ಡಿಯೋಗ್ ಮರಡೋನಾ ನಿಧನಕ್ಕೆ ಮತ್ತೊಬ್ಬ ಶ್ರೇಷ್ಠ ಆಟಗಾರರ ಪೀಲೆ ಸಂತಾಪ
ಒಂದು ದಿನ ನಾನು-ನೀನು ಆಕಾಶದಲ್ಲಿ ಜೊತೆಯಾಗಿ ಫುಟ್ಬಾಲ್ ಆಡಬಹುದು ಎಂದು ಭಾವಿಸುತ್ತೇನೆ

ಸಾವೊ ಪೌಲೊ: ಖ್ಯಾತ ಫುಟ್ಬಾಲ್ ಆಟಗಾರ ಡಿಯೋಗ್ ಮರಡೋನಾ ಅವರು (60) ಹೃದಯಾಘತದಿಂದ ನಿಧನರಾಗಿದ್ದಕ್ಕೆ ಪುಟ್ಬಾಲ್ ಲೋಕದ ಮತ್ತೊಬ್ಬ ಲೆಜೆಂಡರಿ ಪ್ಲೇಯರ್ ಪೀಲೆ ಅವರು ಸಂತಾಪ ಸೂಚಿಸಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಇದೊಂದು ದುಃಖದ ಸಂಗತಿ, ನಾನು ಒಬ್ಬ ಉತ್ತಮ ಗೆಳೆಯನನ್ನು ಕಳೆದುಕೊಂಡರೆ ಜಗತ್ತು ಶ್ರೇಷ್ಠ ಫುಟ್ ಬಾಲ್ ಆಟಗಾರನನ್ನು ಕಳೆದುಕೊಂಡಿದೆ. ಮರಡೋನಾ ಬಗ್ಗೆ ಹೇಳಲು ಸಾಕಷ್ಟಿದೆ. ಈ ಸಮಯದಲ್ಲಿ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದಷ್ಟೇ ಹೇಳುತ್ತೇನೆ. ಒಂದು ದಿನ ನಾನು-ನೀನು ಆಕಾಶದಲ್ಲಿ ಜೊತೆಯಾಗಿ ಫುಟ್ಬಾಲ್ ಆಡಬಹುದು ಎಂದು ಭಾವಿಸುತ್ತೇನೆ ಎಂದು ತಮ್ಮ ಗೆಳೆಯನಿಗೆ ಸಂತಾಪ ಸೂಚಿಸಿದ್ದಾರೆ.
Que notícia triste. Eu perdi um grande amigo e o mundo perdeu uma lenda. Ainda há muito a ser dito, mas por agora, que Deus dê força para os familiares. Um dia, eu espero que possamos jogar bola juntos no céu. pic.twitter.com/6Li76HTikA
— Pelé (@Pele) November 25, 2020
ಪುಟ್ಬಾಲ್ ಜಗತ್ತಿನಲ್ಲಿ ಪೀಲೆ ಮತ್ತು ಡಿಯೋಗ್ ಮರಡೋನಾ ಅಚ್ಚುಮೆಚ್ಚಿನವರು ಆಟಗಾರರು. ಶ್ರೇಷ್ಠ ಆಟಗಾರರು, ಈ ಇಬ್ಬರು ಪ್ಲೇಯರ್ಸ್ಗಳು ಪರಸ್ಪರ ಅಪಾರ ಗೌರವದಿಂದ ಕಾಣುತ್ತಿದ್ದರು. ಈ ಇಬ್ಬರು ಆಟಗಾರರು ಹಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಫುಟ್ಬಾಲ್ ಪ್ರೇಮಿಗಳಿಗೆ ರೊಮಾಂಚನಕಾರಿ ಅನುಭವವನ್ನು ಕೊಡುಗೆಯಾಗಿ ನೀಡಿದ್ದಾರೆ.