ಧೋನಿ ನಿವೃತ್ತಿಗೂ ಮುಂಚೆ ಸರಣಿ ಗೆಲ್ಲಲು ಬಯಸಿದ್ದೆ - ರಾಬಿನ್ ಉತ್ತಪ್ಪ
ಇದುವರೆಗೆ ಐಪಿಎಲ್ನಲ್ಲಿ ಅವರು 24 ಅರ್ಧಶತಕಗಳ ಜೊತೆ ಸುಮಾರು 130 ರ ಸ್ಟ್ರೈಕ್ ರೇಟ್ನಲ್ಲಿ 4607 ರನ್ ಗಳಿಸಿದ್ದಾರೆ.
ಚೆನ್ನೈ: ಈ ಬಾರಿಯ ಐಪಿಎಲ್ ಹರಾಜು ಮೊದಲೇ ಒಪ್ಪಂದದ ಮೇರೆಗೆ ಕನ್ನಡಿಗ ರಾಬಿನ್ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಪಾಲಾಗಿದ್ದರು. ಉತ್ತಪ್ಪ ಅವರು, ಹೋದ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್ಆರ್) ತಂಡದ ಪರ ಆಡಿ 12 ಪಂದ್ಯಗಳಲ್ಲಿ 196 ರನ್ ಕಲೆ ಹಾಕಿದ್ದರು.
ನಿನ್ನೆ (ರವಿವಾರ) ಸಿಎಸ್ಕೆ ಟ್ವಿಟ್ಟರ್ ಖಾತೆಯಲ್ಲಿ ರಾಬಿನ್ ಉತ್ತಪ್ಪ ಅವರು ಪೋಸ್ಟ್ ಮಾಡಿರುವ ವಿಡಿಯೊಂದರಲ್ಲಿ, ಸಿಎಸ್ಕೆ ತಂಡಕ್ಕೆ ಆಯ್ಕೆ ಆಗಿದ್ದು, ಬಹು ದಿನಗಳ ಆಸೆ ಈಡೇರಿದಂತೆ, ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ಎಲ್ಲ ಬಗೆಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವುದಕ್ಕೂ ಮುಂಚೆ ಅವರ ಜೊತೆ ಸರಣಿ ಗೆಲ್ಲಬೇಕು ಎಂದುಕೊಂಡಿದ್ದೆ ಎಂದು ತಮಿಳು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಹೇಳಿಕೊಂಡಿದ್ದಾರೆ.
ಸದ್ಯ ಸಿಎಸ್ಕೆ ತಂಡ ಸೇರಿದ್ದರಿಂದ ಕೊಂಚ ನನ್ನ ಆಸೆ ಈಡೇರಿದೆ. ಧೋನಿ ಜೊತೆ ಆಡಿ 12-13 ವರ್ಷಗಳಾಗಿವೆ. ಅವರು ನಿವೃತ್ತಿ ಆಗುವ ಮೊದಲು ಅವರೊಟ್ಟಿಗೆ ಸರಣಿ ಆಡಿ, ಗೆಲ್ಲಲು ನಾನು ಬಯಸಿದ್ದೆ ಎಂದು ತಮ್ಮ ಮನಸ್ಸಿನ ಆಸೆಯನ್ನು ಹೇಳಿಕೊಂಡಿದ್ದಾರೆ.
ಇದುವರೆಗೆ ಐಪಿಎಲ್ನಲ್ಲಿ ಅವರು 24 ಅರ್ಧಶತಕಗಳ ಜೊತೆ ಸುಮಾರು 130 ರ ಸ್ಟ್ರೈಕ್ ರೇಟ್ನಲ್ಲಿ 4607 ರನ್ ಗಳಿಸಿದ್ದಾರೆ.
Robbie in #Yellove for the first time! Whistle Poda ready ah, all of you?! #WhistlePodu @robbieuthappa 💛🦁 pic.twitter.com/v0GO2oRrJF
— Chennai Super Kings (@ChennaiIPL) February 21, 2021