Top

ಕೇಂದ್ರ ಸರ್ಕಾರ ಈ ಬಾರಿ ಐತಿಹಾಸಿಕ ಬಜೆಟ್​ಅನ್ನು ಮಂಡಿಸಿದೆ - ಸಂಸದ ಬಿ.ವೈ ರಾಘವೇಂದ್ರ

ಕನಿಷ್ಠ ಸರ್ಕಾರ ಗರಿಷ್ ಆಡಳಿತದ ಕಲ್ಪನೆಯಲ್ಲಿ ಕೇಂದ್ರ ಸರ್ಕಾರ ಕಾರ್ಯ ನಿರ್ವಹಣೆ ಮಾಡುತ್ತಿದೆ

ಕೇಂದ್ರ ಸರ್ಕಾರ ಈ ಬಾರಿ ಐತಿಹಾಸಿಕ ಬಜೆಟ್​ಅನ್ನು ಮಂಡಿಸಿದೆ - ಸಂಸದ ಬಿ.ವೈ ರಾಘವೇಂದ್ರ
X

ಶಿವಮೊಗ್ಗ: ಕೇಂದ್ರ ಸರ್ಕಾರ ಈ ಬಾರಿ ಐತಿಹಾಸಿಕ ಬಜೆಟ್​ಅನ್ನು ಮಂಡಿಸಿದೆ ಎಂದು ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಅವರು ಶನಿವಾರ ಹೇಳಿದ್ದಾರೆ.

ಕೇಂದ್ರ ಬಜೆಟ್​ನಲ್ಲಿ ರಾಜ್ಯ ಸಿಕ್ಕಿರುವ ಅನುದಾನ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಕೃಷಿ ಉತ್ಪಾದನಾ ಪ್ರಮಾಣ ಹಾಗೂ ಮೂಲ ಸೌಕರ್ಯಗಳ ಹೆಚ್ಚಳಕ್ಕೆ ಒತ್ತು ನೀಡಿದೆ ಜೊತೆಗೆ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ ಎಂದಿದ್ದಾರೆ.

ಇನ್ನು ಕೃಷಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ 2.23 ಲಕ್ಷ ಕೋಟಿ ರೂ.ಗಳನ್ನು ವ್ಯಯಿಸಲಿದೆ. ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೂ ಸಹ ಉತ್ತಮ ಕೊಡುಗೆ ನೀಡಿದೆ. ಬೆಂಗಳೂರು ಮೆಟ್ರೋ, ಹೆದ್ದಾರಿ ನಿರ್ಮಾಣ, ಕೈಗಾರಿಕಾ ಕಾರಿಡಾರ್, ಗ್ಯಾಸ್ ಪೈಪ್ ಲೈನ್ ಸೇರಿದಂತೆ ಹಲವು ಯೋಜನೆಗೆ ಹಣ ನೀಡಿದೆ. ರಾಜ್ಯದ ರೈಲ್ವೇ ಯೋಜನೆಗಳಿಗೆ ಸುಮಾರು 4,870 ಕೋಟಿ ರೂ. ನೀಡಲಾಗಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲ್ವೇ ಮಾರ್ಗಕ್ಕೂ 100 ಕೋಟಿ ಹಣ ನೀಡಿದೆ ಜೊತೆಗೆ ರೈಲ್ವೇ ಟರ್ಮಿನಲ್ ನಿರ್ಮಾಣಕ್ಕೆ 12 ಕೋಟಿ ಹಣವನ್ನು ಬಜೆಟ್ ನಲ್ಲಿ ನೀಡಲಾಗಿದೆ. ದೇಶಿಯ ಉತ್ಪಾದನೆಗೆ ಉತ್ತೇಜನ ನೀಡಲು ಆತ್ಮನಿರ್ಭರ ಭಾರತಕ್ಕೂ ಬೆಂಬಲ ನೀಡಿದೆ. ಕನಿಷ್ಠ ಸರ್ಕಾರ ಗರಿಷ್ ಆಡಳಿತದ ಕಲ್ಪನೆಯಲ್ಲಿ ಕೇಂದ್ರ ಸರ್ಕಾರ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಸಂಸದ ರಾಘವೇಂದ್ರ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Next Story

RELATED STORIES