Top

ಪ್ರತಿಸಲ ಸಾಲ ಮಾಡಿನೇ ಬಸ್ ಖರೀದಿಸೋದು, ಸಾಲ ತೀರಿಸೋದು ಸಾಮಾನ್ಯ ಪ್ರಕ್ರಿಯೆ

ಸಿಎಂ ಯಡಿಯೂರಪ್ಪನವರು ಹೈಕಮಾಂಡ್ ಜೊತೆ ಚರ್ಚಿಸಿ, ಅವರು ಒಪ್ಪಿಗೆ ಕೊಟ್ಟ ನಂತರ ತೀರ್ಮಾನ ಮಾಡ್ತಾರೆ

ಪ್ರತಿಸಲ ಸಾಲ ಮಾಡಿನೇ ಬಸ್ ಖರೀದಿಸೋದು, ಸಾಲ ತೀರಿಸೋದು ಸಾಮಾನ್ಯ ಪ್ರಕ್ರಿಯೆ
X

ಬೆಂಗಳೂರು: ಸಾಲ ಮಾಡಿನೇ ಬಸ್ ಖರೀದಿ ಮಾಡಬೇಕಾಗುತ್ತದೆ, ಪ್ರತಿಸಲ ಸಾಲ ಮಾಡಿನೇ ಬಸ್ ಖರೀದಿಸೋದು, ಸಾಲ ತೀರಿಸೋದು ಸಾಮಾನ್ಯ ಪ್ರಕ್ರಿಯೆ ಎಂದು ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ಅವರು ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತ ಟ್ರ್ಯಾಕ್ಟರ್ ಖರೀದಿಸುವಾಗ ಶೇ.25ರಷ್ಟು ಹಾಕಿ, 75 ಸಾಲ ತಗೋತಾನೆ. ಕೆಲ ಬಸ್​ಗಳು ಸ್ಕ್ರಾಪ್ ಮಾಡಬೇಕಿವೆ. ಅವುಗಳನ್ನು ಸ್ಕ್ರಾಪ್ ಮಾಡಿದ್ಮೇಲೆ ಹೊಸ ಬಸ್ ಖರೀದಿಸಿಲ್ಲ ಅಂದ್ರೆ ಹೇಗೆ(?) ಎಂದರು.

ಇನ್ನು ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸಬೇಕಾದ್ರೇ ಹೊಸ ಬಸ್ ಖರೀದಿಸಬೇಕು. ಬೆಂಗಳೂರು, ಹುಬ್ಬಳ್ಳಿ ಧಾರವಾಡದಲ್ಲಿ ಎಲೆಕ್ಟ್ರಿಕ್ ಬಸ್ ಟೆಂಡರ್ ಕರೆದಿದ್ದೇವೆ. ಬೇರೆಯವರು ಹೂಡಿಕೆ ಮಾಡ್ತಾರೆ, ರಾಜ್ಯ ಸರ್ಕಾರ ಸಬ್ಸಿಡಿ ಕೊಡುತ್ತೆ. ಪ್ರಾಯೋಗಿಕವಾಗಿ 350 ಬಸ್​ಗಳನ್ನು ಬಿಡಲಾಗುತ್ತದೆ. ಒಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯುತ್ತದೆ ಎಂದು ಸವದಿ ಅವರು ತಿಳಿಸಿದರು.

ಸದ್ಯ ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಲು ಸಮಿತಿ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸಮಿತಿ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ. ಆದಷ್ಟು ಬೇಗ ಎಲ್ಲಾ ಸವಲತ್ತುಗಳನ್ನು ಈಡೇರಿಸಲಾಗುತ್ತದೆ ಎಂದಿದ್ದಾರೆ.

ಇನ್ನು ಸಚಿವ ಸಂಪುಟ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರು ಹೈಕಮಾಂಡ್ ಜೊತೆ ಚರ್ಚಿಸಿ, ಅವರು ಒಪ್ಪಿಗೆ ಕೊಟ್ಟ ನಂತರ ತೀರ್ಮಾನ ಮಾಡ್ತಾರೆ ಎಂದು ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ಅವರು ತಿಳಿಸಿದ್ದಾರೆ.

Next Story

RELATED STORIES