Top

IPL 2020: ಇಂದು ಮುಂಬೈ ಇಂಡಿಯನ್ಸ್​ ಮಣಿಸಲು ಡೈಲ್ಲಿ ಕ್ಯಾಪಿಟಲ್ಸ್​ ಕಸರತ್ತು

ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ

IPL 2020: ಇಂದು ಮುಂಬೈ ಇಂಡಿಯನ್ಸ್​ ಮಣಿಸಲು ಡೈಲ್ಲಿ ಕ್ಯಾಪಿಟಲ್ಸ್​  ಕಸರತ್ತು
X

ದುಬೈ: ಇಂದು ದುಬೈನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ವಾಲಿಫೈಯರ್-1 ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ.

ಸದ್ಯ ಇವತ್ತು ಪಂದ್ಯ ಗೆಲ್ಲುವತ್ತ ಎರಡೂ ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ. ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿದ್ದ ಮುಂಬೈ ಇಂಡಿಯನ್ಸ್‌ ಪರವಾಗಿ ನಾಯಕ ರೋಹಿತ್ ಶರ್ಮಾ ಮೈದಾನಕ್ಕಿಳಿಯುವ ಸಾಧ್ಯತೆಯಿದೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಹಿಂದಿನ ಅನುಸರಿಸಿದ್ದ ಎಲ್ಲಾ ಕ್ರಮಗಳ ಬದಲಾವಣೆಯೊಂದಿಗೆ ಮೈದಾನಕ್ಕೆ ಇಳಿಯುವ ನಿರೀಕ್ಷೆ ಇದೆ.

ಹೆಡ್​​ ಟು ಹೆಡ್​​

ಡಿಸಿ​ 26 ಎಂಐ

12 ಜಯ 14

14 ಸೋಲು 12

0 ಫಲಿತಾಂಶವಿಲ್ಲ 0

213 ಅತಿಹೆಚ್ಚು ರನ್​ಗಳು 218

66 ಅತಿ ಕಡಿಮೆ ರನ್​ಗಳು 92

ಡೆಲ್ಲಿ ಸಂಭಾವ್ಯ ತಂಡ ಪಟ್ಟಿ:

ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಿಕೆಟ್​ ಕೀಪರ್​), ಮಾರ್ಕಸ್ ಸ್ಟೋಯಿನಿಸ್, ಅಕ್ಸರ್ ಪಟೇಲ್, ರವಿಚಂದ್ರನ್​ ಅಶ್ವಿನ್, ಡೇನಿಯಲ್ ಸ್ಯಾಮ್ಸ್, ಕಾಗಿಸೊ ರಬಾಡ, ಅನ್ರಿಕ್ ನಾರ್ಟ್ಜೆ.

ಮುಂಬೈ ಸಂಭಾವ್ಯ ತಂಡ ಪಟ್ಟಿ:

ಕ್ವಿಂಟನ್ ಡಿ ಕಾಕ್ (ವಿಕೆಟ್​ ಕೀಪರ್​), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್/ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬೂಮ್ರಾ.

ಪಂದ್ಯದ ಸಮಯ: 7:30ಕ್ಕೆ ಆರಂಭವಾಗಲಿದೆ (ಭಾರತದ ಕಾಲಮಾನ)

ಸ್ಥಳ: ದುಬೈ ಇಂಟರ್​ನ್ಯಾಷನಲ್​ ಕ್ರೀಡಾಂಗಣ

Next Story

RELATED STORIES