Top

ಬಿಜೆಪಿಯವರದ್ದು ವಚನಭ್ರಷ್ಟ ಸರ್ಕಾರ, ಅವರು ಕೊಟ್ಟ ಯಾವ ಭರವಸೆ ಈಡೇರಿಸಿಲ್ಲ

ನೀರಾವರಿಗೆವ 1.5 ಲಕ್ಷ ಕೋಟಿ ಖರ್ಚು ಎಂದಿದ್ದರು. ಬ್ಯಾಂಕ್​ನಲ್ಲಿರುವ ರೈತರ ಸಾಲಮನ್ನಾ ಎಂದಿದ್ದರು.

ಬಿಜೆಪಿಯವರದ್ದು ವಚನಭ್ರಷ್ಟ ಸರ್ಕಾರ, ಅವರು ಕೊಟ್ಟ ಯಾವ ಭರವಸೆ ಈಡೇರಿಸಿಲ್ಲ
X

ಬೆಂಗಳೂರು: ಸಿಎಂ ಕೊಟ್ಟಿರುವ ಉತ್ತರ ತೃಪ್ತಿಯಾಗಿಲ್ಲ, ಬಿಜೆಪಿಯವರದ್ದು ವಚನಭ್ರಷ್ಟ ಸರ್ಕಾರ. ಅವರು ಕೊಟ್ಟ ಯಾವ ಭರವಸೆ ಈಡೇರಿಸಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಎಸ್​ವೈ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿಗೆವ 1.5 ಲಕ್ಷ ಕೋಟಿ ಖರ್ಚು ಎಂದಿದ್ದರು. ಬ್ಯಾಂಕ್​ನಲ್ಲಿರುವ ರೈತರ ಸಾಲಮನ್ನಾ ಎಂದಿದ್ದರು. 5000 ಕೋಟಿ ರೈತರ ಫಂಡ್ ಇಡುತ್ತೇವೆ. ರೈತರ ಮಕ್ಕಳ ಶಿಕ್ಷಣಕ್ಕೆ ಫಂಡ್ ಇಡುತ್ತೇವೆ ಅಂದರು. ಇಸ್ತ್ರೇಲ್​ಗೆ 3 ಸಾವಿರ ರೈತರ ಮಕ್ಕಳನ್ನ ಕಳಿಸುತ್ತೇವೆ ಅಂದರು. ಅಧ್ಯಯನಕ್ಕಾಗಿ ಕಳಿಸ್ತೇವೆ ಅಂದ್ರು ಕಳಿಸಲಿಲ್ಲ ಎಂದರು.

ಉನ್ನು ಶಾಸಕರ ಅನುದಾನದ ಬಗ್ಗೆ ಉತ್ತರವಿಲ್ಲ, 5,498 ಕೋಟಿ 15ನೇ ಪೇ ಕಮೀಷನ್ ಹಣ ಬರಬೇಕು. ಕೇಂದ್ರದಲ್ಲಿ ಅದನ್ನೂ ಕೇಳಲಿಲ್ಲ, ಎಸ್ಸಿಪಿ, ಟಿಎಸ್ಪಿ ಹಣ ನಾವು 30 ಸಾವಿರ ಕೋಟಿ ಇಟ್ಟಿದ್ದೆವು. ಇವರು 25 ಸಾವಿರ ಕೋಟಿಗೆ ಇಳಿಸಿದ್ದಾರೆ. ಎಸ್ಸಿ, ಎಸ್ಟಿ, ಮೈನಾರಿಟಿ, ಒಬಿಸಿ ಮಕ್ಕಳ ಸ್ಕಾಲರ್ ಪೆಂಡಿಂಗ್ ಉಳಿಸಿದ್ದಾರೆ. ಎಲ್ಲಾ ಕಾರ್ಯಕ್ರಮಗಳನ್ನ ನಿಲ್ಲಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Next Story

RELATED STORIES