Top

ಸಾರಿಗೆ ಇಲಾಖೆಯಿಂದ 'ನಮ್ಮ ಕಾರ್ಗೋ ಸೇವೆ' ಲೋಕಾರ್ಪಣೆ

ಆಂಧ್ರ, ತೆಲಂಗಾಣ, ಗೋವಾ, ತಮಿಳುನಾಡಿಗೆ ಕಾರ್ಗೋಸೇವೆ

ಸಾರಿಗೆ ಇಲಾಖೆಯಿಂದ ನಮ್ಮ ಕಾರ್ಗೋ ಸೇವೆ ಲೋಕಾರ್ಪಣೆ
X

ಬೆಂಗಳೂರು: ಕೋವಿಡ್​ನಿಂದ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಹೀಗಾಗಿ ಪರ್ಯಾಯ ಆದಾಯಕ್ಕೆ ಹೊಸ ಯೋಜನೆ ಕಾರ್ಗೋ, ಪಾರ್ಸೆಲ್ ಸೇವೆಯನ್ನು ಜಾರಿಗೆ ತಂದಿದ್ದೇವೆ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ಹೇಳಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಸಾರಿಗೆ ಇಲಾಖೆಯಿಂದ ನಮ್ಮ ಕಾರ್ಗೋ ಸೇವೆ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ, ಸಚಿವರಾದ ಡಾ.ಕೆ ಸುಧಾಕರ್, ಉಮೇಶ್​ ಕತ್ತಿ ಭಾಗವಹಿಸಿದ್ದರು.

ಲೋಕಾರ್ಪಣೆ ಮಾಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸವದಿ ಅವರು, ಸಾರ್ವಜನಿಕ ಸೇವೆ ಜೊತೆ ಕಾರ್ಗೋಸೇವೆ ಪ್ರಾರಂಭವಾಗಲಿದೆ. ಕೋವಿಡ್​ನಿಂದ ಸಾವನ್ನಪ್ಪಿದವರಿಗೆ 30 ಲಕ್ಷ ಚೆಕ್ ನೀಡಿದ್ದೇವೆ ಎಂದರು.

ಸದ್ಯ ಹಳೆಯ ಬಸ್​ಗಳನ್ನ ಬೇರೆ ಬೇರೆಯದಕ್ಕೆ ಉಪಯೋಗ ಮಾಡಲಾಗುವುದು. ಟಾಯ್ಲೆಟ್, ಸಂಚಾರಿ ಬ್ಲಡ್ ಬ್ಯಾಂಕ್ ಮಾಡಿದ್ದೇವೆ. ಗುಜರಿಗೆ ಹೋಗುವ ಬಸ್​ಗಳನ್ನು ಈ ರೀತಿ ಸದುಪಯೋಗ ಮಾಡುತ್ತಿದ್ದೇವೆ ಮಾಡುತ್ತಿದ್ದೇವೆ. ಸ್ನಾನಗೃಹ, ಶೌಚಾಲಯಗಳಿಗೂ ಉಪಯೋಗ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇನ್ನು ಸಾರಿಗೆ ಇಲಾಖೆಯಿಂದ ಮಹತ್ತರ ಹೆಜ್ಜೆ ಇಟ್ಟಿದ್ದೇವೆ. ಸಾರಿಗೆ ಸಂಸ್ಥೆಯಲ್ಲಿ 1.30 ಲಕ್ಷ ಸಿಬ್ಬಂದಿ ಇದ್ದಾರೆ. ವೇತನ ನೀಡಲು ನಮಗೆ ಕಷ್ಟವಾಗಿತ್ತು. ಸಿಎಂ 1800 ಕೋಟಿ ಇದಕ್ಕಾಗಿ ಕೊಟ್ಟಿದ್ದಾರೆ. ಈಗ ನೌಕರರ ವೇತನವನ್ನೂ ಕೊಟ್ಟಿದ್ದೇವೆ ಎಂದು ಸಚಿವ ಲಕ್ಷ್ಮಣ್ ಸವದಿ ಅವರು ಹೇಳಿದರು.

80-100 ಕೋಟಿ ರೂಪಾಯಿ ಆದಾಯದ ನಿರೀಕ್ಷೆ - ಸಿಎಂ ಬಿ.ಎಸ್​.ಯಡಿಯೂರಪ್ಪ

ಕೋವಿಡ್ ನಿಂದ ಸಾರಿಗೆ ಸಂಸ್ಥೆ ನಷ್ಟದಲ್ಲಿತ್ತು ಅದಕ್ಕೆ ಪರ್ಯಾಯ ಆದಾಯ ಹುಡುಕಿಕೊಳ್ಳಲಾಗಿದೆ. ಇದೀ ನಮ್ಮ ಕಾರ್ಗೋ ಸೇವೆ ಪ್ರಾರಂಭಿಸಿದ್ದೇವೆ. 80 ರಿಂದ 100 ಕೋಟಿ ಆದಾಯ ಇದರಿಂದ ಬರಲಿದೆ. ಆಂಧ್ರ, ತೆಲಂಗಾಣ, ಗೋವಾ, ತಮಿಳುನಾಡಿಗೆ ಕಾರ್ಗೋಸೇವೆ. ಮೊದಲ ಹಂತದಲ್ಲಿ ಸೇವೆ ಆರಂಭಿಸಿದ್ದೇವೆ. ಮುಂದೆ ಉಳಿದ ರಾಜ್ಯಗಳಿಗೂ ವಿಸ್ತರಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ನುಡಿದರು.

Next Story

RELATED STORIES