿಗಳು ಹೋರಾಟ ಮಾಡುತ್ತಿದ್ದಾರೆ. ಅವರ ಬೇಡಿಕೆಗಳ ಬಗ್ಗೆ ಸರ್ಕಾರ ನಿರ್ಧಾರ ಮಾಡಬೇಕು. ಹೇಗೆ ಬೇಡಿಕೆ ಈಡೇರಿಸಬೇಕೆಂಬ ಬಗ್ಗೆ ನಿರ್ಧರಿಸಬೇಕು. ತಜ್ಞರ ಜೊತೆ ಚರ್ಚಿಸಿ, ತೀರ್ಮಾನ ಮಾಡಬೇಕು ಎಂದು ಹೆಚ್ಡಿಕೆ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Next Story

RELATED STORIES