ರಾಜಧಾನಿಯಲ್ಲಿ ಬೆನ್ಜ್ ಹಾಗೂ ದೊಡ್ಡ ಕಾರುಗಳೇ ಓಡಾಡಬೇಕಾ - ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರಶ್ನೆ
ಸರ್ಕಾರದ ವೈಫಲ್ಯವನ್ನ ವಿಪಕ್ಷ ಹಾಗೂ ಸಂಘಟನೆಗಳು ಪ್ರಶ್ನಿಸುತ್ತಿವೆ. ಇವರು ಅದನ್ನ ಮಾಡಿರಲಿಲ್ಲವೇ(?)

X
Admin 226 Jan 2021 12:42 PM GMT
ಚಿಕ್ಕಮಗಳೂರು : ಕೆಂಪೇಗೌಡ ಕಟ್ಟಿದ ಬೆಂಗಳೂರು, ರಾಜ್ಯದ ಆಸ್ತಿ. ರಾಜಧಾನಿಯಲ್ಲಿ ಬೆನ್ಜ್ ಹಾಗೂ ದೊಡ್ಡ ಕಾರುಗಳೇ ಓಡಾಡಬೇಕಾ(?) ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯ-ಕೇಂದ್ರ ಸರ್ಕಾರಗಳ ಅಂತ್ಯದ ದಿನ ಹತ್ರ ಬರ್ತಿದೆ. ರೈತ ವಿರೋಧಿ ಸರ್ಕಾರ ಎಂಬುದಕ್ಕೆ ದೆಹಲಿ ದೌರ್ಜನ್ಯ ಸಾಕ್ಷಿ ಎಂದರು.
ರೈತರ ಕೋಪ-ಶಾಪ-ತಾಪ ಎಲ್ಲವೂ ಇವರಿಗೆ ತಗುಲುತ್ತದೆ. ರೈತರಿಲ್ಲದೆ ಬೆಂಗಳೂರಿಗರು ಊಟ ಮಾಡುತ್ತಾರಾ(?) ರೈತರ ಮಕ್ಕಳೆಂದು ಶಾಲು ಹಾಕಿಕೊಂಡು ಸರ್ಕಾರ ಮಾಡುವವರು ಅವರನ್ನ ಏಕೆ ಬಿಡುವುದಿಲ್ಲ, ಸರ್ಕಾರದ ವೈಫಲ್ಯವನ್ನ ವಿಪಕ್ಷ ಹಾಗೂ ಸಂಘಟನೆಗಳು ಪ್ರಶ್ನಿಸುತ್ತಿವೆ. ಇವರು ಅದನ್ನ ಮಾಡಿರಲಿಲ್ಲವೇ(?) ಎಂದು ಡಿ.ಕೆ ಶಿವಕುಮಾರ್ ಅವರು ಮಾತನಾಡಿದರು.
Next Story