Top

ಬಿರುಬೇಸಿಗೆಯಲ್ಲೂ ಜೋರಾಯ್ತು ಬೈ ಎಲೆಕ್ಷನ್ ಕಾವು

ಏಪ್ರಿಲ್ 5 ರ ನಂತರ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರ ಪ್ರಚಾರ

ಬಿರುಬೇಸಿಗೆಯಲ್ಲೂ ಜೋರಾಯ್ತು ಬೈ ಎಲೆಕ್ಷನ್ ಕಾವು
X

ಬೈ ಎಲೆಕ್ಷನ್ ಆಖಾಡ ದಿನದಿಂದ ದಿನಕ್ಕೆ ರಂಗೇರ್ತಿದೆ. ಏಪ್ರಿಲ್ ೫ ನಂತರ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಜನರ ಬಳಿ ಮತಯಾಚಿಸಲಿದ್ದಾರೆ. ಹೀಗಾಗಿ ಪ್ರಚಾರದ ಕಾವು ಮತ್ತಷ್ಟು ಜೋರಾಗಲಿದೆ.

ಉತ್ತರ ಕರ್ನಾಟಕದಲ್ಲಿ ತಾಪಮಾನ ೪೦ ಡಿಗ್ರಿ ಸೆಲ್ಸಿಯಸ್ ತಲುಪಿದೆ. ಬಿರುಬಿಸಿಲಿಗೆ ಹೆದರಿ ಜನ ಮನೆಯಿಂದ ಹೊರಬರೋಕೆ ಹೆದರ್ತಿದ್ದಾರೆ. ಆದರೂ ಉಪಚುನಾವಣೆಯ ಕಾವು ಮಾತ್ರ ಕಡಿಮೆಯಾಗಿಲ್ಲ. ಪ್ರಸ್ತುತ ಉಪಚುನಾವಣೆ ನಡೆಯಲಿರುವ ಮೂರು ಕ್ಷೇತ್ರಗಳು ಉತ್ತರಕರ್ನಾಟಕ ವ್ಯಾಪ್ತಿಯಲ್ಲೇ ಬರಲಿವೆ. ಬೆಳಗಾವಿ ಮುಂಬೈ ಕರ್ನಾಟಕದಲ್ಲಿ ಬಂದರೆ, ಮಸ್ಕಿ ಹಾಗೂ ಬಸವಕಲ್ಯಾಣ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುತ್ವೆ. ಅಭ್ಯರ್ಥಿಗಳು ಕಳೆದ ಮೂರ್ನಾಲ್ಕು ದಿನದಿಂದಲೇ ಪ್ರಚಾರ ಆರಂಭಿಸಿದ್ದಾರೆ. ಆದರೆ, ಅದರ ಕಾವು ಮಾತ್ರ ಕಾಣ್ತಿಲ್ಲ. ಆದರೆ, ಏಪ್ರಿಲ್ ೫ರ ನಂತರ ಚುನಾವಣಾ ಪ್ರಚಾರದ ಕಾವೂ ಜೋರಾಗಲಿದೆ. ತಮ್ಮ ತಮ್ಮ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರು ಭಾಗಿಯಾಗಲಿದ್ದಾರೆ. ಸಿಎಂ ಬಿಎಸ್ ವೈ, ಸಿದ್ದರಾಮಯ್ಯ, ಡಿಕೆಶಿ ಹಾಗೂ ಹೆಚ್ಡಿಕೆ ಕೂಡ ಪ್ರಚಾರವನ್ನ ನಡೆಸಲಿದ್ದಾರೆ.

ಏಪ್ರಿಲ್ ೫ರ ನಂತರ ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಬಸವಕಲ್ಯಾಣದಲ್ಲಿ ಕುಮಾರಸ್ವಾಮಿ ಮೊದಲ ಹಂತದ ಪ್ರಚಾರ ನಡೆಸಿದ್ದರು. ಇದೀಗ ಎರಡನೇ ಭಾರಿಗೆ ಕ್ಯಾಂಪೇನ್ ಮಾಡಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮತಯಾಚಿಸಲಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿಕೆ ವೇಳೆ ಸಿದ್ದು,ಡಿಕೆಶಿ ಅಬ್ಬರಿಸಿ ಬಂದಿದ್ದರು. ಏಪ್ರಿಲ್ ೫ರಿಂದ ನಾಲ್ಕು ದಿನ ಸಿದ್ದರಾಮಯ್ಯ, ಡಿಕೆಶಿ ಮತ್ತೊಮ್ಮೆ ಮಸ್ಕಿ, ಬಸವಕಲ್ಯಾಣದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ತಾವರಗೇರಾ, ಮಸ್ಕಿ, ಉಮಲೂಟಿ, ಮಲ್ಲದಗುಡ್ಡ, ತುರುವೀಹಾಳ, ಗುಂಬಳ್ಳಿ, ವಿರುಪಾಪುರ, ಗೌಡಸಬಾವಿ, ಬಳಗಾನೂರು, ಪಾಮನಕಲ್ಲೂರು, ಅಮೀನಘಡ, ಮಲ್ಲದಗುಡ್ಡ, ಸಂತೆಕೆಲ್ಲೂರುಗಳಲ್ಲಿ ಸಿದ್ದರಾಮಯ್ಯ ರೋಡ್ ಶೋ ನಡೆಸಲಿದ್ದಾರೆ. ಏ.೭ರಂದು ಬಸವಕಲ್ಯಾಣದಲ್ಲೂ ಡಿಕೆಶಿ, ಸಿದ್ದರಾಮಯ್ಯ ಅಬ್ಬರಿಸಲಿದ್ದಾರೆ. ಏಪ್ರಿಲ್ ೯ ರನಂತರ ಬೆಳಗಾವಿಯಲ್ಲಿ ಮತಯಾಚಿಸಲಿದ್ದಾರೆ.

ಇನ್ನು ಪ್ರಚಾರದ ವೇಳೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಹಾಗೂ ಸಿಎಂ ಕುಟುಂಬದ ಮೇಲಿನ ಭ್ರಷ್ಟಾಚಾರದ ಆರೋಪವನ್ನೇ ಮುಂದಿಟ್ಟು ಮತಕೀಳಲು ಕಾಂಗ್ರೆಸ್ ನಿರ್ಧರಿಸಿದೆ. ಸ್ಕಿ,ಬಸವಕಲ್ಯಾಣ,ಬೆಳಗಾವಿಯಲ್ಲಿ ಇದನ್ನೇ ಕೆಣಕಿ ಸರ್ಕಾರವನ್ನ ತೇಜೋವಧೆ ಮಾಡಲು ಕೈ ನಾಯಕರು ಫ್ಲಾನ್ರೂಪಿಸಿಕೊಡಿದ್ದಾರೆ. ಕೊರೊನಾ ವೈಫಲ್ಯ, ಪ್ರವಾಹ ಸಂತ್ರಸ್ಥರಿಗೆ ಸಿಗದ ಸೌಲಭ್ಯ, ಮೂಲಸೌಕರ್ಯಗಳ ಕೊರತೆ ಎಲ್ಲವನ್ನೂ ಜನರ ಮುಂದಿಟ್ಟು ಸರ್ಕಾರದ ವಿರುದ್ಧ ಜನರನ್ನಎತ್ತಿಕಟ್ಟಲು ಸಿದ್ದರಾಮಯ್ಯ ತಯಾರಿಮಾಡಿಕೊಂಡಿದ್ದಾರೆ.

ಮೂರು ಪಕ್ಷಗಳ ನಾಯಕರು ಏಪ್ರಿಲ್ ೫ರ ನಂತರ ಅಧಿಕೃತವಾಗಿ ಪ್ರಚಾರದ ಕಣಕ್ಕಿಳಿಯಲಿದ್ದಾರೆ. ತಮ್ಮದೇ ಆದ ಕಾರ್ಯತಂತ್ರಗಳನ್ನೂ ರೂಪಿಸಿಕೊಂಡಿದ್ದಾರೆ. ಆದರೆ ಈ ಭಾರಿಯ ಉಪಚುನಾವಣೆ ಬಿಜೆಪಿಗಿಂತ ಕಾಂಗ್ರೆಸ್​ಗೆ ಹೆಚ್ಚು ಪೂರಕವಾಗುವ ಲಕ್ಷಣಗಳು ಕಾಣಿಸುತ್ತಿವೆ

Next Story

RELATED STORIES