Top

ರೈತರ ಪ್ರತಿಭಟನೆಯನ್ನುದ್ದೇಶಿಸಿ ಸಿಎಂ ಬಿಎಸ್​ ಯಡಿಯೂರಪ್ಪ ಸುದ್ದಿಗೋಷ್ಠಿ

ರೈತರಿಗೆ ಅನುಕೂಲ ಆಗುವಂತ ಕಾರ್ಯ ಮಾಡುತ್ತಿದ್ದೇವೆ. ನಾನು ನಿಮ್ಮ ಜೊತೆ ಇದ್ದೇನೆ. ನಿಮ್ಮ ಹಿತಕ್ಕೆ ಧಕ್ಕೆ ಆಗುವ ಕೆಲಸ ಈ ಯಡಿಯೂರಪ್ಪನಿಂದ ಆಗೋದಿಲ್ಲ.

ರೈತರ ಪ್ರತಿಭಟನೆಯನ್ನುದ್ದೇಶಿಸಿ ಸಿಎಂ ಬಿಎಸ್​ ಯಡಿಯೂರಪ್ಪ ಸುದ್ದಿಗೋಷ್ಠಿ
X

ರೈತರ ಪ್ರತಿಭಟನೆ ಹಿನ್ನೆಲೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 

ಬೆಂಗಳೂರು: ಎಪಿಎಂಸಿ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಹೋರಾಟ ನಡೆದಿದೆ, ನಾನು ರೈತರಿಗೆ ಕಾಯ್ದೆಗಳ ತಿದ್ದುಪಡಿ ಬಗ್ಗೆ ಮನವರಿಕೆ ಮಾಡೋ ಪ್ರಯತ್ನ ಮಾಡಿದೆ. ಆದರೆ, ಅವರು ಧರಣಿ ಮಾಡಲೇಬೇಕು ಎಂದು ನಿರ್ಧರಿಸಿದ್ದರು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸೋವಾರ ಹೇಳಿದ್ದಾರೆ.

ರೈತರ ಪ್ರತಿಭಟನೆ ಹಿನ್ನೆಲೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಅಧಿಕಾರಕ್ಕಾಗಿ ಅಂಟಿಕೊಂಡು ಕುಳಿತವನಲ್ಲ. ರೈತನ ಮಗನಾಗಿ ರೈತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಸಿಎಂ ಆದವನು ನಾನು ಎಂದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತ ತನ್ನ ಬೆಳೆ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ನನ್ನ ಬೆಳೆ ನನ್ನ ಹಕ್ಕು ಅಡಿ ರೈತ ಎಲ್ಲಿ ಬೇಕಾದರೂ ಬೆಳೆ ಮಾರಾಟ ಮಾಡಬಹುದು. ತನಗೆ ಎಲ್ಲಿ ಒಳ್ಳೆ ಬೆಲೆ ಸಿಗುತ್ತೋ, ಅಲ್ಲಿ ಮಾರಾಟ ಮಾಡೋಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಎಲ್ಲಿ ಒಳ್ಳೆ ಬೆಲೆ ಸಿಗುತ್ತೋ, ಅಲ್ಲಿ ಮಾರಬಹುದು. 6 ತಿಂಗಳು 1 ವರ್ಷ ನೋಡಿ ಇದು ನಿಮಗೆ ಹೇಗೆ ಇದು ಉಪಯೋಗ ಆಗುತ್ತೆ ಅಂತ ನಾವೇನು ಎಪಿಎಂಸಿ ಮುಚ್ಚಲ್ಲ. ಎಪಿಎಂಸಿಯಲ್ಲೂ ಮಾರಾಟ ಮಾಡಬಹುದು ಎಂದಿದ್ದಾರೆ.

ಈಗಲೂ 58 ಎಕರೆ ಭೂಮಿ ಕೊಂಡುಕೊಳ್ಳಲು ಅವಕಾಶ ಇದೆ. ಕೃಷಿಗೆ ಯೋಗ್ಯವಲ್ಲದ ಜಮೀನಿನಲ್ಲಿ ಕೈಗಾರಿಕೆ ಶುರು ಮಾಡಬಹುದು. ಯಾರೂ ಬೇಕಾದರೂ ಕೃಷಿ ಮಾಡಬಹುದು. ನಮಗೆ ಕೈಗಾರಿಕೆಗಳ ಅವಶ್ಯಕತೆಯೂ ಇದೆ. ನಾನು ರೈತರಿಗೆ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ. ಮುಂಬರುವ ದಿನಗಳಲ್ಲಿ ರೈತರಿಗೇ ಈ ಬಗ್ಗೆ ಮನವರಿಕೆ ಆಗಲಿದೆ. ಅನವಶ್ಯಕವಾಗಿ ರೈತರನ್ನು ಗೊಂದಲದಲ್ಲಿ ದೂಡಬೇಡಿ ಎಂದು ತಿಳಿಸಿದರು.

ರೈತರಿಗೆ ಅನುಕೂಲ ಆಗುವಂತ ಕಾರ್ಯ ಮಾಡುತ್ತಿದ್ದೇವೆ. ನಾನು ನಿಮ್ಮ ಜೊತೆ ಇದ್ದೇನೆ. ನಿಮ್ಮ ಹಿತಕ್ಕೆ ಧಕ್ಕೆ ಆಗುವ ಕೆಲಸ ಈ ಯಡಿಯೂರಪ್ಪನಿಂದ ಆಗೋದಿಲ್ಲ. ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಿ ಸಾಗುವಳಿ ಮಾಡಬಹುದು. ನೀರಾವರಿ ಅನುಕೂಲ ಇರದ ಭೂಮಿಯಲ್ಲಿ ಕೈಗಾರಿಕೆ ಶುರು ಮಾಡಬಹುದು ಎಂದು ಭರವಸೆ ನೀಡಿದರು.

ನೀರಾವರಿ ಜಮೀನನನ್ನ ಕೊಂಡರೆ ನೀರಾವರಿಗೆ ಉಪಯೋಗಿಸಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಿಗೂ ಅನ್ಯಾಯ ಆಗದ ರೀತಿ ಕಾಯಿದೆ ರೂಪಿಸಿದ್ದೇವೆ. ಎಸ್​ಸಿ/ಎಸ್​ಟಿ ಅವರ ಭೂಮಿಕೊಳ್ಳೋ ಆಗಿಲ್ಲ. ಎಲ್ಲಾ ಕಂಡಿಷನ್ಸ್ ಹಾಕಿಯೇ ಕಾಯ್ದೆ ಮಾಡಿದ್ದೇವೆ ಎಂದು ಹೇಳಿದರು.

100ಕ್ಕೆ ಶೇ.85ರಷ್ಟು ರೈತರು ಖಂಡಿತ ಇದನ್ನು ಮುಂದೆ ಒಪ್ಪೇ ಒಪ್ಪುತ್ತಾರೆ. ಸಭೆಯಲ್ಲಿ ರೈತ ಮುಖಂಡರಿಗೆ ಮನವರಿಕೆ ಮಾಡೋ ಪ್ರಯತ್ನ ಮಾಡಿದೆ. ಆದರೆ, ಅವರು ಏನೂ ಒಪ್ಪಲಿಲ್ಲ. ಚಳವಳಿ ಮಾಡ್ತೀವಿ ಅಂತ ನಿರ್ಧಾರ ಮಾಡಿದರು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಾತನಾಡಿದರು.​

Next Story

RELATED STORIES