Top

ಆದಾಯಕ್ಕಿಂತ ಹೆಚ್ಚು ಗಳಿಕೆ ಆರೋಪ: ಅಧಿಕಾರಿಗಳ ಮೇಲೆ ಎಸಿಬಿ ದಾಳಿ

ಸರ್ಕಾರಿ ನೌಕರಿಗೆ ಸೇರಿದ ಅತ್ಯಲ್ಪ ಅವಧಿಯಲ್ಲೆ ಕೋಟಿ ಕೋಟಿ ಹಣ, ಆಸ್ತಿಯನ್ನ ಅಕ್ರಮವಾಗಿ ಸಂಪಾದನೆ ಮಾಡಿದ ಖಚಿತ ಮಾಹಿತಿ ಮೇರೆಗೆ‌ ದಾಳಿ ನಡೆಸಿದೆ.

ಆದಾಯಕ್ಕಿಂತ ಹೆಚ್ಚು ಗಳಿಕೆ ಆರೋಪ: ಅಧಿಕಾರಿಗಳ ಮೇಲೆ ಎಸಿಬಿ ದಾಳಿ
X

ಹುಬ್ಬಳ್ಳಿ: ಇಂದು ಬೆಳ್ಳಂಬೆಳಗೆ ಫಿಲ್ಡ್​ಗಿಳಿದ ಎಸಿಬಿ ಅವರು ದಾಳಿಗೆ ದಂಗಾದ ಭ್ರಷ್ಟ ಕುಳಗಳು. ಲಾಕರ್​ನಲ್ಲಿ‌ ಸಿಕ್ಕ ಕಂತೆ ಕಂತೆ ಹಣ ಹಾಗೂ ಆಭರಣ ಕಂಡು ಎಸಿಬಿ‌ ಅಧಿಕಾರಿಗಳಿಗೆ ಶಾಕ್ ಆಗಿದ್ದಾರೆ.

ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಇಂದು ಬೆಳ್ಳ ಬೆಳಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯು ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಂಗಾಗಿ ಹೋಗಿದರು. ಸಣ್ಣ ನೀರಾವರಿ ಇಲಾಖೆಯ ಎಇಇ ದೇವರಾಜ ಕೆ. ಶಿಗ್ಗಾವಿ ಅವರ ನಿವಾಸ ಮತ್ತು ತಾಯಿ ಹಾಗೂ ಮಾವನ ಮನೆಯ ಮೇಲೆ ದಾಳಿ ಮಾಡಿದ್ದ ಎಸಿಬಿ ಅಧಿಕಾರಿಗಳಿಗೆ ಸಿಕ್ಕ ಚಿನ್ನಾಭರಣ, ನಗದು ಹಣ ನೋಡಿ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದರು.

ಮಂಗಳವಾರ ಬೆಳಗ್ಗೆ ಏಕಕಾಲಕ್ಕೆ ದಾಳಿ ಮಾಡಿ, ಆದಾಯಕ್ಕಿಂತ ಹೆಚ್ಚಿನ ಸ್ಥಿರ-ಚಿರಾಸ್ತಿಯ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ಬಳಿಕ ಲಾಕರ್ ಪರಿಶೀಲನೆಗೆ ದೇವರಾಜ ಶಿಗ್ಗಾವಿಯನ್ನು ಕರೆದೊಯ್ದದರು.

ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಲಾಕರ್ ಪರಿಶೀಲನೆಯಲ್ಲಿ ಕಂತೆ ಕಂತೆ ಹಣ ಹಾಗೂ ಬಂಗಾರದ ಆಭರಣಗಳು ಪತ್ತೆಯಾಗಿವೆ. 56.5 ಲಕ್ಷ ಹಣ ಹಾಗೂ 400 ಗ್ರಾಂ ಬಂಗಾರದ ಆಭರಣಗಳು, 400 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 23 ಎಕರೆ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿದ್ದು, ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.

ಇನ್ನೂ ಅಪಾರ ಪ್ರಮಾಣ ಅಕ್ರಮ ಆಸ್ತಿಯ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಷ್ಟೇಅಲ್ಲದೆ ಭ್ರಷ್ಟ ಅಧಿಕಾರಿಯ ಬ್ಯಾಂಕ್ ಖಾತೆಯಲ್ಲಿ 30 ಲಕ್ಷ ಠೆವಣಿ ಇಟ್ಟಿರೋದು ಪತ್ತೆಯಾಗಿದೆ. ಪತ್ನಿ, ಅಳಿಯನ ಹೆಸರಿನಲ್ಲಿ ಇಂಡಿಯನ್ ಒವರ್ ಸಿಸ್ ಬ್ಯಾಂಕ್​ನ ಉಳಿತಾಯ ಖಾತೆಯಲ್ಲಿ ಹಣ ಪತ್ತೆಯಾಗಿದೆ.

ಸರ್ಕಾರಿ ನೌಕರಿಗೆ ಸೇರಿದ ಅತ್ಯಲ್ಪ ಅವಧಿಯಲ್ಲೆ ಕೋಟಿ ಕೋಟಿ ಹಣ, ಆಸ್ತಿಯನ್ನ ಅಕ್ರಮವಾಗಿ ಸಂಪಾದನೆ ಮಾಡಿದ ಖಚಿತ ಮಾಹಿತಿ ಮೇರೆಗೆ‌ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಯ ಭೇಟೆಯಾಡಿದ್ದಾರೆ.

Next Story

RELATED STORIES