Australia vs India: ಟೆಸ್ಟ್ ಸರಣಿಯಿಂದ ಹೊರಬಿದ್ದ ಉಮೇಶ್ ಯಾದವ್
ಸ್ನಾಯು ನೋವಿಗೆ (ಕಾಫ್ಪೇನ್) ತುತ್ತಾಗಿದ್ದ ಉಮೇಶ್ ಯಾದವ್ ಅವರು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 3.3 ಓವರ್ ಬೌಲಿಂಗ್ ಮಾಡಿದ್ದರು

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಅವರು ಹೊರ ಬಿದ್ದಿದ್ದು, ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ನಲ್ಲಿ ಯಾದವ್ ಅವರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಅದುವಲ್ಲದೇ, ಆ ಪಂದ್ಯದಲ್ಲಿ ಅವರು ಅರ್ಧದಲ್ಲೇ ಮೈದಾನದಿಂದ ಹೊರ ನಡೆದಿದ್ದರು.
ಸ್ನಾಯು ನೋವಿಗೆ (ಕಾಫ್ಪೇನ್) ತುತ್ತಾಗಿದ್ದ ಉಮೇಶ್ ಯಾದವ್ ಅವರು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 3.3 ಓವರ್ ಬೌಲಿಂಗ್ ಮಾಡಿದ್ದರು ಆ ವೇಳೆ ಗಾಯದ ಸಮಸ್ಯೆ ಎದುರಾದ ಕಾರಣ ಅರ್ಧಕ್ಕೆ ನಿಲ್ಲಿಸಿ ಮೈದಾನದಿಂದ ಹೊರ ನಡೆದಿದ್ದರು. ಯಾದವ್ ಓವರ್ಅನ್ನು ವೇಗಿ ಮೊಹಮ್ಮದ್ ಸಿರಾಜ್ ಪೂರ್ಣಗೊಳಿಸಿದ್ದರು.
ಭಾರತ-ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ ಜನವರಿ 7ರಂದು ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದ್ದು, ಈ ಪಂದ್ಯಕ್ಕೆ ಉಮೇಶ್ ಯಾದವ್ ಬದಲಿಗೆ ವೇಗಿ ಟಿ. ನಟರಾಜನ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆಗಳಿವೆ. ಈಗೇನಾದ್ರೂ ಅದರೆ ನಟರಾಜನ್ ಅವರು ಈ ಪಂದ್ಯದ ಮೂಲಕ ಟೆಸ್ಟ್ಗೆ ಪಾದಾರ್ಪಣೆ ಮಾಡಲಿದ್ದಾರೆ.
ಸದ್ಯ ಟೆಸ್ಟ್ ಸರಣಿಯಿಂದ ಹೊರ ಬಿದ್ದಿರುವುದರಿಂದ ಉಮೇಶ್ ಯಾದವ್ ಅವರು ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಈಗಾಗಲೇ ನಡೆದಿದರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲಿ ಆಸ್ಟ್ರೇಲಿಯಾ ತಂಡ ಎಂಟು ವಿಕೆಟ್ ಜಯ ಗಳಿಸಿದ್ದರೆ, ಮತ್ತೊಂದರಲ್ಲಿ ಟೀಂ ಇಂಡಿಯಾ ಎಂಟು ವಿಕೆಟ್ ಗೆಲುವು ಸಾಧಿಸಿ ಸರಣಿಯನ್ನು ಸಮಬಲ ಕಾಯ್ದುಕೊಂಡಿದೆ.