ಚುಟುಕು ಕ್ರಿಕೆಟ್ನಲ್ಲಿ 1000 ಸಿಕ್ಸರ್ ಸಿಡಿಸಿದ ಯುನಿವರ್ಸೆಲ್ ಬಾಸ್
ಟಿ-20 ಕ್ರಿಕೆಟ್ನಲ್ಲಿ 1000 ಸಿಕ್ಸರ್ ಸಿಡಿಸಿದ ಕೀರ್ತಿ ಯುನಿವರ್ಸೆಲ್ ಬಾಸ್ ಕ್ರಿಸ್ ಗೇಲ್ ಸಲ್ಲುತ್ತದೆ.

ಕ್ರಿಸ್ ಗೇಲ್ (ಫೈಲ್ ಫೋಟೋ: ಐಎಎನ್ಎಸ್)
ಅಬುಧಾಬಿ: ಟಿ-20 ಕ್ರಿಕೆಟ್ನಲ್ಲಿ 1000 ಸಿಕ್ಸರ್ ಸಿಡಿಸಿದ ಕೀರ್ತಿ ಯುನಿವರ್ಸೆಲ್ ಬಾಸ್ ಕ್ರಿಸ್ ಗೇಲ್ ಅವರಿಗೆ ಧಕ್ಕಿದ್ದು, ನಿನ್ನೆ ರಾಜಸ್ಥಾನ್ ರಾಯಲ್ಸ್ ತಂಡ ವಿರುದ್ಧ ಕೇವಲ ಒಂದು ರನ್ ಅಂತರದಿಂದ ತಮ್ಮ ಶತಕ ಅಂಚಿನಿಂದ ತಪ್ಪಿಸಿಕೊಂಡರು.
1️⃣0️⃣0️⃣0️⃣ T20 sixes for Christopher Henry Gayle.
— ICC (@ICC) October 30, 2020
That's it. That's the post 🤷 pic.twitter.com/wkCViJAYmX
ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್(ಆರ್ಆರ್) ತಂಡದ ಎದುರು ನಡೆದ ಮ್ಯಾಚ್ನಲ್ಲಿ 8 ಸಿಕ್ಸರ್ಗಳನ್ನು ಸಿಡಿಸಿದ್ದರಿಂದ ಗೇಲ್ ಒಟ್ಟು 1000 ಸಿಕ್ಸರ್ ದಾಖಲಿಸಿದ ಏಕೈಕ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಕೇವಲ 63 ಎಸೆತಗಳಲ್ಲಿ 99 ರನ್ ಗಳಿಸಿದ ಅವರ ಬಲದಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 185 ರನ್ಗಳ ಮೊತ್ತ ದಾಖಲಿಸಿತು.
ರಾಜಸ್ಥಾನ್ ರಾಯಲ್ಸ್ ತಂಡ ಬೌಲರ್ ಜೋಫ್ರಾ ಆರ್ಚರ್ 19ನೇ ಓವರ್ನ ನಾಲ್ಕನೇ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಬಳಿಕ ಕ್ರೀಸ್ಗೇಲ್ ಅವರು ಶತಕದ ಅಂಚಿನಲ್ಲಿ ಎಡವಿದ್ದು ಅವರಿಗೆ ತಾಳ್ಮೆಕೊಳ್ಳುವಷ್ಟು ಕೋಪ ಬಂದು ಬ್ಯಾಟ್ ಬೀಸಾಡಿದರು ಆನಂತರ ತಮ್ಮನ್ನು ಔಟ್ ಮಾಡಿದ ಜೋಫ್ರಾ ಆರ್ಚರ್ ಅವರಿಗೆ ಹ್ಯಾಂಡ್ಶೇಕ್(ಕೈಕುಲುಕಿ) ಕೊಟ್ಟು ಮೈದಾನದಿಂದ ನಿರ್ಗಮಿಸಿದರು.