Top

ಕಾಂಗ್ರೆಸ್​ನವರೇ ನಮ್ಮನ್ನ ಹೋಗಿ ಹೋಗಿ ಅಂತ ನೂಕುತ್ತಿದ್ದಾರೆ - ಹೆಚ್.ಡಿ ಕುಮಾರಸ್ವಾಮಿ

ನಮಗೆ ಸಹವಾಸ ಬೇಡ ಅಂತ ನೂಕುತ್ತಿದ್ದಾರೆ

ಕಾಂಗ್ರೆಸ್​ನವರೇ ನಮ್ಮನ್ನ ಹೋಗಿ ಹೋಗಿ ಅಂತ ನೂಕುತ್ತಿದ್ದಾರೆ - ಹೆಚ್.ಡಿ ಕುಮಾರಸ್ವಾಮಿ
X

ಚನ್ನಪಟ್ಟಣ: ಅದು ಅವರ ಪಕ್ಷದಲ್ಲಿ ನಡೆದಿರುವ ಘಟನೆ. ಕಾಂಗ್ರೆಸ್​ನವರು ಜಾತ್ಯಾತೀತವಾದಿಗಳು ಅಂತಾರೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಶುಕ್ರವಾರ ಹೇಳಿದ್ದಾರೆ.

ಮೈಸೂರು ಪಾಲಿಕೆ ಮೇಯರ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿಂದು ಮಾಧ್ಯಮದ ಜೊತೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್​ನವರೇ ನಮ್ಮನ್ನ ಹೋಗಿ ಹೋಗಿ ಅಂತ ನೂಕುತ್ತಿದ್ದಾರೆ. ನಮಗೆ ಸಹವಾಸ ಬೇಡ ಅಂತ ನೂಕುತ್ತಿದ್ದಾರೆ ಎಂದರು.

ಇನ್ನು ರಮೇಶ್ ಕುಮಾರ್ ನಿನ್ನೆ ಸಭೆಯಲ್ಲಿ ಏನು ಹೇಳಿದರು. ಜೆಡಿಎಸ್ ಕಡೆ ಇರೋ ಮುಸ್ಲಿಂರನ್ನ ನಾವು ಒಟ್ಟುಗೂಡಿಸೋಕೆ ಹೊರಟಿದ್ವಿ. ಅದಕ್ಕೆ ಪ್ಲಾನ್ ಮಾಡಿದ್ವಿ. ಆದರೆ, ಆ ಫ್ಲಾನ್ ಎಲ್ಲ ಉಲ್ಟಾ ಮಾಡಿದ್ರಿ ಅಂದಿದ್ದಾರೆ. ಮೈತ್ರಿ ಸರ್ಕಾರ ಬೀಳಿಸಿದವರು ಯಾರು(?) ನಾನೇ ಮುಖ್ಯಮಂತ್ರಿ ಎಂದು ಎದೆ ಮೇಲೆ ಬೋರ್ಡ್ ಹಾಕಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಪಕ್ಷದ ಶಕ್ತಿ ತೊರೀಸೋಕೆ ಅಭ್ಯರ್ಥಿ ಹಾಕಿದ್ವಿ. ನಾವು ಬಿಜೆಪಿಗೆನೂ ಬೆಂಬಲಿಸಿರಲಿಲ್ಲ, ಬೇರೆ ರೀತಿಯಾದ ಸ್ಟ್ಯಾಟಜಿ ಮಾಡಿದ್ವಿ. ಪಕ್ಷೇತರರ ಎರಡು ಮತ ಹೆಚ್ಚಿಗೆ ಹಾಕಿಸಿಕೊಳುತ್ತಿದ್ವಿ ಎಂದು ಹೇಳಿದರು.

ಕುಮಾರಸ್ವಾಮಿ ಓರ್ವ ಅವಕಾಶವಾದಿ ರಾಜಕಾರಣಿ ಕುಮಾರಸ್ವಾಮಿ ಒಂದು ತರಹ ಜೋಕರ್ ಎಂಬ ಸಿ.ಪಿ. ಯೋಗೇಶ್ವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ ಅವರು, ನಾನು ಎಲ್ಲಿ ವರೆಗೆ ಜನರ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಅಲ್ಲಿಯ ವರೆಗೆ ನಾನು ಇಂತಹ ನೂರು ಜನರ ಬಂದರು ನನ್ನ ಏನು ಮಾಡೋಕೆ ಆಗಲ್ಲ, ನಿನ್ನೆ ಪ್ರವಾಸೋದ್ಯಮದಲ್ಲಿ ಇತಿಹಾಸ ಸೃಷ್ಠಿ ಮಾಡುತ್ತೇನೆ ಎಂದು ಭಾಷಣ ಮಾಡಿದ್ದೇನೆ. ಮೇಗಾ ಸಿಟಿಯಲ್ಲಿ ಸೈಟ್​ ಕೊಡ್ತೀನಿ ಅಂತ ಹೇಳಿ ಕಂಡ್ರೋ ದುಡ್ಡು ಲೂಡಿ ಹೊಡೆದು ಜನರ ತಪ್ಪಿಸಿಕೊಂಡು ಇನ್ನು ಬದುಕಿ ಬಂದಿದ್ದೇನೆ ಇವನ ಹತ್ತಿರ ನನ್​ ಕಲಿಬೇಕಾ ಜನಗಳ ಕೆಲಸ ಹೇಗ್ ಮಾಡಬೇಕು ಅಂತ ಎಂದು ತಿರುಗೇಟು ನೀಡಿದ್ದಾರೆ.

Next Story

RELATED STORIES