Top

ಬರ್ತ್ ಡೇ ದಿನವೇ ನಡೆಯಿತು 'ಡೆಡ್ಲಿ ಅಟ್ಯಾಕ್'!

ಕೈಕೊಟ್ಟ ಪ್ರೇಯಿಸಿಯಿಂದ ಹುಚ್ಚನಂತಾಗಿದ್ದ 'ಲವ್ವರ್ ಬಾಯ್'!

ಬರ್ತ್ ಡೇ ದಿನವೇ ನಡೆಯಿತು ಡೆಡ್ಲಿ ಅಟ್ಯಾಕ್!
X

ಮಂಗಳೂರು: ಅವರದ್ದೆಲ್ಲ ಸೋಶಿಯಲ್ ಮೀಡಿಯಾ ಫ್ರೆಂಡ್ಸ್ ಗ್ರೂಪ್. ಅಲ್ಲೇ ಗುರುತು, ಪರಿಚಯ. ಅಲ್ಲೇ ಪ್ರೀತಿ, ಪ್ರೇಮ. ಹೀಗೆ ಪರಿಚಯವಾದ ಜಾಲತಾಣದ ಪ್ರೇಮಿಯೊಬ್ಬನಿಗೆ 'ಇನ್ ಸ್ಟಾಗ್ರಾಮ್' ಚೆಲುವೆ ಕೈಕೊಟ್ಟಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ, ಗೆಳೆಯರ ಗುಂಪು ಕಟ್ಟಿ ಮಾಡಿದ್ದು ಮಾತ್ರ ಕಂಬಿ ಎಣಿಸೋ ಕೆಲಸ. ಪಾಗಲ್ ಪ್ರೇಮಿಯ ಈ ಅಟ್ಯಾಕ್ ಆತನ ಸಂಗಡಿಗರನ್ನೂ ಪೊಲೀಸರ ಅತಿಥಿಯಾಗುವಂತೆ ಮಾಡಿದೆ.

ಹದಿಹರೆಯದ ಲವ್​ ಅದೆಂತಹಾ ದುಸ್ಸಾಹಸಕ್ಕೂ ಕೈ ಹಾಕಿಸುತ್ತೆ ಅನ್ನೊದು ಎಲ್ರಿಗೂ ಗೊತ್ತು. ಮಂಗಳೂರಿನಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದೆ. ಹೇಳಿ ಕೇಳಿ ಅವರದ್ದೆಲ್ಲ ಜಾಲತಾಣದ ಕೂಟ. ಎಲ್ಲೋ ಇದ್ದವರು ಇನ್ನೆಲ್ಲೋ ಸಂಧಿಸಿ ಎಂಜಾಯ್ ಮಾಡ್ತಾರೆ. ಹೀಗೆ ಎಂಜಾಯ್ ಮಾಡೋ ಹೊತ್ತಿಗೆ ತ್ರಿಶೂಲ್ ಎಂಬ ಯುವಕನಿಗೆ ಇನ್ ಸ್ಟಾಗ್ರಾಮ್ ನಲ್ಲೊಬ್ಬಳು ಹುಡುಗಿ ಪರಿಚಯವಾಗ್ತಾಳೆ. ಪರಿಚಯವಾದಷ್ಟೇ ಬೇಗ ಪ್ರೀತಿನೂ ಆಗುತ್ತೆ. ಹೀಗೆ ಪ್ರೀತಿ ಪ್ರೇಮ ಅಂತಾ ಒಂದೂವರೆ ವರುಷ ಎಂಜಾಯ್ ಮಾಡಿದ್ದಾರೆ. ಕೊನೆಗೊಂದು ದಿನ ಆ ಹುಡುಗಿಗೆ ಅದೇನಾಯ್ತೋ ಗೊತ್ತಿಲ್ಲ. ಏಕಾಏಕಿ ಈ ಎಂಕ್ ಬೊರ್ಚಿ ಮಾರಾಯ (ನೀನು ನಂಗೆ ಬೇಡ ಮಾರಾಯ-ತುಳುವಿನಲ್ಲಿದೆ) ಅಂತಾ ಕಡ್ಡಿ ತುಂಡರಿಸಿದಂತೆ ಆತನ ಪ್ರೇಮವನ್ನೇ ರಿಜೆಕ್ಟ್ ಮಾಡಿ ಬಿಟ್ಟಿದ್ದಾಳೆ. ಇಷ್ಟಾಗುತ್ತಲೇ ಈ ಸ್ಪುರದ್ರೂಪಿ ಯುವಕ ತ್ರಿಶೂಲ್ ಹುಚ್ಚನಂತಾಗಿದ್ದಾನೆ. ಈ ಇಜ್ಜಾಂದೆ ಯಾನ್ ಬದಕುಜ್ಜಿ" (ನೀನು ಇಲ್ಪದೇ ನಾನು ಬದುಕಲ್ಲ) ಅಂತಾ ಗಳಗಳನೆ ಅಂತಾ ಅತ್ತುಕೊಂಡಿದ್ದಾನೆ. ಇತ್ತ ಕೈಕೊಟ್ಟ ಯುವತಿ ಇನ್ನೊಬ್ಬ ಹುಡುಗನ ಜೊತೆ ಎಂಗೇಜ್ ಆಗಿದ್ದಾಳೆ.

ಹೇಳಿಕೇಳಿ ಈ ತ್ರಿಶೂಲನ ಬ್ಯಾಗ್ರಂಡೇ ಸರಿಯಿಲ್ಲ. ಇನ್ನೂ ಪ್ರಾಪ್ತ ವಯಸ್ಸಿಗೆ ಬರೋ ಮುನ್ನವೇ ಕೊಲೆಯತ್ನ ಕೇಸೊಂದರಲ್ಲಿ ಬಂದರು ಠಾಣೆಯಲ್ಲಿ ಕೇಸು ಜಡಿಸಿಕೊಂಡವ. ತನ್ನ ಪ್ರೇಯಸಿ ಕೈಕೊಟ್ಟಿದರಿಂದ ಸಹಜವಾಗಿಯೇ ಗರಂ ಆಗಿದ್ದ. ತಾನು ನೀಡಿದ್ದ ಗಿಫ್ಟ್ ಅನ್ನ ವಾಪಾಸ್ ಪಡೆಯಲು ಅಂತಾ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಕರೆಸಿಕೊಂಡಿದ್ದ. ಆದರೆ ಜನನಿಬಿಡ ಬಂಟ್ಸ್ ಹಾಸ್ಟೆಲ್​ನಲ್ಲಿ ಆಕೆಯನ್ನ ಹಾಗೇ ಬಿಟ್ಟುಕಳುಹಿಸಿದ್ದ. ಅಲ್ಲಿಗೆ ಸುಮ್ಮನಾಗದ ತ್ರಿಶೂಲ್ ಸಾಲ್ಯಾನ್ ತನ್ನಿಬ್ಬರು ಫ್ರೆಂಡ್ಸ್​ಗಳಾದ ಸಂತೋಷ್ ಪೂಜಾರಿ ಹಾಗೂ ದ್ಯಾನಿಶ್ ಜೊತೆ ಒಂದೇ ಬೈಕ್ ಅನ್ನ ಏರಿ ಆಕೆಯನ್ನ ಬೆನ್ನತ್ತಿದ್ದಾನೆ.

ಹೀಗೆ ಹೋದವಳು ಆ ಹುಡುಗಿ ನೇರವಾಗಿ ಹೊಟೇಲ್ ಕುಮಾರ್ ಇಂಟರ್ ನ್ಯಾಶನಲ್ ಒಳ ಹೊಕ್ಕಿದ್ದಾಳೆ. ಅಲ್ಲಿ ಮೊದಲೇ ಇದ್ದ ಒಂದಿಬ್ಬರು ಫ್ರೆಂಡ್ಸ್ ಜೊತೆ ಇನ್ನೇನು ತನ್ನ ಬರ್ತ್ ಡೇ ಪಾರ್ಟಿ ಮಾಡೋಕೆ ಅಂತಾ ಮುಂದಾಗಿದ್ದಾಳೆ. ಅಷ್ಟೊತ್ತಿಗೆ ಎರಗಿ ಬಂದ ತ್ರಿಶೂಲ್ ಮತ್ತು ಆತನ ಸಂಗಡಿಗರು ಹೆಲ್ಮೆಟ್, ಚೂರಿಯಿಂದ ಯದ್ವಾತದ್ವ ದಾಳಿ ನಡೆಸಿದ್ದಾರೆ. ಪರಿಣಾಮ ಮಾಜಿ ಪ್ರೇಯಸಿ ಜೊತೆಗಿದ್ದ ಯುವಕ ಪ್ರತೀಕ್ಷ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ.

ಇಷ್ಟೆಲ್ಲಾ ಘಟನೆ ಹೊಟೇಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತನ್ನ ಮಾಜಿ ಪ್ರಿಯಕರನ ಮೇಲೆ ಯುವತಿಯೇ ಕದ್ರಿ ಠಾಣೆಗೆ ದೂರು ನೀಡಿದ್ದಾಳೆ. ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನ ಕದ್ರಿ ಪೊಲೀಸರು ಎತ್ತಾಕಿಕೊಂಡು ಬಂದಿದ್ದಾರೆ..

ಸೋಶಿಯಲ್ ಮೀಡಿಯದಲ್ಲಾದ ಪರಿಚಯ, ಪೋಷಕರು ನೀಡಿದ ಹಣದಿಂದ ಮಜಾ ಉಡಾಯಿಸೋ ಈ ಹದಿಹರೆಯದ ಯುವಕರನ್ನ ಅದೆಂತಹ ಸೆಳೆತಕ್ಕೆ ತಳ್ಳಿದೆ ಅಂದ್ರೆ, ಅದೆಲ್ಲೆಲ್ಲೋ ಪರಿಚಯವಾದರು ಇನ್ನೆಲ್ಲೋ ಭೇಟಿ ಅಗೋವಲ್ಲಿಗೆ ತಲುಪಿಸಿದೆ. ಕೊನೆಗೂ, ಟೈಂ ಪಾಸ್ ಲವ್ವ್ ಗಳು ಇಲ್ಲಿ ಕೈಕೊಟ್ಟಿವೆ. ಇನ್ನೂ ಶಿಕ್ಷಣ, ಉದ್ಯೋಗ ಅಂತೆಲ್ಲಾ ಇರಬೇಕಿದ್ದ ಹದಿಹರೆಯದ ಈ ಯುವಕರು ಜೈಲು, ಕೇಸು ಅಂತಾ ಹೆಣಗಾಡುವಂತಾಗಿದೆ.

Next Story

RELATED STORIES