Top

ಪಿಎಂ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್ ಮುಗಿಸಿದ ಬಳಿಕ ಸಿಎಂ ಬಿಎಸ್​ವೈ ಸುದ್ದಿಗೋಷ್ಠಿ

ಪಿಎಂ ಮೋದಿ ಅವರು ಮೂರು ಸಲಹೆಯನ್ನ ನೀಡಿದ್ದಾರೆ.

ಪಿಎಂ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್ ಮುಗಿಸಿದ ಬಳಿಕ ಸಿಎಂ ಬಿಎಸ್​ವೈ ಸುದ್ದಿಗೋಷ್ಠಿ
X

ಬೆಂಗಳೂರು: ಪಿಎಂ ಕೋವಿಡ್ ಸಂಬಂಧಿಸಿದಂತೆ ಎಲ್ಲರ ಜೊತೆ ಮಾತನಾಡಿದರು. ಕೊರೊನಾ ಬಗ್ಗೆ ಭಯ ಸೃಷ್ಠಿಸೋದು ಬೇಡ, ಲಸಿಕೆ ಪಡೆಯಲು ಸಿದ್ಧವಿದೆ, ಕೊರತೆ ಆಗದಂತೆ ಪೂರೈಸಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬುಧವಾರ ಹೇಳಿದರು.​

ದೇಶದಲ್ಲಿ ಕೊವಿಡ್ 19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಸಿಎಂಗಳ ಜೊತೆ ಪಿಎಂ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮುಕ್ತಾಯವಾದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್19 ನಿಯಂತ್ರ, ಪರೀಕ್ಷೆ ಹೆಚ್ಚಿಸುವುದು. 42 ಆಸ್ಪತ್ರೆಯಲ್ಲಿ ಚಿಕಿತ್ಸೆ, ಕಡ್ಡಾಯವಾಗಿ ಮಾಸ್ಕ್ ಬಳಕೆ, ಪ್ರಕರಣ ಹೆಚ್ಚಿರೋ ಜಿಲ್ಲೆಯಲ್ಲಿ ಟೆಸ್ಟ್ ಹೆಚ್ಚೆಸಲು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ ಎಂದು ಬಿಎಸ್​ವೈ ಹೇಳಿದರು.

ಆಗಸ್ಟ್​ನಿಂದ ಇವರೆಗೂ ಸೋಂಕು ಪ್ರಮಾಣ ಹೆಚ್ಚಾಗಿದ್ದು, ಮತ್ತೆ ಏರದಂತೆ ಮಾರ್ಚ್ ಒಂದರಿಂದ 1.56 ಏರಿಕೆಯಾಗಿದೆ. ಪರಿಕ್ಷಾ ಪ್ರಮಾಣ ಹೆಚ್ಚಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಾಗೃತಿ ಮೂಡಿಸಲು ಸೂಚನೆ ನೀಡಲಾಗಿದೆ. ಐಸಿಯು, ಹಾಸಿಗೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು. 3,500 ಕೇಂದ್ರದಲ್ಲಿ ಲಸಿಕೆ ಹಾಕಿಸುವುದು. ಭಾರತ ಸರ್ಕಾರದ ನೀತಿಯಂತೆ ಆರೋಗ್ಯ ಕ್ರಮ ಹಚ್ಚಿಸುವುದು. ಆಂಬ್ಯುಲೆನ್ಸ್, ಮೆಡಿಕಲ್ ಕಿಟ್ ಕೇಳಲಾಗಿದೆ ಎಂದು ಹೇಳಿದರು.

ಕಲ್ಬುರ್ಗಿ, ಬೆಂಗಳೂರಿಗೆ ಹೆಚ್ಚು ಒತ್ತು ನೀಡಲಾಗಿದೆ. ಮೂರನೇ ಹಂತದ ಪಟ್ಟಣಗಳಿಗೂ ಟೆಸ್ಟ್ ಹೆಚ್ಚಿಸಲು ಸೂಚನೆ ನೀಡಲಾಗಿದೆ. ವ್ಯಾಕ್ಸಿನ್ ವೇಸ್ಟ್ ಆಗದಂತೆ ಕ್ರಮ ಕೈಗೊಳ್ಳುವುದು. ಹಳೆಯದನ್ನ ಖಾಲಿ ಮಾಡಿ, ಹೊಸತನ್ನು ಬಳಸಿಕೊಳ್ಳುವುದು ಎಂದಿದ್ದಾರೆ.

ಮಾಸ್ಕ್ ಕಡ್ಡಾಯ ಮಾಡಬೇಕು, ಸಾಮಾಜಿಕ ಅಂತರ ಕಾಯ್ದುಗೊಳ್ಳಬೇಕು. ಸಮಾರಂಭಗಳಲ್ಲಿ ಜನಸಂದಣಿ ಕಡಿಮೆಬೇಕು. ಯಾವುದೇ ಲಾಕ್​ಡೌನ್ ಇರುವುದಿಲ್ಲ ಎಂದು ರಾಜ್ಯದ ಜನರಿಗೆ ಸಿಎಂ ಸ್ಪಷ್ಟನೆ ನೀಡಿದರು.

ಪಿಎಂ ಮೋದಿ ಅವರು ಮೂರು ಸಲಹೆಯನ್ನ ನೀಡಿದ್ದಾರೆ. ಮಾಸ್ಕ್ ಬಳಕೆ ಕಡ್ಡಾಯ, ಅಂತರ ಕಾಯ್ದು ಕೊಳ್ಳುವುದು, ಒಳಗೆ ನಡೆಯೋ ಕಾರ್ಯಕ್ರಮದಲ್ಲಿ ಜನರಿಗೆ ನಿರ್ಬಂಧ. ಹೊರಗಿನ ಮೈದಾನದಲ್ಲಿ ನಿರ್ಬಂಧ ಇಲ್ಲ, ಮಾಸ್ಕ್ ಹಾಕೋದು ಬಿಟ್ಟಿದ್ದಾರೆ. ಮಸ್ಕ್ ಕಡ್ಡಾಯವಾಗಿ ಬಳಕೆ ಮಾಡಬೇಕು, ಮಾಸ್ಕ್ ಹಾಕುವಂತೆ ಮನವಿ ಮಾಡಿ ನಂತರ ಹಾಕದಿದ್ರೆ ದಂಡ ಹಾಕೋ ಬಗ್ಗೆ ಚರ್ಚಿಸೋಣ ಎಂದು ತಿಳಿಸಿದರು.

ಸಾರ್ವಜನಿಕ ಸಭೆ ಸಮಾರಂಭದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಚುನಾವಣೆಯದ್ದು ನೋಡೋಣ ಏನಾಗಲಿದೆ. ಸಿನಿಮಾ, ಹೋಟೆಲ್ ಮತ್ತೆಲ್ಲಾದ್ರೂ ಮಾಸ್ಕ್ ಬಳಕೆ ಕಡ್ಡಾಯ ಎಂದು ಸಿಎಂ ಬಿಎಸ್​ವೈ ಹೇಳಿದ್ದಾರೆ.


Next Story

RELATED STORIES