Top

ಇಂದು ಸಿಎಸ್​ಕೆ ವಸರ್ಸ್​​ ಆರ್​ಆರ್​ ತಂಡಗಳ ನಡುವೆ ಕಾದಾಟ

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಫಿಟ್‌ನೆಸ್ ತಂಡದ ಚಿಂತೆಗೆ ಕಾರಣವಾಗಿದೆ.

ಇಂದು ಸಿಎಸ್​ಕೆ ವಸರ್ಸ್​​ ಆರ್​ಆರ್​ ತಂಡಗಳ ನಡುವೆ ಕಾದಾಟ
X

ದುಬೈ: 13ನೇ ಆವೃತ್ತಿಯ ಐಪಿಎಲ್ 2020 ದುಬೈ ಇಂಟರ್​ನ್ಯಾಷನಲ್​​ ಕ್ರೀಡಾಂಗಣದಲ್ಲಿ ಇಂದು ನಾಲ್ಕನೇ ಪಂದ್ಯ ನಡೆಯಲಿದೆ. ಮೊದಲ ಮೂರು ಪಂದ್ಯಗಳಿಂದ ಕ್ರಿಕೆಟ್​ ಫ್ಯಾನ್ಸ್​ ಭರಪೂರ ಮನರಂಜನೆಯನ್ನು ಪಡೆದುಕೊಂಡಿದ್ದು, ನಾಲ್ಕನೇ ಪಂದ್ಯದಲ್ಲೂ ಇದನ್ನೇ ನಿರೀಕ್ಷಿಸಲಾಗುತ್ತಿದೆ. ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಟ ನಡೆಸಲಿವೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ನ ಇತಿಹಾಸದಲ್ಲಿ ಸಿಎಸ್​ಕೆ ಮತ್ತು ಆರ್​ಆರ್​ ತಂಡಗಳು ಈವರೆಗೆ 22 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ 14 ಪಂದ್ಯಗಳಲ್ಲಿ ಸಿಎಸ್‌ಗೆ ಗೆಲುವು ನಗೆ ಬೀರಿದೆ. 8 ಪಂದ್ಯಗಳಲ್ಲಿ ಮಾತ್ರ ರಾಜಸ್ಥಾನ ರಾಯಲ್ಸ್ ಗೆದ್ದಿದೆ.

ಈ ಆವೃತ್ತಿಯಲ್ಲಿ ಸಿಎಸ್​ಕೆ ತಂಡಕ್ಕೆ ಇದು ಎರಡನೇ ಪಂದ್ಯವಾಗಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​​ ತಂಡವನ್ನು ಸೋಲಿಸಿರುವ ಧೋನಿ ಪಡೆ ಗೆಲುವಿನ ಲಯವನ್ನು ಮುಂದುವರಿಸಿಕೊಂಡು ಹೋಗುವ ಉತ್ಸಾಹವಿದೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಫಿಟ್‌ನೆಸ್ ತಂಡದ ಚಿಂತೆಗೆ ಕಾರಣವಾಗಿದೆ. ವಿದೇಶಿ ಆಟಗಾರರನ್ನೇ ನೆಚ್ಚಿಕೊಂಡಿರುವ ಆರ್‌ಆರ್ ತಂಡವು ಈ ಬಾರಿಯ ಟೂರ್ನಿಯ ಆರಂಭವನ್ನು ಯಾವ ರೀತಿ ಮಾಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸಂಭಾವ್ಯ ತಂಡ ಚೆನ್ನೈ ಸೂಪರ್ ಕಿಂಗ್ಸ್

ಮುರಳಿ ವಿಜಯ್, ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂ.ಎಸ್.ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ದೀಪಕ್ ಚಹರ್, ಪಿಯೂಷ್ ಚಾವ್ಲಾ, ಲುಂಗಿ ಎನ್‌ಗಿಡಿ.

ಸಂಭಾವ್ಯ ತಂಡ ರಾಜಸ್ಥಾನ್ ರಾಯಲ್ಸ್

ಯಶಸ್ವಿ ಜೈಸ್ವಾಲ್, ರಾಬಿನ್ ಉತ್ತಪ್ಪ, ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ಮಿಲ್ಲರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಟಾಮ್ ಕರ್ರನ್, ರಿಯಾನ್ ಪರಾಗ್, ಶ್ರೇಯಾಸ್ ಗೋಪಾಲ್, ಜೋಫ್ರಾ ಆರ್ಚರ್, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ.

Next Story

RELATED STORIES