ಆರು ದಿನಗಳ ಕ್ವಾರಂಟೈನ್ ಬಗ್ಗೆ ಮನಬಿಚ್ಚಿ ಮಾತನಾಡಿದ ಆರ್ ಅಶ್ವಿನ್
ದುಬೈ: ಡೆಲ್ಲಿ ಕ್ಯಾಪಿಟಲ್ಸ್ ಟೀಂ ಅನುಭವಿ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಯುಎಇನಲ್ಲಿ ತಮ್ಮನ್ನು ಕ್ವಾರಂಟೈನ್ ಮಾಡಿದ್ದಾಗ ಆದ ಕ್ಷಣಗಳನ್ನು ಮೆಲುಕು ಹಾಕಿದ್ದು, ತಮ್ಮ ಅನುಭವನ್ನು ಡೆಲ್ಲಿ ಕ್ಯಾಪಿಟಲ್ಸ್ ಯೂಟ್ಯೂಬ್ ಚಾನಲ್ನಲ್ಲಿ ಹಂಚಿಕೊಂಡಿದ್ದಾರೆ.
ಭಾರತದಿಂದ ಯುಎಇಗೆ ಪ್ರಯಾಣ ಬೆಳೆಸಿದ ಬಳಿಕ ಎಲ್ಲರೂ ಕಡ್ಡಾಯವಾಗಿ ಆರು ದಿನಗಳ ವರೆಗೆ ಕ್ವಾರಂಟೈನ್ನಲ್ಲಿ ಇರಬೇಕಾಗಿತ್ತು. ಇದು ಆರ್.ಅಶ್ವಿನ್ ಅವರ ಜೀವನದ ನಡೆದ ಅತ್ಯಂತ ಕೆಟ್ಟ ಕ್ಷಣಗಳಲ್ಲಿ ಒಂದು. ಹೋಟೇಲ್ ರೂಮ್ನಲ್ಲಿ ಏಕಾಂಗಿಯಾಗಿ ಕಳೆದ 6 ದಿನಗಳು ಜೀವನದ ಕಠಿಣ ದಿನಗಳು ಎಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ನಾನು ಕಳೆದ 6 ತಿಂಗಳು ಮನೆಯಲ್ಲೇ ಸಮಯ ಕಳೆದಿದ್ದೇನೆ. ಆಗ ನನ್ನ ಸುತ್ತಲೂ ಮನೆಯವರು ಇದ್ದರು. ನನ್ನನ್ನು ನಾನು ಯೂಟ್ಯೂಬ್ ಚಾನೆಲ್ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದೆ, ಇನ್ಸ್ಟಾಗ್ರಾಮ್ ಲೈವ್ ಸೇರಿದಂತೆ ವಿವಿಧ ರೀತಿಯಾಗಿ ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಂಡಿದ್ದೆ. ಆದರೆ, ಇಲ್ಲಿ ಕಳೆದ ಆ ಆರು ದಿನಗಳು ನನಗೆ ತುಂಬಾ ಕಠಿಣವಾಗಿತ್ತು. ನನ್ನ ಜೀವನದ ಅತ್ಯಂತ ಕೆಟ್ಟ ಕ್ಷಣಗಳು ಆಗಿತ್ತು ಎಂದು ಆರ್.ಅಶ್ವಿನ್ ಹೇಳಿದ್ದಾರೆ
ತಮ್ಮ ಕ್ವಾರಂಟೈನ್ನಲ್ಲಿದ್ದ ಆರು ದಿನಗಳ ಅವಧಿಯುದ್ದಕ್ಕೂ ಆರ್.ಅಶ್ವಿನ್ ಅವರು ಹೆಚ್ಚಾಗಿ ಮೊಬೈಲ್ನಲ್ಲಿ ತಲ್ಲೀನನಾಗಿರುತ್ತಿದ್ದೆ ಎಂದಿದ್ದು, ಇದರೊಟ್ಟಿಗೆ ಓದುವುದರಲ್ಲಿ ಹೆಚ್ಚಿನ ಗಮನ ಕೊಡಲು ಆ ಸಂದರ್ಭದಲ್ಲಿ ನನ್ನಿಂದ ಸಾಧ್ಯವಾಗಲಿಲ್ಲ ಎಂದು ಆರ್.ಅಶ್ವಿನ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಕಳೆದ ಆವೃತ್ತಿಯಲ್ಲಿ ಕಿಂಗ್ಸ್ XI ಪಂಜಾಬ್ ತಂಡದ ನಾಯಕರಾಗಿದ್ದ ಆರ್ ಅಶ್ವಿನ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ.