Top

ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುತ್ತಾರೆ - ಸಿಎಂ ಬಿಎಸ್​ವೈ ವಿಶ್ವಾಸ

ಜನವರಿ 1ರಿಂದ ಶಾಲೆ ಕಾಲೇಜು ಆರಂಭವಾಗಲಿದೆ

ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುತ್ತಾರೆ - ಸಿಎಂ ಬಿಎಸ್​ವೈ ವಿಶ್ವಾಸ
X

ಬೆಂಗಳೂರು: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಕಾಂಗ್ರೆಸ್​ಗೆ ಉತ್ಸಾಹ ಇಲ್ಲ ಎಂಬುದು ಗೊತ್ತಾಗುತ್ತದೆ. ಶಾಲೆ ಆರಂಭ ಕುರಿತು ಚರ್ಚೆ ಮಾಡಲಿದ್ದೇವೆ. ಜನವರಿ 1ರಿಂದ ಶಾಲೆ ಕಾಲೇಜು ಆರಂಭವಾಗಲಿದೆ. ಸಂಪುಟ ಸಭೆಯಲ್ಲಿ ಚರ್ಚಿಸಲಿದ್ದೇವೆ ಎಂದರು.

ಜನವರಿ 1 ರಿಂದ ಶಾಲಾ ಕಾಲೇಜು ಓಪನ್ ವಿಚಾರದಲ್ಲಿ ನಿರ್ಧಾರದಲ್ಲಿ ಬದಲಾವಣೆ ಆಗಲ್ಲ ಅಂದುಕೊಂಡಿದ್ದೇನೆ. ಶಾಲೆ ಆರಂಭ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಕೊರೋನಾ ರೂಪಾಂತರ ಬಗ್ಗೆ ಆತಂಕ ಪಡುವಂತದ್ದು ಏನೂ ಇಲ್ಲ ಎಂದು ಸಿಎಂ ಬಿಎಸ್​ವೈ ಅವರು ತಿಳಿಸಿದ್ದಾರೆ.

Next Story

RELATED STORIES