Top

ದಾರಿಯಲ್ಲಿ ನಿಂತ ಡಕೋಟ ಎಕ್ಸ್ ಪ್ರೆಸ್ ಸರ್ಕಾರ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಆಪರೇಷನ್ ಕಮಲದ ಜನಕ ಮಿಸ್ಟರ್ ಯಡಿಯೂರಪ್ಪ

ದಾರಿಯಲ್ಲಿ ನಿಂತ ಡಕೋಟ ಎಕ್ಸ್ ಪ್ರೆಸ್ ಸರ್ಕಾರ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
X

ವಿಧಾನಸೌಧ: ಇಂದು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯಪಾಲರ ಕೈಯಲ್ಲಿ ಸರ್ಕಾರ ಸುಳ್ಳು ಹೇಳಿಸಿದೆ ಆರೋಪ ಮಾಡಿದ್ದಾರೆ.

ಮೂರನೇ ದಿನದ ಅಧಿವೇಶದಲ್ಲಿಂದು ಮಾತನಾಡಿದ ಅವರು, ಸತ್ಯ ಅನ್ನುವುದು ಇಲ್ಲ, ಸುಳ್ಳಿನ ಕಂತೆಯಷ್ಟೇ. ದಿಕ್ಕು ದೆಸಿ, ಮುಂದಾಲೋಚನೆ ಇಲ್ಲದ ಭಾಷಣವಾಗಿದೆ. ನಮ್ಮ ಸಾಧನೆಗಳನ್ನೇ ನಮ್ಮದೆಂದು ಹೇಳಿಕೊಂಡಿದ್ದಾರೆ. ಬಿಜೆಪಿಯವರದ್ದು ಚುನಾಯಿತ ಸರ್ಕಾರವಲ್ಲ, ಜನರಿಂದ ಆರಿಸಿ ಬಂದ ಸರ್ಕಾರವಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಲೇವಡಿ ಮಾಡಿದರು.

ಆಪರೇಷನ್ ಕಮಲದ ಜನಕ ಮಿಸ್ಟರ್ ಯಡಿಯೂರಪ್ಪ. ಅನೈತಿಕ ಅಂಗವೈಕಲ್ಯದ ಸರ್ಕಾರವಿದು. ನಮ್ಮ ಸರ್ಕಾರವಿದ್ದಾಗ ಟೇಕ್ ಆಫ್ ಆಗಿಲ್ಲ ಅನ್ನುತ್ತಿದರು. ಈಗ ಇವರ ಸರ್ಕಾರ ಏನಾಗಿದೆ. ಟೇಕಾಫ್ ಅಲ್ಲ, ಸರ್ಕಾರ ಆಫ್ ಆಗಿಬಿಟ್ಟಿದೆ. ದಾರಿಯಲ್ಲಿ ನಿಂತ ಡಕೋಟ ಎಕ್ಸ್ ಪ್ರೆಸ್ ಸರ್ಕಾರವಾಗಿದೆ. ಯಡಿಯೂರಪ್ಪಗೆ ಬಸ್ ಓಡಿಸೋಕೆ ಬರ್ತಿಲ್ಲ, ಗೇರ್ ಹಾಕೋಕೆ ಬರ್ತಿಲ್ಲ, ನಾಲ್ಕು ಕಡೆಗಳಿಂದಲೂ ಬಸ್ ಹಿಡಿದು ಎಳೆದಾಡುತ್ತಿದ್ದಾರೆ ಎಂದು ಅವರು ಸರ್ಕಾರವನ್ನ ಡಕೋಟ ಎಕ್ಸ್​ಪ್ರೆಸ್​ಗೆ ಹೋಲಿಸಿದರು.

ಒಂದೂವರೆ ವರ್ಷವಾದ್ರೂ ಸರ್ಕಾರ ಸರಿಯಾಗಿಲ್ಲ, ಐದು ದಿನದಲ್ಲಿ ನಾಲ್ಕು ಬಾರಿ ಖಾತೆ ಬದಲಾವಣೆ ಮಾಡಿದ್ರಿ, ಮಾಧುಸ್ವಾಮಿಗೆ ಮೂರು ಬಾರಿ ಖಾತೆ ಬದಲಾಯಿಸಿದ್ರಿ, ಪಾಪ ಮುಂದೆ ಕೂತ ಕೆಲಸ ಮಾಡುತ್ತಿದ್ದ. ಅವನನ್ನ ಹಿಂದಕ್ಕೆ ಹಾಕಿಬಿಟ್ರಿ, ಪಾಪ ಬೆಂಗಳೂರು ಅಭಿವೃದ್ಧಿ ಯಾರಿಗೂ ಕೊಡಲಿಲ್ಲ, ಅರವಿಂದ ಲಿಂಬಾವಳಿ ಬೆಂಗಳೂರಲ್ಲವೇ(?) ನಿನಗೆ ಕೊಡಬಹುದಿತ್ತು ಅದನ್ನ, ಪಾಪ ಸುರೇಶ್ ಕುಮಾರ್ ಇಲ್ಲೇ ಹುಟ್ಟಿ ಬೆಳೆದವರು. ಅವರಿಗದ್ರೂ ಅದನ್ನ ಕೊಡಬಹುದಿತ್ತು. ಬೆಂಗಳೂರು ಅಭಿವೃದ್ಧಿಯನ್ನ ಅವರೇ ಇಟ್ಕೊಂಡಿದ್ದಾರೆ. ಪಾಪ ನರಕ ಎಲ್ಲವೂ ಇಲ್ಲೇ ಇದೆ. ಇಲ್ಲೇ ಅನುಭವಿಸಿ ನಾವು ಹೋಗಬೇಕು ಎಂದು ಬಿಜೆಪಿ ನಾಯಕರನ್ನು ಮಾತಿನಿಂದ ತಿವಿದರು.

Next Story

RELATED STORIES