Top

ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿ​ ನನ್ನ ನಾಯಕ, ನಾನು ಉಪನಾಯಕ - ಅಂಜಿಕ್ಯ ರಹಾನೆ

ರಹಾನೆ ಅವರು ನಾಯಕತ್ವ ವಹಿಸಿದ ಐದು ಟೆಸ್ಟ್‌ಗಳಲ್ಲಿ ಭಾರತ ತಂಡವು ನಾಲ್ಕರಲ್ಲಿ ಗೆದ್ದಿದೆ. ಒಂದು ಪಂದ್ಯ ಡ್ರಾ ಆಗಿ

ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿ​ ನನ್ನ ನಾಯಕ, ನಾನು ಉಪನಾಯಕ - ಅಂಜಿಕ್ಯ ರಹಾನೆ
X

ನವದೆಹಲಿ: ನನಗೆ ವಿರಾಟ್ ಕೊಹ್ಲಿಯೇ ನಾಯಕ. ನಾನು ಅವರಿಗೆ ಉಪನಾಯಕ. ಯಾವ ಬದಲಾವಣೆಗಳೂ ಆಗುವುದಿಲ್ಲ. ಎಲ್ಲವೂ ಮೊದಲಿನಂತೆಯೇ ಇರಲಿದೆ ಎಂದು ಭಾರತ ಕ್ರಿಕೆಟ್​ ಆಟಗಾರ ಅಂಜಿಕ್ಯ ರಹಾನೆ ಅವರು ಹೇಳಿದ್ದಾರೆ.

ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆ ಅವರು ಹಂಗಾಮಿ ನಾಯಕರಾದ ನಂತರ ಟೀಂ ಇಂಡಿಯಾವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಸರಣಿಯ ಮೊದಲ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅವರು ಪಿತೃತ್ವ ರಜೆ ಪಡೆದ ಹಿನ್ನೆಲೆ ಉಳಿದ ಮೂರು ಟೆಸ್ಟ್‌ಗಳಲ್ಲಿ ತಂಡವನ್ನು ರಹಾನೆ ಮುನ್ನಡೆಸಿ ಯಶಸ್ವಿಯಾಗಿದರು.

ಇದರ ಬೆನ್ನಲ್ಲೇ ಮುಂದಿನ ದಿನಗಳಲ್ಲಿಯೂ ಭಾರತದ ಟೆಸ್ಟ್ ತಂಡಕ್ಕೆ ಅಂಜಿಕ್ಯ ರಹಾನೆ ನಾಯಕರಾಗುವರೇ, ವಿರಾಟ್​ ಕೊಹ್ಲಿ ಅವರು ಸೀಮಿತ ಓವರ್‌ಗಳಿಗೆ ನಾಯಕತ್ವ ನಿರ್ವಹಿಸಬಹುದು ಎಂಬ ಕುತೂಹಲ ಕ್ರಿಕೆಟ್​ ಜಗತ್ತಿನಲ್ಲಿ ಚರ್ಚೆಗಳು ಗರಿಗೆದರಿದ್ದವು. ಆದರೆ, ಈ ಎಲ್ಲ ಮಾತುಗಳಿಗೂ ಅಂಜಿಕ್ಯ ರಹಾನೆ ಸ್ಪಷ್ಟನೆ ನೀಡಿದ್ದಾರೆ.

ವಿರಾಟ್ ಯಾವಾಗಲೂ ನನ್ನ ನಾಯಕ. ಅವರು ವಿಶ್ರಾಂತಿಯಲ್ಲಿದ್ದಾಗ ಮತ್ತು ತಂಡಕ್ಕೆ ಅಗತ್ಯವಿದ್ದಾಗ ನನಗೆ ವಹಿಸಿದ ಹೊಣೆಯನ್ನು ನಿಭಾಯಿಸುತ್ತೇನೆ. ಉಪನಾಯಕನಾಗಿ ನನ್ನ ಕರ್ತವ್ಯ ಪಾಲಿಸುತ್ತೇನೆ ಎಂದಿದ್ದಾರೆ.

ನಾಯಕನಾಗುವುದು ದೊಡ್ಡ ವಿಷಯವಲ್ಲ. ಆದರೆ, ಆ ಸ್ಥಾನಕ್ಕೆ ನಾವು ಹೇಗೆ ನ್ಯಾಯ ಸಲ್ಲಿಸುತ್ತೇವೆ ಎನ್ನುವುದು ಮುಖ್ಯ. ನಾಯಕತ್ವ ಮತ್ತು ನಮ್ಮ ಆಟದಿಂದ ತಂಡದ ಗೆಲುವಿಗೆ ನೀಡುವ ಕೊಡುಗೆ ಮುಖ್ಯವಾಗುತ್ತದೆ. ಇಲ್ಲಿಯ ವರೆಗೆ ನನ್ನ ಪಾತ್ರ ನಿರ್ವಹಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇನೆ. ಮುಂದೆಯೂ ಇದೆ ಹಾದಿಯಲ್ಲಿ ಸಾಧನೆ ಮಾಡುವ ವಿಶ್ವಾಸವಿದೆ ಎಂದು ರಹಾನೆ ಹೇಳಿದರು.

ಅಂಜಿಕ್ಯ ರಹಾನೆ ಅವರು ನಾಯಕತ್ವ ವಹಿಸಿದ ಐದು ಟೆಸ್ಟ್‌ಗಳಲ್ಲಿ ಭಾರತ ತಂಡವು ನಾಲ್ಕರಲ್ಲಿ ಗೆದ್ದಿದೆ. ಒಂದು ಪಂದ್ಯ ಡ್ರಾ ಆಗಿದೆ.

Next Story

RELATED STORIES