Top

ಬಿಎಸ್​ವೈ ಅಧಿಕಾರದ ಗೂಟ ಹೊಡ್ಕೊಂಡು ಕೂರೋಕೆ ಆಗಲ್ಲ- ಸಿದ್ದರಾಮಯ್ಯ

ಪೋಲಿಸರು ಬಂಧಿಸಿದ್ರೆ ಜೈಲಿಗೆ ಹೊಗೋಣ. ಯಾರು ಹಿಂದೆ ಸರಿಯಬೇಡಿ, ಅರೆಸ್ಟ್ ಆಗೋಕೆ ತಯಾರಾಗಿ, ರೈತರನ್ನು ಉಳಿಸಲು ಹೋರಾಟ ಅಗತ್ಯ.

ಬಿಎಸ್​ವೈ ಅಧಿಕಾರದ ಗೂಟ ಹೊಡ್ಕೊಂಡು ಕೂರೋಕೆ ಆಗಲ್ಲ- ಸಿದ್ದರಾಮಯ್ಯ
X

ಬೆಂಗಳೂರು: ಈಗಾಗಲೇ ಕೆಪಿಸಿಸಿ ಇಂದ 2021 ಸಂಘಟನೆ ಸಂಘರ್ಷದ ವರ್ಷ ಎಂದು ಘೋಷಣೆಯಾಗಿದೆ. ಇದು ನಮ್ಮ ಮೊದಲ ಹೋರಾಟ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಫ್ರೀಡಮ್​ ಪಾರ್ಕ್​ ನಡೆದ ರಾಜಭವನ​ ಚಲೋ, ಮುತ್ತಿಗೆ ಕಾರ್ಯಕ್ರಮದಲ್ಲಿ ಸಮಾವೇಶದಲ್ಲಿಂದು ಮಾತನಾಡಿದ ಅವರು, ಈ ಹೋರಾಟ 15ನೇ ತಾರೀಖು ಮಾಡಬೇಕಿತ್ತು. ಆದರೆ, ಸಕ್ರಾಂತಿ ಹಬ್ಬ ಪ್ರಮುಖ ಹಬ್ಬ ರೈತರ ಹಬ್ಬ ಸುಗ್ಗಿ ಹಬ್ಬ ಆದ್ದರಿಂದ ಮಾಡಲಾಗಿಲ್ಲ, ಸುರ್ಜೆವಾಲಾ ಅವರಲ್ಲಿ ಮನವಿ ಮಾಡಿದ್ವಿ. 20ನೇ ತಾರೀಖು ಮಾಡಿ ಅಂತಾ ಆದೇಶ ಕೊಟ್ಟರು ಎಂದರು.

ಕಳೆದ 58 ದಿನಗಳಿಂದ ದೆಹಲಿ ಗಡಿಭಾಗದಲ್ಲಿ ಹೋರಾಟ ನಡಿತಿದೆ. ರಾಜಭವನ ಚಲೋ ರೈತರು ಮಾಡಿದ್ದಾರೆ. ನಾವು ಇವತ್ತು ದೊಡ್ಡ ಪ್ರಮಾಣದಲ್ಲಿ ಮಾಡಬೇಕು ಅಂತಾ ಕರೆಕೊಟ್ಟಿದರು. ರೈತರು ಟ್ಯಾಕ್ಟರ್​ನಲ್ಲಿ ಹೊರಟಿದರು. ಆದರೆ, ರಾಜ್ಯ ಸರ್ಕಾರ ರೈತರನ್ನು ಬೆಂಗಳೂರಿಗೆ ಬರೋದಕ್ಕೆ ಬಿಟ್ಟಿಲ್ಲ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಚಳುವಳಿ ಹತ್ತಿಕ್ಕಬಾರದು. ಅದು ತಿರುಗುಬಾಣ ಆಗುತ್ತೆ. ಯಡಿಯೂರಪ್ಪ ಅಧಿಕಾರ ಗೂಟ ಹೊಡ್ಕೊಂಡು ಕೋರೋಕೆ ಆಗಲ್ಲ, ರೈತರು ಮನಸ್ಸು ಮಾಡಿದ್ರೆ ಸರ್ಕಾರ ಕಿತ್ತೆಸೆಯುತ್ತಾರೆ ಎಂದು ಹೇಳಿದರು.

ಈಗಾಗಲೇ ರೈತರು ತೀರ್ಮಾನಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಿತ್ತೊಗೆಯಲು, ಅಭಿವೃದ್ಧಿ ಕಾರ್ಯಕ್ರಮ ಕುಂಠಿತ ಆಗಿದ್ದಾರೆ. ಜನರು ಯಾವತ್ತು ಪಡಬಾರದ ಕಷ್ಟ ಇಂದು ಪಡುತ್ತಿದ್ದಾರೆ. ಇಡೀ ದೇಶದ ಜನರು ಕಾಯ್ದೆ ಬೇಡ ಅಂತಿದೀರಾ(?) ಆದ್ರೂ ಮೋದಿಯವರರೇ ನಿವ್ಯಾಕೆ ಜಾರಿಗೆ ತರೋದಕ್ಕೆ ಹೊರಟಿದ್ದಾರೆ. 58 ದಿನಾ ಆಯ್ತು. ಡಿಸೆಂಬರ್ ಜನವರಿ ಚಳುವಳಿಯಲ್ಲಿ ಮಕ್ಕಳ ಮಹಿಳೆಯರು ಭಾಗವಹಿಸಿದ್ದಾರೆ ಎಂದಿದ್ದಾರೆ.

ಪ್ರಧಾನಿ ಮೋದಿಯವರೇ ಮನುಷ್ಯತ್ವ ಇದ್ರೆ, ಮಾನ-ಮಾರ್ಯಾದೆ ಇದ್ರೆ ಅವರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಬಾರದಿತ್ತು. ನೀವು ಹಠಕ್ಕೆ ಬೀದಿದ್ದಾರೆ. ಸುಪ್ರೀಂಕೋರ್ಟ್​ ಕೂಡ 3 ಮಾರಕ ಕಾಯ್ದೆಗೆ ಸ್ಟೇ ಕೊಟ್ಟಿದೆ. ರೈತರಿಗೆ ಅನುಕೂಲ ಇದ್ರೆ ಯಾಕೆ ಸ್ಟೇ ಕೊಡತಿತ್ತು. ನಿಮಗೆ ಮುಖಭಂಗವಾಗಿದೆ. ಕಮಿಟಿ ಮಾಡಿದ್ದೀರಾ(?) ಕಮಿಟಿ ಬೇಡ ಅಂತಿದ್ದಾರೆ. ಅದು ನಿಷ್ಪಕ್ಷಪಾತ ಕಮಿಟಿ ಅಲ್ಲ, ನ್ಯೂಟ್ರಲ್ ಕಮಿಟಿ ಅಲ್ಲ, ಬೇಕಾದಷ್ಟು ಎಕ್ಸ್​ಪರ್ಟ್ ಇದಾರೆ ತಜ್ಞರು ಇದ್ದಾರೆ. ಅವರ ಕಮಿಟಿ ಮಾಡಿ ಎಂದು ನುಡಿದರು.

ರೈತರು ಬಯಸ್ತಾ ಇರೋದು ಮೂರು ಕಾಯ್ದೆ ವಾಪಾಸ್ ತೆಗದುಕೊಳ್ಳುವುದು. ರೈತರು ಇಂದು ಸಿಡಿದೆದ್ದೆದ್ದಾರೆ. ದಂಗೆ ಎಳುವಂತೆ ಮಾಡಬೇಡಿ ಯಡಿಯೂರಪ್ಪನವರೇ ಮೋದಯವ್ರೇ. ಹೋರಾಟದಲ್ಲಿ ಭಾಗವಹಿಸಿದವರಿಗೆ ಹೇಳುತ್ತೇನೆ. ಹೋರಾಟ ಭಾಷಣ ಮಾಡಿ ಮುಗಿಸುವುದಿಲ್ಲ, ರಾಜಭವನ ಮುತ್ತಿಗೆ ಹಾಕೋದು. ಪೊಲೀಸರು ಬಂಧಿಸಿದ್ರೆ ಜೈಲಿಗೆ ಹೊಗೋಣ. ಯಾರು ಹಿಂದೆ ಸರಿಯಬೇಡಿ, ಅರೆಸ್ಟ್ ಆಗೋಕೆ ತಯಾರಾಗಿ, ರೈತರನ್ನು ಉಳಿಸಲು ಹೋರಾಟ ಅಗತ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ತಮ್ಮ ಭಾಷಣದಲ್ಲಿ ರೈತರಿಗೆ ಕಿವಿಮಾತು ಹೇಳಿದರು.

Next Story

RELATED STORIES