Top

ವಲಸಿಗ ಸಚಿವರ ಪರಿಸ್ದಿತಿ ಬಗ್ಗೆ ಡಿ.ಕೆ ಶಿವಕುಮಾರ್ ಲೇವಡಿ

ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಅವಘಡ ನಡೆದಿದೆ.

ವಲಸಿಗ ಸಚಿವರ ಪರಿಸ್ದಿತಿ ಬಗ್ಗೆ ಡಿ.ಕೆ ಶಿವಕುಮಾರ್ ಲೇವಡಿ
X

ಬೆಂಗಳೂರು: ನಾನು ವಿಧಾನಸಭೆಯಲ್ಲಿ ಮೊದಲೇ ಹೇಳಿದ್ದೆ. ನೀವೆಲ್ಲಾ ರಾಜಕೀಯ ಸಮಾಧಿ ಆಗ್ತೀರಾ ಅಂತ ಈಗ ನೋಡಿ ಯಾವ್ಯಾವ ಖಾತೆ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ವಲಸೆ ಹೋದ ಸಚಿವರ ಬಗ್ಗೆ ಲೇವಡಿ ಮಾಡಿದ್ದಾರೆ.

ಈ ವಿಚಾರದ ಮಾಧ್ಯಮದ ಜೊತೆ ಮಾತನಾಡಿದ ಅವರು, ಸರ್ಕಾರ ಐಸಿಯು, ಆಕ್ಸಿಜನ್​ನಲ್ಲಿ ನಡೆಯುತ್ತಿದೆ. ಕೆ. ಗೋಪಾಲಯ್ಯ, ಎಂಟಿಬಿ ನಾಗರಾಜ್, ನಾರಾಯಣಗೌಡ, ರೋಷನ್ ಬೇಗ್ ಕಥೆ ಏನಾಗಿದೆ ನೋಡಿ, ಎಂಟಿಬಿಗೆ ಪಾಪ ಈಗ ಅಬಕಾರಿ ಖಾತೆ ಕೊಟ್ಟಿದ್ದಾರೆ. ಅವರನೆಲ್ಲಾ ಯೂಸ್ ಆಂಡ್ ಥ್ರೋ ಮಾಡಿದ್ದಾರೆ. ಅವರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ಅವರು ಪರೋಕ್ಷವಾಗಿ ವಲಸೆ ಸಚಿವರನ್ನು ಕಾಲೆಳೆದಿದ್ದಾರೆ.

ಶಿವಮೊಗ್ಗದಲ್ಲಿ ಜಿಲಿಟಿನ್ ಕಡ್ಡಿ ಸ್ಟೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಅವಘಡ ನಡೆದಿದೆ. ಸಿಎಂ ತವರೂರು ಅದು, ತಕ್ಷಣಕ್ಕೆ ಸಿಎಂ ಭೇಟಿ ಕೊಡಬೇಕು. ಸಚಿವ ಮುರುಗೇಶ್​ ನಿರಾಣಿ ಕೂಡ ಅಲ್ಲಿಗೆ ಭೇಟಿ ನೀಡಬೇಕು ಎಂದರು.

ಸದ್ಯ ಈ ಪ್ರಕರಣ ಸಂಪೂರ್ಣ ತನಿಖೆಯಾಗಬೇಕು. ಅಷ್ಟು ದೊಡ್ಡ ಪ್ರಮಾಣದ ಜಿಲಿಟಿನ್ ಕಡ್ಡಿ ಹೇಗೆ ಸಂಗ್ರಹಿಸಿದರು ಅದರ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು. ಮೂರು ನಾಲ್ಕು ಜಿಲ್ಲೆಗೆ ಹಾನಿಯಾಗಿದೆ. ಇದಕ್ಕೆಲ್ಲ ಯಾರು ಹೊಣೆ(?) ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ(?) ಎಂದು ಡಿ.ಕೆ ಶಿವಕುಮಾರ್ ಅವರು ಪ್ರಶ್ನೆ ಮಾಡಿದರು.

Next Story

RELATED STORIES