Top

ಇನ್ನೆರಡು ವರ್ಷದಲ್ಲಿ ನಾವು ವಾಪಸ್ ಬರ್ತಿವಿ - ಸಿದ್ದರಾಮಯ್ಯ ವಿಶ್ವಾಸ

ಇನ್ನೆರಡು ವರ್ಷದಲ್ಲಿ ನಾವು ವಾಪಸ್ ಬರ್ತಿವಿ. ಶೇ.100 ವೀ​ ವಿಲ್​ ಕಂ ಬ್ಯಾಕ್ ​(we will come back) ಅದರಲ್ಲಿ ಅನುಮಾನವೇ ಬೇಡ

ಇನ್ನೆರಡು ವರ್ಷದಲ್ಲಿ ನಾವು ವಾಪಸ್ ಬರ್ತಿವಿ - ಸಿದ್ದರಾಮಯ್ಯ ವಿಶ್ವಾಸ
X

ಮೈಸೂರು: ನಾನು ಹೋದ ಮೇಲೆ ಮಾತನಾಡಬಹುದು. ನಾನು ಇನ್ನೊಂದು ಕಾರ್ಯಕ್ರಮಕ್ಕೆ ಹೋಗಬೇಕಿದೆ. ಹೀಗಾಗಿ ಹುಣಸೂರಿಗೆ ಹೋಗುತ್ತೀನಿ. ನಾನು ಹೋದ ಮೇಲೆ ಉಳಿದವರು ಮಾತನಾಡಲಿ. ಸಚಿವ ಆರ್.ಶಂಕರ್ ಅವರು ನಾನು ಹೋದ ಮೇಲೆ ಮಾತನಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಗಂಧನಹಳ್ಳಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿಂದು ಮಾತನಾಡಿರು ಅವರು, ನಾನು ಲಾಯರ್ ಆಗಿದ್ದಾಗಲೂ ಗಂಧನಹಳ್ಳಿ ಗೊತ್ತು. ಆಗ ಮೂವರು ನಾಯಕರು ಇದ್ದರು ಆದರೆ ಒಬ್ಬರನ್ನೊಬ್ಬರು ಕಂಡ್ರೆ ಆಗುತ್ತಿರಲಿಲ್ಲ ಅದಕ್ಕೆ ಅವರ ಒಟ್ಟಿಗೆ ಸೇರಿಸಿದ್ರೆ ವಿಧಾನ ಸಭೆ ಗೆಲ್ಲಬಹುದು ಅಂತ ಇಲ್ಲಿದೆ ಬಂದಿದೆ. ಅವರನ್ನ ಒಟ್ಟಾಗಿಸೋ ದಿನ ಮರಿ ಹೊಡೆದು ಮಾಂಸದ ಊಟ ಹಾಕಿದರು. ಹೀಗಾಗಿ ಈ ಗ್ರಾಮದ ಜೊತೆ ನನಗೆ ನಿಕಟ ಸಂಪರ್ಕ ಇದೆ ಎಂದು ಹಳೆಯ ದಿನಗಳನ್ನು ನೆನೆದರು.

ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಗೇರಿಲ್ಲ ಯುದ್ದ ಮಾಡಿ ಬ್ರಿಟಷರಿಗೆ ಕಾಡಿದ್ದರು. ಅವರನ್ನ ಹಿಡಿಯೋಕೆ ಆಗುತ್ತಿರಲೇ ಇಲ್ಲ. ಆದರೆ, ನಮ್ಮವರೇ ಯಾರೋ ಅವರನ್ನ ಹಿಡಿಯೋಕೆ ಸಹಾಯ ಮಾಡಿಬಿಟ್ಟರು. ಇಂತಹ ದೇಶದ್ರೋಹಿಗಳು ಆಗಿನಿಂದಲೂ ಇದ್ದಾರೆ. ಕೊನೆಗೆ ಅವರನ್ನ ಬ್ರಿಟಿಷರು ಅವರನ್ನ ಗಲ್ಲಿಗೇರಿಸಿದರು. ಅವರು ಹುಟ್ಟಿದ್ದು ಆಗಸ್ಟ್ 15ರಂದು. ಅವರನ್ನ ಗಲ್ಲಿಗೇರಿಸಿದ್ದು ಜನವರಿ 26ರಂದು. ಎರಡು ದಿನ ನಮ್ಮ ದೇಶಕ್ಕೆ ಅತ್ಯಂತ ವಿಶೇಷ ದಿನಗಳು. ಹೇ.. ನಿಮಗೆ ಗೊತ್ತಾ ಈ ದಿನಗಳು(?) ಸುಮ್ಮನೆ ಗೊತ್ತಿಲ್ಲದೆ ಮಾತನಾಡಬೇಡಿ. ಕೆಲವರಿಗೆ ಗೊತ್ತಿರೋಲ್ಲ ಆದ್ರೂ ತಲೆ ಅಲ್ಲಾಡಿಸಿ ಬಿಡ್ತಾರೆ. ತಿಳ್ಕೋಬೇಕು ಇದನ್ನೆಲ್ಲ ಗೊತ್ತಾಯ್ತಾ(?) ಎಂದು ಸಿದ್ದರಾಮಯ್ಯ ಅವರು ಸಭೆಯಲ್ಲಿದ್ದವರನ್ನ ನಗೆಗಡಲಲ್ಲಿ ತೇಲಿಸಿದರು.

ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿಮ್ಮೂರಿನಲ್ಲಿ ನಿರ್ಮಾಣ ಆಗಿದೆ. ಅವರನ ಪ್ರತಿಮೆನಾ ಯಾಕೆ ನಿರ್ಮಾಣ ಮಾಡ್ತಾರೆ ಗೊತ್ತಾ(?) ಅವರಂತೆ ದೇಶ ಪ್ರೇಮ ಹುಟ್ಟಲಿ ಅಂತ. ಕುರುಬ ಜಾತಿಯಲ್ಲಿ ಹುಟ್ಟಿದಕ್ಕೆ ಅವರ ಪ್ರತಿಮೆ ಮಾಡೋದಲ್ಲ. ಅವರೇನು ಅರ್ಜಿ ಹಾಕೊಂಡು ಕುರುಬ ಜಾತಿಯಲ್ಲಿ ಹುಟ್ಟಿರಲಿಲ್ಲ ಇದನ್ನ ಅರ್ಥ ಮಾಡಿಕೊಳ್ಳಿ ಎಂದು ಹೇಳಿದರು.

ಇನ್ನೆರಡು ವರ್ಷದಲ್ಲಿ ನಾವು ವಾಪಸ್ ಬರ್ತಿವಿ. ಶೇ.100 ವಿವ್​ ವಿಲ್​ ಕಂ ಬ್ಯಾಕ್ ​(we will come back) ಅದರಲ್ಲಿ ಅನುಮಾನವೇ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏಯ್​ ಶಂಕರ್ ಸಂಗೊಳ್ಳಿ ರಾಯಣ್ಣನ ಪ್ರಾಧಿಕಾರಕ್ಕೆ ದುಡ್ಡು ಬಿಡುಗಡೆ ಮಾಡಿಸಪ್ಪ. ನೀವು ಮೂರು ಜನ ಮಂತ್ರಿಗಳಿದ್ದೀರಿ. ಎಲ್ಲ ಸೇರಿಕೊಂಡು ಬಿಡುಗಡೆ ಮಾಡಿಸಿ. ಸಭೆಯಲ್ಲಿದ್ದವರಿಂದ ನಾಲ್ಕು ಜನ ಕುರುಬ ಮಂತ್ರಿಗಳು ಸರ್ ಎಂದು ಸಿದ್ದರಾಮಯ್ಯಗೆ ಮಾಹಿತಿ ಕೊಡುತ್ತಿದಂತೆ, ಇನ್ನೊಬ್ಬ ಯಾರಯ್ಯ ಓಹ್ ಆ ಈಶ್ವರಪ್ಪ ನಾ(?) ಸರಿ ಸರಿ ನಾಲ್ಕು ಜನ ಕುರುಬ ಮಂತ್ರಿಗಳಿದ್ದಿರಾ(?) ಎಲ್ಲರೂ ಸೇರಿಕೊಂಡು ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಹಣ ಬಿಡುಗಡೆ ಮಾಡಿಸಿ. ಇನ್ನೆರಡು ವರ್ಷದಲ್ಲಿ ಬಿಡುಗಡೆ ಮಾಡಿಸದಿದ್ದರೆ ನಾನೇ ಬಂದು ಬಿಡುಗಡೆ ಮಾಡುತ್ತೇನೆ ಎಂದರು.

ಅವನ್ಯಾರೋ ಹೊಸ ಆಹಾರ ಮಂತ್ರಿ ಬಂದಿದ್ದಾನೆ. ಅದೆಂತೋ ಕತ್ತಿಯಂತೆ ನಂಗೋತ್ತಿಲ್ಲ ಅದ್ಯಾವ ಕತ್ತಿ ಅವನು ಅಂತ. ಅವನಿಗೇನು ಕಾಮನ್ ಸೆನ್ಸ್ ಇದ್ಯಾ(?) ಟಿವಿ, ಸ್ಕೂಟರ್, ಫ್ರೀಡ್ಜ್ ಇದ್ದವರ ಮನೆಗೆ ಬಿಪಿಎಲ್ ಕಾರ್ಡ್ ಕೊಡೋಲ್ಲ ಅಂತಾನೆ. ಎರಡೂವರೆಯಿಂದ ಮೂರು ಸಾವಿರ ಕೊಟ್ರೆ ಒಂದು ಟಿವಿ ಬರುತ್ತೆ. ಅದಕ್ಕೂ ಇಎಂಐ ಕೊಡ್ತಾರೆ. ಇಎಂಐನಲ್ಲಿ ಟಿವಿ ತಗೋತಾರಪ್ಪ ಅದಕ್ಕೆ ಕಾರ್ಡ್ ನಿಲ್ಲಿಸೋದಾ(?) ಯಾರಯ್ಯ ಅವನು(?) ಎಂದು ವೇದಿಕೆ ಮೇಲಿದ್ದ ಆರ್.ಶಂಕರ್​ ಅವರನ್ನು ಪ್ರಶ್ನಿಸಿದರು.

ನನಗೆ ಬೇಸರವಾಗಿದ್ದು ನಾನು 7 ಕೆಜಿ ಅಕ್ಕಿ ಕೊಟ್ಟಿದ್ದನ್ನ ಈಗ 3 ಕೆಜಿಗೆ ಇಳಿಸಿದ್ದಾರೆ. ಯಾಕಪ್ಪ ಅಂತ ಕೇಳಿದ್ರೆ ಕೊರೊನಾ ಸರ್ ಅಂತಾರೆ. ಕೊರೊನಾಗೂ ಅಕ್ಕಿ ಕೊಡೋಕು ಏನ್ ಸಂಬಂಧ(?) ಅದಕ್ಕೆ ಇನ್ನೆರಡು ವರ್ಷದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರ್ತಿವಿ. ಆಗ ಒಬ್ಬರಿಗೆ 10 ಕೆಜಿ ಅಕ್ಕಿ ಕೊಡುತ್ತೇನೆ. ಅದೇಷ್ಟು ಹಣ ಖರ್ಚಾದರು ಪರವಾಗಿಲ್ಲ. ವಿಜಯಶಂಕರ್ ಕೇಳಿಸಿಕೊಳ್ಳಿ ಹಣ ಮುಖ್ಯವಲ್ಲ ರೀ. ಜನರಿಗೆ ಅಕ್ಕಿ ಕೊಡೋದು ಮುಖ್ಯ. ನಾವು ಮುಂದಿನ ಬಾರಿ ಅಧಿಕಾರಕ್ಕೆ ಬರೋದು ಗ್ಯಾರೆಂಟಿ. ಆಗ ಈ ಊರಿಗೆ ಬೇಕಾದ ಎಲ್ಲ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಡುತ್ತೇವೆ. ನಾನೇ ಬಂದು ಎಲ್ಲ ರೀತಿಯ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕನಕದಾಸರು ಭಕ್ತಿಯ ಸಂಕೇತ. ಸಂಗೋಳ್ಳಿ ರಾಯಣ್ಣ ದೇಶ ಭಕ್ತಿಯ ಸಂಕೇತ. ರಾಯಣ್ಣಗೆ ದೇಶಪ್ರೇಮದಲ್ಲಿ ಸರಿಸಾಟಿ ಯಾರೂ ಇಲ್ಲ. ಅವರು ಒಬ್ಬ ನಂಬಿಕಸ್ಥ. ಅವನಂತಹ ನಂಬಿಕಸ್ಥ ಸಿಗೋದು ಕಷ್ಟ. ಇತ್ತೀಚಿನ ದಿನಗಳಲ್ಲಿ ನಂಬಿಕಸ್ಥರು ಕಡಿಮೆ ಆಗಿದ್ದಾರೆ. ಎಲ್ಲರೂ ಉಪಕಾರ ಮಾಡಿಸಿಕೊಳ್ತಾರೆ. ಆ ನಂತರ ಕೈ ಕೊಟ್ಟು ಬಿಡ್ತಾರೆ ಎಂದು ಗಂಧನಹಳ್ಳಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.

Next Story

RELATED STORIES