Top

ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಪೃಥ್ವಿ ಶಾ ಸತತ ವೈಫಲ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​

ಕಳಪೆ ಪ್ರದರ್ಶನ ತೋರಿರುವ ಪೃಥ್ವಿ ಶಾ ಅವರು ಸುಲಭ ಕ್ಯಾಚ್ ಕೈಚೆಲ್ಲುವ ಮೂಲಕ ಸಾಕಷ್ಟು ಟೀಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದಾರೆ.

ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಪೃಥ್ವಿ ಶಾ ಸತತ ವೈಫಲ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​
X

ಆಸ್ಟ್ರೇಲಿಯಾ ವಿರುದ್ದ ಅಡಿಲೇಡ್ ಓವಲ್ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ ಗುಲಾಬಿ ಚೆಂಡಿನ ಪ್ರಥಮ ಡೇ ಅಂಡ್​ ನೈಟ್​ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್​ ಮತ್ತು ಕ್ಷೇತ್ರ ರಕ್ಷಣೆಯಲ್ಲೂ ವೈಫಲ್ಯವಾಗಿದ್ದು ಭಾರತ ತಂಡದ ಬಲಗೈ ಯುವ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ನಿರಾಸೆ ಮೂಡಿಸಿದ್ದಾರೆ.

ಪ್ರಥಮ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯುವಲ್ಲಿ ವಿಫಲವಾಗಿರುವ ಪೃಥ್ವಿ ಶಾ ಅವರು, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ ನಾಲ್ಕು ರನ್​ ಗಳಿಸಿ ವಿಕೆಟ್ ಒಪ್ಪಿಸಿದರು. ಶಾ ಅವರು ಎರಡೂ ಬಾರಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಸತತ ವೈಫಲ್ಯಕ್ಕೊಳಗಾದರು.

ವೃತ್ತಿ ಜೀವನದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಸಾಧನೆ ಮಾಡಿರುವ ಪೃಥ್ವಿ ಶಾ, ನಂತರ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿಯುವಂತಾಯಿತು.ಈಗ ಮತ್ತೆ ತಂಡವನ್ನು ಸೇರಿದರೂ ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ಯಶಸ್ವಿ ಆಗಲಿಲ್ಲ. ಇದರಿಂದ ಟೀಮ್ ಇಂಡಿಯಾ ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲವಾಗಿದೆ.

ಸದ್ಯ ಕ್ಷೇತ್ರ ರಕ್ಷಣೆಯಲ್ಲಿಯೂ ಸಹ ಕಳಪೆ ಪ್ರದರ್ಶನ ತೋರಿರುವ ಪೃಥ್ವಿ ಶಾ ಅವರು ಸುಲಭ ಕ್ಯಾಚ್ ಕೈಚೆಲ್ಲುವ ಮೂಲಕ ಸಾಕಷ್ಟು ಟೀಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದಾರೆ.

Next Story

RELATED STORIES