Top

ವ್ಯಾಕ್ಸಿನ್ ಡ್ರೈ ರನ್​ಗೆ ಬೆಂಗಳೂರು ಸೇರಿದಂತೆ ಐದು ಜಿಲ್ಲೆ ಆಯ್ಕೆ - ಸಚಿವ ಡಾ.ಕೆ ಸುಧಾಕರ್

ಕೊರೊನಾ ವ್ಯಾಕ್ಸಿನ್ ಅಭಿಯಾನದ ಡ್ರೈ ರನ್, ಟ್ರೈರನ್ ನಾಳೆಯಿಂದ ನಡೆಯಲಿದೆ

ವ್ಯಾಕ್ಸಿನ್ ಡ್ರೈ ರನ್​ಗೆ ಬೆಂಗಳೂರು ಸೇರಿದಂತೆ ಐದು ಜಿಲ್ಲೆ ಆಯ್ಕೆ - ಸಚಿವ ಡಾ.ಕೆ ಸುಧಾಕರ್
X

ಬೆಂಗಳೂರು: ಕೊರೊನಾ ವ್ಯಾಕ್ಸಿನ್ ಅಭಿಯಾನದ ಡ್ರೈ ರನ್, ಟ್ರೈರನ್ ನಾಳೆಯಿಂದ ನಡೆಯಲಿದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಶುಕ್ರವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ವ್ಯಾಕ್ಸಿನ್ ಡ್ರೈ ರನ್​ಗೆ ಐದು ಜಿಲ್ಲೆ ಆಯ್ಕೆ ಮಾಡಲಾಗಿದೆ ಇದಕ್ಕೆ ರಾಜ್ಯದಲ್ಲಿ ಹೆಚ್ಚು ಸಿದ್ಧತೆಗಳು ನಡೆದಿವೆ. ಜಿಲ್ಲಾ ಕೇಂದ್ರ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈರನ್ ನಡೆಯಲಿದೆ ಎಂದರು.

ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಡ್ರೈರನ್ ನಡೆಯಲಿದೆ. ಲಸಿಕೆ ಬಂದ ಕೂಡಲೇ ಜನರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ಇಂದಿನಿಂದ ಶಾಲೆಗಳ ಪ್ರಾರಂಭ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, 10ನೇ, 12ನೇ ತರಗತಿ ಆರಂಭವಾಗಿದೆ. 6 ರಿಂದ 9ರ ವರೆಗೆ ವಿದ್ಯಾಗಮ ಸ್ಟಾರ್ಟ್ ಆಗಲಿದೆ ಎಂದಿದ್ದಾರೆ.

ಇನ್ನು ಶಾಲೆಯಲ್ಲಿ ಆರೋಗ್ಯಕರ ವಾತಾವರಣವನ್ನ ನಿರ್ಮಾಣ ಮಾಡಲಾಗಿದೆ. ಶಿಕ್ಷಣ, ಆರೋಗ್ಯ ಇಲಾಖೆ ಸೇರಿ ಮಾಡಿದ್ದೇವೆ. ಮಕ್ಕಳು ಪೋಷಕರು ಆತಂಕಕ್ಕೆ ಒಳಗಾಗುವುದು ಬೇಡ, ನನಗೂ ಕೂಡ ಸಾಕಷ್ಟು ಪೋಷಕರು ಕರೆ ಮಾಡುತ್ತಿದ್ದಾರೆ. ನಾವು ಎಲ್ಲಾ ಮುಂಜಾಗೃತ ಕ್ರಮ ತೆಗೆದುಕೊಂಡಿದ್ದೇವೆ. ಒಂದು ಪಕ್ಷ ಕೋವಿಡ್ ಕಂಡು ಬಂದರೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ. ಮಕ್ಕಳಿಗೆ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ, ಎಲ್ಲರು ಶಿಕ್ಷಣ ಕಲಿಯಲು ಬರಬೇಕು ಎಂದು ವಿದ್ಯಾರ್ಥಿಗಳಲ್ಲಿ ಸುಧಾಕರ್ ಅವರು ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ 5068 ಜನ ಬ್ರಿಟನ್​ನಿಂದ ಬಂದವರು. 810 ಜನ ಹೊರ ರಾಜ್ಯಗಳ ಪ್ರಯಾಣಿಕರು, ಆಯಾ ರಾಜ್ಯಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. 75 ಜನ ಇನ್ನೂ ಕೂಡ ಸಿಕ್ಕಿಲ್ಲ, ಅವರ ಹುಡುಕಾಟ ನಡೆಸಿದ್ದೇವೆ. ಇದರಲ್ಲಿ 70 ಜನ ಬೆಂಗಳೂರಿನವರು. ಐವರು ಬೇರೆ ಜಿಲ್ಲೆಗಳ ಪ್ರಯಾಣಿಕರಿದ್ದಾರೆ. ಗೃಹ ಇಲಾಖೆ ಇಂದು ಸಂಜೆಯೊಳಗೆ ಹುಡಕಲಿದೆ. ಇಲ್ಲಿಯವರೆಗೆ 33 ಜನರಿಗೆ ಪಾಸಿಟಿವ್ ಬಂದಿದೆ. ಐವರಿಗೆ ಪ್ರಾಥಮಿಕ, ದ್ವಿತೀಯ ಕಾಂಟ್ಯಾಕ್ಟ್​ನಿಂದ ಪಾಸಿಟಿವ್ ಆಗಿದೆ. 7 ಜನರಿಗೆ ರೂಪಾಂತರ ವೈರಸ್ ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ತಿಳಿಸಿದರು.

Next Story

RELATED STORIES