Top

'ನೀವೂ ದೇವಭಕ್ತರು ನೀವು ರಾಮಮಂದಿರಕ್ಕೆ ಉದಾರ ದೇಣಿಗೆ ಕೊಡಿ'

ಮನೆಗಳಿಗೆ ಮಾರ್ಕ್ ಮಾಡುತ್ತಿದ್ರೆ ಎಲ್ಲಿ ಅಂತ ತೋರಿಸಿ, ದಾಖಲೆ ಕೊಡಿ, ವಿಷಯಾಂತರ ಮಾಡಬೇಡಿ

ನೀವೂ ದೇವಭಕ್ತರು ನೀವು ರಾಮಮಂದಿರಕ್ಕೆ ಉದಾರ ದೇಣಿಗೆ ಕೊಡಿ
X

ಬೆಂಗಳೂರು: ಸಂಘ ಪರಿವಾರದವರನ್ನ ಹಿಟ್ಲರ್ ಗೇಕೆ ಹೋಲಿಸ್ತೀರಿ(?) ಯಾರೂ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ, ಬಲವಂತವಾಗಿ ದೇಣಿಗೆ ಸಂಗ್ರಹ ಮಾಡುತ್ತಿದ್ರೆ ದೂರು ಕೊಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅವರು ಹೆಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಗಳಿಗೆ ಮಾರ್ಕ್ ಮಾಡುತ್ತಿದ್ರೆ ಎಲ್ಲಿ ಅಂತ ತೋರಿಸಿ, ದಾಖಲೆ ಕೊಡಿ, ವಿಷಯಾಂತರ ಮಾಡಬೇಡಿ ಎಂದಿದ್ದಾರೆ.

ರಾಮಮಂದಿರ ಬಹಳ ವರ್ಷಗಳ ಕನಸು. ಬಿಜೆಪಿ ಯಾವತ್ತೂ ವೋಟ್ ಬ್ಯಾಂಕ್ ರಾಜಕಾರಣ ಮಾಡಿಲ್ಲ, ವಿನಾಕಾರಣ ಆರೋಪ ಮಾಡೋದು ಸರಿಯಲ್ಲ, ದೇಣಿಗೆಯಲ್ಲಿ ಒಂದು ರೂ. ವ್ಯತ್ಯಾಸ ಆಗಲ್ಲ, ನೀವೂ ದೇವಭಕ್ತರು. ನೀವೂ ರಾಮಮಂದಿರಕ್ಕೆ ಉದಾರ ದೇಣಿಗೆ ಕೊಡಿ. ದೇಣಿಗೆ ಕೊಟ್ಟು ರಾಮನ ಕೃಪೆಗೆ ಪಾತ್ರರಾಗಿ, ಇಂತಹ ಹೇಳಿಕೆ ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರಲ್ಲ, ಅನುಮಾನಾಸ್ಪದರ ಮೇಲೆ ಪೊಲೀಸ್ ದೂರು ಕೊಡಿ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಹೇಳಿದ್ದಾರೆ.

Next Story

RELATED STORIES