Top

ಜನರಿಗೆ, ನಮಗೆ ಪ್ರತಿ ದಿನ ಹೂ ಮುಡಿಸಲು ಆಗೋಲ್ಲ - ಮಾಜಿ ಸಿಎಂ ಹೆಚ್ಡಿಕೆ

ಉಚ್ಚಾಟಿಸಿದ್ರೆ ಅನುಕಂಪ ಗಿಟ್ಟಿಸಿಕೊಳ್ಳುವ ವಾತಾವರಣ ಸೃಷ್ಠಿ ಮಾಡ್ತಾರೆ. ಉಚ್ಚಾಟನೆ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ

ಜನರಿಗೆ, ನಮಗೆ ಪ್ರತಿ ದಿನ ಹೂ ಮುಡಿಸಲು ಆಗೋಲ್ಲ - ಮಾಜಿ ಸಿಎಂ ಹೆಚ್ಡಿಕೆ
X

ಮೈಸೂರು: ಜನರಿಗೆ, ನಮಗೆ ಪ್ರತಿ ದಿನ ಹೂ ಮುಡಿಸಲು ಆಗೋಲ್ಲ, ಇವರ ಪಕ್ಷ ನಿಷ್ಠೆ ಎಷ್ಟಿದೆ ಅಂತ ಕಾರ್ಯಕರ್ತರಿಗೆ ಗೊತ್ತಾಗಲಿದೆ ಎಂದು ಮಾಜಿ ಸಿಎಂ ಹೆಚ್​ ಡಿ.ಕುಮಾರಸ್ವಾಮಿ ಅವರು ಜಿ.ಟಿ ದೇವೇಗೌಡ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಜಿಟಿಡಿ ಬಗ್ಗೆ ನಾವು ಏನನ್ನು ತೀರ್ಮಾನ ಮಾಡಿಲ್ಲ. ಅವರೇ ಹೇಳಿದ್ದರು. ಪಕ್ಷ ಸಂಘಟನೆಗೆ ಸಮಯ ಕೊಟ್ಟಿರಲಿಲ್ಲ ಅಂತ. ಈಗ ಸಚಿವ ಸ್ಥಾನ ಇಲ್ಲ ಅದಕ್ಕೆ ಕ್ಷೇತ್ರದ ಕೆಲಸ ಮಾಡುತ್ತಿದ್ದಾರೆ. ಮಾಡಿಕೊಂಡು ಇರಲಿ, ಅವರ ಬಗ್ಗೆ ನಾನೇನು ವ್ಯಂಗ್ಯ ಮಾಡುತ್ತಿಲ್ಲ ಎಂದರು.

ಇನ್ನು ಮೈದಾನ ದೊಡ್ಡದಾಗಿದೆ ಯಾರಾದ್ರು ಕಾರ್ಯಕ್ರಮ ಮಾಡಬಹುದು. ಆದರೆ, ಪ್ರತಿ ದಿನ ನಮಗೆ ಹೂ ಮುಡಿಸಲು ಆಗೋಲ್ಲ. ಸಾ.ರಾ. ವಿರುದ್ದ ಸ್ಪರ್ಧಿಸಿದ್ದ ಅಭ್ಯರ್ಥಿ ಜೊತೆ ಮೆರವಣಿಗೆ ಹೋಗ್ತಾರೆ. ಹಾಗಾದ್ರೆ ಇವರಿಗೆ ಪಕ್ಷ ನಿಷ್ಟೆ ಎಷ್ಟಿದೆ ಅಂತ ಕಾರ್ಯಕರ್ತರು ಮಾತನಾಡೋದಿಲ್ವಾ(?) ಅವರದ್ದೆ ದೊಡ್ಡ ಶಕ್ತಿ ಇದೆ. ಅವರು ಶಕ್ತಿ ಪ್ರದರ್ಶನ ಮಾಡಿಕೊಂಡು ಅವರ ದಾರಿಲೀ ಹೋಗಲಿ. ನಾವು ನಮ್ಮ ದಾರಿಲಿ ಹೋಗುತ್ತೇವೆ ಎಂದಿದ್ದಾರೆ.

ನಾನು ಪಕ್ಷಕ್ಕಿಂತ ಬೆಳೆದಿದ್ದೇನೆ ಅಂತ ಅವರು ಅಂದುಕೊಂಡಿದ್ದಾರೆ. ಆದರೆ, ಪಕ್ಷಕ್ಕಿಂತ ಬೆಳೆಯೋಕೆ ಅವರಿಗು ಆಗೋಲ್ಲ ನನಗೂ ಆಗೋಲ್ಲ. ಕೆ.ಆರ್.ನಗರದಲ್ಲಿ ಸಹಕಾರಿ ಬ್ಯಾಂಕಿನ ಕಾರ್ಯಕ್ರಮ ಆಗಿದರು ಬ್ಯಾಂಕಿಗೆ ಸರ್ಕಾರದ ಶೇರು ಇರುತ್ತೆ. ಹಾಗಾದ್ರೆ ಆ ಸರ್ಕಾರಿ ಕಾರ್ಯಕ್ರಮಕ್ಕೆ ಶಾಸಕರಿಗೆ ಆಹ್ವಾನ ನೀಡಬೇಕು. ಮೊನ್ನೆ ಶರತ್ ಬಚ್ಚೇಗೌಡರ ಕಾರ್ಯಕ್ರಮದ ಹಕ್ಕುಚ್ಯುತಿ ನೋಡಿಲ್ಲವೇ(?) ಅವರು ಬೆಳೆದಿದ್ದಿದ್ದಾರೆ ಅವರಿಲ್ಲಿದಿದ್ದರೆ ಜಿಲ್ಲೆಯ ರಾಜಕಾರಣವೇ ನಡೆಯೋಲ್ಲ. ಅವರಿಂದ ಪಕ್ಷಕ್ಕೆ ಡ್ಯಾಮೇಜ್ ಆಗೋಲ್ಲ. 2008ರಲ್ಲಿ ಏನಾಯ್ತು ಅಂತ ಗೊತ್ತಿಲ್ಲವೇ. ಡ್ಯಾಮೆಜ್ ಆಗಿದ್ದು ಪಕ್ಷಕ್ಕಲ್ಲ ಯಾರಿಗೆ ಡ್ಯಾಮೆಜ್ ಆಯ್ತು ಅಂತ ಇತಿಹಾಸ ಇದೆ ಎಂದು ಜಿಟಿಡಿ ವಿರುದ್ಧ ನೇರವಾಗಿ ಟಾಂಗ್​ ಕೊಟ್ಟಿದ್ದಾರೆ.

ಜೆಡಿಎಸ್​ನಿಂದ ಜಿಟಿಡಿಯನ್ನು ಉಚ್ಚಾಟನೆ ಮಾಡುವ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಉಚ್ಚಾಟಿಸಿದ್ರೆ ಅನುಕಂಪ ಗಿಟ್ಟಿಸಿಕೊಳ್ಳುವ ವಾತಾವರಣ ಸೃಷ್ಠಿ ಮಾಡ್ತಾರೆ. ಉಚ್ಚಾಟನೆ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ. ಆದರೆ, ಮೈಸೂರು ಭಾಗದ ಬೆಳಗವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಕಾರ್ಯಕರ್ತರೇ ಈ ಬಗ್ಗೆ ತೀರ್ಮಾನ ಮಾಡ್ತಾರೆ. ನಾನು ಉಚ್ಚಾಟನೆ ಮಾಡುದ್ರೆ ಜನರ ಅನುಕಂಪದ ಲಾಭ ಗಿಟ್ಟಿಸಬಹುದೆಂದು ಕಾಯುತ್ತಿದ್ದಾರೆ. ಯಾವಾಗ ಕ್ರಮ ತೆಗೆದುಕೊಳ್ಳಬೇಕು ಅವಾಗ ತಗೊಳ್ತೀನಿ ಎಂದು ಮಾಜಿ ಸಿಎಂ ಹೆಚ್ಡಿಕೆ ಅವರು ಮಾತನಾಡಿದ್ದಾರೆ.

Next Story

RELATED STORIES