Top

ಪಂದ್ಯ ಗೆದ್ದುಕೊಡುವ ಕಿಡಿ ಯುವ ಆಟಗಾರರಲ್ಲಿ ಕಂಡಿಲ್ಲ - ಎಂ.ಎಸ್​ ಧೋನಿ

ಈ ಬಾರಿ ನಮಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯ ಆಗಲಿಲ್ಲ ಎಂಬುದು ಸತ್ಯ. ನಮಗೆ ಪಂದ್ಯ ಗೆದ್ದುಕೊಡುವ ಕಿಡಿ ಯುವ ಆಟಗಾರರಲ್ಲಿ ಕಂಡಿಲ್ಲ.

ಪಂದ್ಯ ಗೆದ್ದುಕೊಡುವ ಕಿಡಿ ಯುವ ಆಟಗಾರರಲ್ಲಿ ಕಂಡಿಲ್ಲ - ಎಂ.ಎಸ್​ ಧೋನಿ
X

ದುಬೈ: ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್​ಕೆ) ತಂಡದಲ್ಲಿರುವ ಯುವ ಆಟಗಾರರಲ್ಲಿ ಮಾಚ್​ ವಿನ್​ ಮಾಡಿಸುವ ಕಿಡಿ ಕಂಡು ಬಂದಿಲ್ಲ. ಹೀಗಾಗಿ ಈಗಿರುವ ತಂಡದಲ್ಲಿ ಎಕ್ಸ್​​ಪೀರಿಯನ್ಸ್​ ಕ್ರಿಕೆಟಿಗರ ನಡುವೆ ಅವರು ಸ್ಥಾನಗಿಟ್ಟಿಸಿಕೊಂಡಿಲ್ಲ ಎಂದು ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹೇಳಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮೂರು ಸಲ ಐಪಿಎಲ್ ಟ್ರೋಫಿ ಗೆದ್ದಿದ್ದ ಚೆನ್ನೈ ತಂಡ ಈ ಬಾರಿ ಕಳಪೆ ಪ್ರದರ್ಶನ ನೀಡಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (ಆರ್​ಆರ್​) ತಂಡದ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸೋತಿದ್ದು, ಈ ಐಪಿಎಲ್‌ನಲ್ಲಿ 7 ಬಾರಿ ಸೋಲು ಕಂಡಿದೆ.

ಸಿಎಸ್​ಕೆ ತಂಡದಲ್ಲಿ ಕಿರಿಯ ಆಟಗಾರರಿಗೆ ಅವಕಾಶ ನೀಡದೇ ಹಿರಿಯ ಆಟಗಾರರನ್ನೇ ಎಂಎಸ್​ ಧೋನಿ ಆಡಿಸುತ್ತಿರುವುದರಿಂದ ತಂಡವು ಸೋಲುತ್ತಿದೆ ಎಂಬ ಟೀಕೆ ವ್ಯಕ್ತವಾಗಿವೆ.

ಸದ್ಯ ಈ ಟೀಕೆಗಳಿಗೆ ಪ್ರತಿಕ್ರಿಯಿಸಿರವ ಎಂ.ಎಸ್​. ಧೋನಿ ಅವರು, ಏಕಾಏಕಿ ಬದಲಾವಣೆ ಸಾಧ್ಯವಿಲ್ಲ. ಡ್ರೆಸ್ಸಿಂಗ್ ರೂಂನಲ್ಲಿ ಅಭದ್ರತೆ ಮೇಲುಗೈ ಸಾಧಿಸಲು ಬಯಸುವುದಿಲ್ಲ. ಈ ಬಾರಿ ನಮಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯ ಆಗಲಿಲ್ಲ ಎಂಬುದು ಸತ್ಯ. ನಮಗೆ ಪಂದ್ಯ ಗೆದ್ದುಕೊಡುವ ಕಿಡಿ ಯುವ ಆಟಗಾರರಲ್ಲಿ ಕಂಡಿಲ್ಲ. ಆದರೆ, ಮುಂದೆ ಬರುವ ಪಂದ್ಯಗಳಲ್ಲಿ ಕಿರಿಯರಿಗೆ ಅವಕಾಶ ನೀಡಲಾಗುವುದು. ಅವರಿಗೆ ತಂಡದಲ್ಲಿ ಸ್ಥಾನ ನೀಡಿ ಅವರು ಒತ್ತಡವಿಲ್ಲದೆ ಆಟವಾಡಲು ಅವಕಾಶವೂ ಸಿಗಬಹುದು ಎಂದಿದ್ದಾರೆ.

ಅದುವಲ್ಲದೇ, ಪಿಚ್‌ನಲ್ಲಿ ವೇಗದ ಬೌಲರ್‌ಗಳಿಗೆ ಕಷ್ಟವಾಗುತ್ತಿತ್ತು. ಹೀಗಾಗಿ ರವೀಂದ್ರ ಜಡೇಜಾ ಅವರನ್ನು ಕರೆದಿದ್ದು. ಪ್ರತಿ ಬಾರಿ ನಾವು ನಿರೀಕ್ಷಿಸಿದ್ದೆ ನಡೆಯಬೇಕು ಎಂದು ಏನಿಲ್ಲ. ನಾವು ಎಲ್ಲಿ ಎಡವಿದ್ದು ಎಂಬುದನ್ನು ಪರಾಮರ್ಶೆ ಮಾಡಬೇಕಾಗಿದೆ. ಇನ್ನು ಪ್ರಕ್ರಿಯೆಯ (Process) ಆಧಾರದ ಮೇಲೆ ಫಲಿತಾಂಶವೂ ಇರುತ್ತದೆ. ಆದರೆ, ನೀವು ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸಿದ್ದರೆ (Focus) ಫಲಿತಾಂಶದ ಅನಗತ್ಯ ಒತ್ತಡ ಡ್ರೆಸ್ಸಿಂಗ್ ರೂಮ್​ಗೆ ಪ್ರವೇಶಿಸುವುದಿಲ್ಲ ಎಂದು ಮಹೇಂದ್ರ ಸಿಂಗ್​ ಧೋನಿ ಅವರು ಹೇಳಿದ್ದಾರೆ.

Next Story

RELATED STORIES