Top

ಎಷ್ಟೇ ಕಷ್ಟವಾದ್ರು ಸಾಲ ಮಾಡಿ ಆದರೂ ಕೆಲಸಗಳು ಆಗಬೇಕು ಅಂದಿದ್ದಾರೆ - ಸಚಿವ ರಮೇಶ್ ಜಾರಕಿಹೊಳಿ

  • ಈಗ ನಮ್ಮ ಮೇಕೆದಾಟು ಯೋಜನೆ ಡಿಪಿಎಆರ್ ಪರಿಶೀಲನೆಯಲ್ಲಿದೆ.
  • ಕೇಂದ್ರದ ನಾಯಕರನ್ನು ಭೇಟಿ ಮಾಡಿ ಯೋಜನೆಗೆ ಅನುಮತಿಗೆ ಮನವಿ ಮಾಡುತ್ತೇನೆ.
  • ಜಿಎಸ್​ಟಿ ಹಣ ಕೇಂದ್ರದಿಂದ ಆದಷ್ಟು ಬೇಗ ಬಿಡುಗಡೆ ಆಗಲಿದೆ.
  • ಬೆಂಗಳೂರಿಗೆ ಕುಡಿಯೋದಕ್ಕೆ ನೀರು, ಪವರ್ ಪ್ರಾಜೆಕ್ಟ್ ಕೂಡ ಇದೆ.

ಎಷ್ಟೇ ಕಷ್ಟವಾದ್ರು ಸಾಲ ಮಾಡಿ ಆದರೂ ಕೆಲಸಗಳು ಆಗಬೇಕು ಅಂದಿದ್ದಾರೆ - ಸಚಿವ ರಮೇಶ್ ಜಾರಕಿಹೊಳಿ
X

ಬೆಂಗಳೂರು: ಮೇಕೆದಾಟು ಯೋಜನೆ ಕುರಿತು 9,000 ಕೋಟಿ ರೂ. ಮೊತ್ತದ ಡಿಪಿಎಆರ್ ತಯಾರಿಸಲಾಗಿದೆ. ಈಗಾಗಲೇ 18/1/2019ರಲ್ಲಿ ಡಿಪಿಎಆರ್ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಮ್ಮ ಮೇಕೆದಾಟು ಯೋಜನೆ ಡಿಪಿಎಆರ್ ಪರಿಶೀಲನೆಯಲ್ಲಿದೆ. ಯೋಜನೆಯಡಿ 5,051 ಹೆಕ್ಟೇರ್ ಅರಣ್ಯ ಭೂಮಿ ಮುಳುಗಡೆಯಾಗಲಿದೆ. ಇದರಲ್ಲಿ 3,181 ಹೆಕ್ಟೇರ್ ವನ್ಯಜೀವಿ ವಲಯ ಅರಣ್ಯವಾಗಿದೆ. ಈ ಕುರಿತು ಇಡಂ ಮತ್ತು ಇಎಂಪಿಯಲ್ಲೂ ಪ್ರಸ್ತಾವನೆ ಸಿದ್ದಪಡಿಸುವ ನಿಟ್ಟಿನಲ್ಲಿ ಕೇಂದ್ರದ ಎಂಒಎಫ್​ನವರ ಜೊತೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ತಿಳಿಸಿದರು

ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಭೂಸ್ವಾಧೀನಕ್ಕೆ ದರ ನಿಗದಿ ಬಗ್ಗೆ ಸಿಎಂ ಜತೆ ಚರ್ಚಿಸಿ ನಿರ್ಧಾರ. ನಾಳೆ ಮೇಕೆದಾಟುಗೆ ಹೋಗುತ್ತೇನೆ. ಖುದ್ದು ನಾನೇ ಸ್ಥಳ ಪರಿಶೀಲಿಸುತ್ತೇನೆ. ಮತ್ತೆ ಕೇಂದ್ರದ ನಾಯಕರನ್ನು ಭೇಟಿ ಮಾಡಿ ಯೋಜನೆಗೆ ಅನುಮತಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಸಿಎಂ ದೆಹಲಿಗೆ ಹೋಗಲು ದಿನಾಂಕ ಫಿಕ್ಸ್ ಮಾಡ್ತಾರೆ. ಜಿಎಸ್​ಟಿ ಹಣ ಕೇಂದ್ರದಿಂದ ಆದಷ್ಟು ಬೇಗ ಬಿಡುಗಡೆ ಆಗಲಿದೆ. ಸಿಎಂ ಮೊನ್ನೆ ಮೀಟಿಂಗ್ ಮಾಡಿದ್ದಾರೆ. ಎಷ್ಟೇ ಕಷ್ಟ ಆದ್ರೂ ಸಾಲ ಮಾಡಿ ಆದ್ರೂ ಕೆಲಸಗಳು ಆಗಬೇಕು ಅಂದಿದ್ದಾರೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ, ಇಲಾಖೆಯಲ್ಲಿ ಯಾವ ಯೋಜನೆಯೂ ಸ್ಥಗಿತ ಆಗೋದಿಲ್ಲ. ಎಲ್ಲಾ ನಡೀತಿದೆ ಎಂದು ಹೇಳಿದರು.

ಇನ್ನು ಮೇಕೆದಾಟು ಇಂಪಾರ್ಟೆಂಟ್ ಯೋಜನೆ. ದೆಹಲಿಗೆ ಹೋಗಿ ಯಾವ ಹಂತದಲ್ಲಿದೆ ಅನ್ನೋದನ್ನ ಚರ್ಚೆ ಮಾಡಬೇಕು. ಬೆಂಗಳೂರಿಗೆ ಕುಡಿಯೋದಕ್ಕೆ ನೀರು, ಪವರ್ ಪ್ರಾಜೆಕ್ಟ್ ಕೂಡ ಇದೆ. ಮತ್ತೊಂದು ದಿನ ಸಭೆ ನಡೆಸಿ ಸಂಪೂರ್ಣ ವಿವರ ಕೊಡುತ್ತೇನೆ ಎಂದು ವಿಧಾನಸೌಧದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಮಾತನಾಡಿದ್ದಾರೆ.

Next Story

RELATED STORIES