Top

ಪದೇಪದೇ ಅದೇ ವಿಚಾರ ಕೇಳಿದ್ರೆ ನಿಮ್ಮ ಜೊತೆನು ಮಾತನಾಡಲ್ಲ - ಸಚಿವ ರಮೇಶ್ ಜಾರಕಿಹೊಳಿ

ಚೀನಾ, ಅಮೆರಿಕಾ ನಂತರ ಗೋಕಾಕ್ ಫಾಲ್ಸ್​ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ

ಪದೇಪದೇ ಅದೇ ವಿಚಾರ ಕೇಳಿದ್ರೆ ನಿಮ್ಮ ಜೊತೆನು ಮಾತನಾಡಲ್ಲ - ಸಚಿವ ರಮೇಶ್ ಜಾರಕಿಹೊಳಿ
X

ಬೆಳಗಾವಿ: ಗೋವಾ ಆರೋಪವನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಕರ್ನಾಟಕ ಯಾವುದೇ ಕಾನೂನು ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಸೋಮವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಹದಾಯಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಜಂಟಿ ಸಮಿತಿ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯೋಜನೆ ಬಗ್ಗೆ ಈಗಾಗಲೇ ಡಿಪಿಆರ್ ಮಾಡಲಾಗಿದೆ. ಅಂತರರಾಜ್ಯ ಇರೋದರದಿಂದ ನೀರು ತೆಗೆದಕೊಳ್ಳಲು ಬರಲ್ಲ. ಯೋಜನೆಗೆ CWC ಅನುಮತಿ ಅಗತ್ಯವಿದೆ. ಪಕ್ಷ ಬರಲ್ಲ ರಾಜ್ಯದ ಹಿತ ಮುಖ್ಯವಾಗುತ್ತದೆ. ಮಹದಾಯಿ ವಿಚಾರದಲ್ಲಿ ಜನರಿಗೆ ಯಾವುದೇ ಆತಂಕ ಬೇಡ. ಮೂರು ಜನ ಸದಸ್ಯ ತಂಡ ಸುಪ್ರೀಂ ಕೋರ್ಟ್ ವರದಿ ಸಲ್ಲಿಕೆ ಮಾಡಲಿದೆ. ಈ ವರದಿಯಲ್ಲಿ ರಾಜ್ಯಕ್ಕೆ ನ್ಯಾಯ ಸಿಗಲಿದೆ. ಕರ್ನಾಟಕ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಜಲಶಕ್ತಿ ಸಚಿವರು ಕರ್ನಾಟಕ, ಗೋವಾ ಜಂಟಿ ಸಭೆ ಮಾಡಲಿದ್ದಾರೆ. ಮಾತುಕತೆ ಮೂಲಕ ವಿವಾದ ಇತ್ಯರ್ಥಕ್ಕೆ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ.

ಉಪಚುನಾವಣೆ, ಬಜೆಟ್ ಅಧಿವೇಶನ ಮುಗಿದ ಬಳಿಕ ಸಭೆ. ಹೆಬ್ಬಾಳ್ಕರ್ ಆರೋಪದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಪದೇ ಪದೇ ಅದೇ ವಿಚಾರ ಕೇಳಿದ್ರೆ ನಿಮ್ಮ ಜತೆನು ಮಾತನಾಡಲ್ಲ. ಗೋಕಾಕ್ ಫಾಲ್ಸ್​ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಯೋಜನೆ. ಚೀನಾ, ಅಮೆರಿಕಾ ನಂತರ ಗೋಕಾಕ್ ಫಾಲ್ಸ್​ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾಗಲಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ಮಾತನಾದಿದ್ದಾರೆ

Next Story

RELATED STORIES