IPL 2020: ಇಂದು ಆರ್ಸಿಬಿ vs ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ಪಂದ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಸರ್ಸ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಡುವೆ ಇಂದು ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 13 ಆವೃತ್ತಿಯ 6ನೇ ಪಂದ್ಯ ಅತ್ಯಂತ ಕುತೂಹಲ ಮೂಡಿಸಿದೆ.

ಕೆ.ಎಲ್ ರಾಹುಲ್ (ಕಿಂಗ್ಸ್ ಇಲೆವೆನ್ ಪಂಜಾಬ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ವಿರಾಟ್ ಕೊಹ್ಲಿ)
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಸರ್ಸ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಡುವೆ ಇಂದು ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 13 ಆವೃತ್ತಿಯ 6ನೇ ಪಂದ್ಯ ಅತ್ಯಂತ ಕುತೂಹಲ ಮೂಡಿಸಿದ್ದು, ಪ್ರಮುಖ ಕಾರಣ ಇದೊಂಥರಾ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಎ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು-ಬಿ ತಂಡಗಳ ನಡುವಿನ ಪಂದ್ಯ ಎಂದು ಭಾವಿಸಿದ್ರೆ ತಪ್ಪಿಲ್ಲ.
ಅದೇನೆ ಇರಲಿ ಅಧಿಕೃತವಾಗಿ ಹೇಳುವುದಾದರೆ, ಆರ್ಸಿಬಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಈ ದಿನ ಕಾದಾಡಲಿವೆ. ಪಂಜಾಬ್ ತಂಡವನ್ನು ಅನ್ನು ಕನ್ನಡದ 'ಬಿ' ತಂಡ ಅಂತ ಅಭಿಮಾನಿಗಳು ಕರೆಯಲು ಕಾರಣ ಕನ್ನಡಿಗರೇ ಹೆಚ್ಚು ಮಂದಿ ತಂಡದಲ್ಲಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯ ಗೆದ್ದು ಮತ್ತಷ್ಟು ಹುಮ್ಮಸ್ಸಿನಲ್ಲಿದೆ. ಮೊದಲ ಪಂದ್ಯದಲ್ಲಿ ಆರ್ಸಿಬಿ, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಗಳಿಸಿತ್ತು. ಅತ್ತ ಕಿಂಗ್ ಇಲೆವನ್ ಪಂಜಾಬ್ ತಂಡ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಗ್ಗರಿಸಿತ್ತು. ಈ ಪಂದ್ಯ ಸೂಪರ್ ಓವರ್ನಲ್ಲಿಗೂ ಸಾಕ್ಷಿಯಾಗಿ ಸೋಲು ಅನುಭವಿಸಿತ್ತು.