Top

ಮೆಡಿಕಲ್ ಫಿಟ್ನೆಸ್ ಇಲ್ಲದ ನೌಕರರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ, ಇದು ಸರಿನಾ - ಕೋಡಿಹಳ್ಳಿ ಚಂದ್ರಶೇಖರ್​ ಪ್ರಶ್ನೆ

ಇಂದು ಒಂದು ಗಂಟೆಗೆ ಗಾಂಧಿನಗರದ ಕಚೇರಿಯಲ್ಲಿ ಸಭೆ ಇದೆ

ಮೆಡಿಕಲ್ ಫಿಟ್ನೆಸ್ ಇಲ್ಲದ ನೌಕರರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ, ಇದು ಸರಿನಾ - ಕೋಡಿಹಳ್ಳಿ ಚಂದ್ರಶೇಖರ್​ ಪ್ರಶ್ನೆ
X

ಬೆಂಗಳೂರು: ಇಂದು ಒಂದು ಗಂಟೆಗೆ ಗಾಂಧಿನಗರದ ಕಚೇರಿಯಲ್ಲಿ ಸಭೆ ಇದೆ. ಸಭೆಯಲ್ಲಿ ಸಾರಿಗೆ ನೌಕರರ ಮುಖಂಡರು ಭಾಗಿಯಾಗುತ್ತಾರೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸರ್ಕಾರದ ನಡವಳಿಕೆ ಹಾಗೂ ಸರ್ಕಾರ ಮಾತುಕತೆಗೆ ಕರೆದ್ರೆ, ಯಾವ ಅಂಶಗಳನ್ನ ಮುಂದಿಟ್ಟು ಮಾತನಾಡಬೇಕು. ಸರ್ಕಾರ ತಿರಸ್ಕರಿಸಿದ್ರೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎನ್ನುವುದ ಬಗ್ಗೆ ಮಾತುಕತೆ ನಡೆಯಲಿದೆ ಎಂದರು.

ಸದ್ಯ ಮೆಡಿಕಲ್ ಫಿಟ್ನೆಸ್ ಇಲ್ಲದ ನೌಕರರು ಕೆಲಸಕ್ಕೆ ಹಾಜರುತಿದ್ದಾರೆ, ಇದು ಸರಿನಾ(?) ಮುಂದೆ ಪ್ರತಿಭಟನಾ ಹಾದಿ ಹೇಗಿರಬೇಕು(?) ನಾಳೆಯು ಬಸ್ ಮುಷ್ಕರ ಮಾಡಬೇಕಾ(?) ಸಂಧಾನಕ್ಕೆ ಕರಿಲಿಲ್ಲ ಅಂದ್ರೆ ಮುಂದೆ ಹೇಗೆ(?) ಹೀಗೆ ಹಲವು ವಿಚಾರಗಳು ಚರ್ಚೆ ಆಗುತ್ತೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಾರಿಗೆ ನೌಕರರಿಗೆ ಬೆಂಬಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿ ಶಾಸಕರು ಸಂಸದರು ಬಂದು ಬೆಂಬಲ ಕೊಡಲಿ. ಯಾವುದೇ ಸಾರ್ವಜನಿಕರು ಬಂದು ಬೆಂಬಲ ಕೊಟ್ರು ಖುಷಿನೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Next Story

RELATED STORIES