Top

ಮಾರ್ಚ್​ ಮೊದಲ ವಾರದಲ್ಲಿ ಬಜೆಟ್​ ಮಂಡನೆ - ಸಿಎಂ ಬಿ.ಎಸ್​ ಯಡಿಯೂರಪ್ಪ

ಈಗಾಗಲೇ ಬಜೆಟ್ ತಯಾರಿ ಬಗ್ಗೆ ಅಧಿಕಾರಿಗಳ ಸಭೆ ಮಾಡ್ತಾ ಇದ್ದೇನೆ

ಮಾರ್ಚ್​ ಮೊದಲ ವಾರದಲ್ಲಿ ಬಜೆಟ್​ ಮಂಡನೆ - ಸಿಎಂ ಬಿ.ಎಸ್​ ಯಡಿಯೂರಪ್ಪ
X

ಬೆಂಗಳೂರು: ಮೀಸಲಾತಿ ಹೋರಾಟ ಹೆಚ್ಚಾಗುತ್ತಿರುವ ಹಿನ್ನೆಲೆ ಸಂವಿಧಾನ ಚೌಕಟ್ಟಿನಲ್ಲಿ ಕಾನೂನು ಚೌಕಟ್ಟಿನಲ್ಲಿ ಏನೇನು ಮಾಡೋಕೆ ಸಾಧ್ಯ ಅದನ್ನು ಮಾಡೋಣ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬುಧಬವಾರ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಏನೇನು ಮಾಡಿದ್ದಾರೆ ಅದನ್ನು ನಾನು ಇಲ್ಲಿ ಮಾಡಿದ್ದೇನೆ ಅದಕ್ಕಾಗಿ ನಾವು ಕೂತು ಚರ್ಚೆ ಮಾಡ್ತಾ ಇದ್ದೇವೆ. ಕಾನೂನು ತಜ್ಞರ ಜತೆ, ಪ್ರಮುಖರ ಜತೆ ಚರ್ಚೆ ಮಾಡಿ, ಏನು ಮಾಡೋಕೆ ಸಾಧ್ಯವೋ ಅದನ್ನು ಮಾಡುತ್ತೇವೆ ಎಂದಿದ್ದಾರೆ.

ಸದ್ಯ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡುತ್ತೇವೆ. ದಿನಾಂಕ ಯಾವಾಗ ಅಂತ ಚರ್ಚೆ ಮಾಡಿ ನಿಗದಿ ಮಾಡುತ್ತೇವೆ. ಈಗಾಗಲೇ ಬಜೆಟ್ ತಯಾರಿ ಬಗ್ಗೆ ಅಧಿಕಾರಿಗಳ ಸಭೆ ಮಾಡ್ತಾ ಇದ್ದೇನೆ. ಇನ್ನೊಂದು ವಾರದಲ್ಲಿ ಬಜೆಟ್ ಸಭೆ ಪೂರ್ಣಗೊಳಿಸುತ್ತೇನೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರು ಹೇಳಿದ್ದಾರೆ.

Next Story

RELATED STORIES