Top

ಕನ್ನಡಕ್ಕೆ ಅವಮಾನ ಮಾಡುತ್ತಿರುವುದು ಸ್ಪಷ್ಟ - ಮಾಜಿ ಸಿಎಂ ಹೆಚ್ಡಿಕೆ

ರೈತರ ಬಗೆಗಿನ ಹೇಳಿಕೆ ನಾನು ಚರ್ಚೆ ಮಾಡೋದಿಲ್ಲ, ಉತ್ತರ ಭಾರತದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ

ಕನ್ನಡಕ್ಕೆ ಅವಮಾನ ಮಾಡುತ್ತಿರುವುದು ಸ್ಪಷ್ಟ - ಮಾಜಿ ಸಿಎಂ ಹೆಚ್ಡಿಕೆ
X

ಬೆಂಗಳೂರು: ಕೇಂದ್ರದ ಕಾರ್ಯಕ್ರಮ ರಾಜ್ಯದಲ್ಲಿ ನಡೆಯುತ್ತಿವೆ. ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಕಡೆಗಣನೆಯಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಗುರುವಾದ ವಿಧಾನಸೌಧದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಕನ್ನಡಕ್ಕೆ ಅವಮಾನ ಮಾಡುತ್ತಿರುವುದು ಸ್ಪಷ್ಟವಾಗಿದೆ. ಕನ್ನಡ ಭಾಷೆಯನ್ನ ಹತ್ತಿಕ್ಕುವ ಹುನ್ನಾರವಿದು. ಕೇಂದ್ರ ಮತ್ತು ರಾಜ್ಯಕ್ಕೆ ಆಗ್ರಹ ಮಾಡುತ್ತೇನೆ. ಈ ರೀತಿ ಬೆಳವಣಿಗೆಯಾದಾಗ ಗಮನಹರಿಸಿ, ನಿಮ್ಮನ್ನ ನೀವು ದೂರಿಕೊಳ್ಳಬೇಡಿ ಎಂದು ಸರ್ಕಾರದ ನಡೆಗೆ ಬೇಸರ ಹೊರಹಾಕಿದ್ದಾರೆ.

ದೆಹಲಿ ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿದೇಶದ ಕೆಲವರು ಹೇಳಿಕೆ ನೀಡಿದ್ದಾರೆ. ರೈತರ ಬಗೆಗಿನ ಹೇಳಿಕೆ ನಾನು ಚರ್ಚೆ ಮಾಡೋದಿಲ್ಲ, ಉತ್ತರ ಭಾರತದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿಯವರಿಗೆ ನಾನು ಮನವಿ ಮಾಡಿದ್ದೇನೆ. ಈಗಲೂ ಮನವಿ ಮಾಡುತ್ತೇನೆ. ರೈತ ಸಂಘಟನೆಗಳ ಜೊತೆ ಚರ್ಚಿಸಬೇಕು. ರೈತರ ಮನವೊಲಿಸುವುದು ಸೂಕ್ತ. ರಸ್ತೆಯಲ್ಲಿ ಮೊಳೆ ಹೊಡೆದಿದ್ದು ಸರಿಯಲ್ಲ. ಇದು ಬಿಜೆಪಿ ಮೇಲೆ ದುಷ್ಪರಿಣಾಮ ಬೀರಲಿದೆ ಕೂಡಲೇ ಕೇಂದ್ರ ಎಚ್ಚೆತ್ತುಕೊಳ್ಳುವುದು ಸೂಕ್ತ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

Next Story

RELATED STORIES