Top

ಕೋವಿಡ್​ ಪರೀಕ್ಷೆಯಲ್ಲಿ ಟೀಂ ಇಂಡಿಯಾ ಎಲ್ಲ ಆಟಗಾರರಿಗೆ ನೆಗೆಟಿವ್ ಫಲಿತಾಂಶ

ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯವು ಸಿಡ್ನಿಯಲ್ಲಿ ಜನವರಿ 7ರಂದು ಆರಂಭವಾಗಲಿದೆ.

ಕೋವಿಡ್​  ಪರೀಕ್ಷೆಯಲ್ಲಿ ಟೀಂ ಇಂಡಿಯಾ ಎಲ್ಲ ಆಟಗಾರರಿಗೆ ನೆಗೆಟಿವ್ ಫಲಿತಾಂಶ
X

ಸಿಡ್ನಿ: ಟೀಂ ಇಂಡಿಯಾ ತಂಡದ ಆಟಗಾರರು ಸೇರಿದಂತೆ ಎಲ್ಲ ಸಹಾಯಕ ಸಿಬ್ಬಂದಿಗಳಿಗೆ ನಡೆಸಲಾಗಿದ್ದ ಕೋವಿಡ್-19 ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಎಲ್ಲರೂ ನೆಗೆಟಿವ್ ಫಲಿತಾಂಶ ಬಂದಿದೆ ಎಂದು ಬಿಸಿಸಿಐ ಸೋಮವಾರ ಹೇಳಿದೆ.

ಹೊಸ ವರ್ಷಾಚರಣೆಯ ಆಚರಣೆಯ ವೇಳೆ ಮೆಲ್ಬರ್ನ್ ರೆಸ್ಟೋರೆಂಟ್‌ನಲ್ಲಿ ಟೀಂ ಇಂಡಿಯಾದ ಕೆಲವು ಆಟಗಾರರು ಕೋವಿಡ್ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆಂಬ ಆರೋಪ ಕೇಳಿ ಬಂದ ಬೆನ್ನಲ್ಲೆ ಈ ಪರೀಕ್ಷೆ ನಡೆಸಲಾಗಿದೆ.

ಇದರ ನಡುವೆ ರೋಹಿತ್ ಶರ್ಮಾ, ಶುಭಮನ್ ಗಿಲ್, ರಿಷಭ್ ಪಂತ್, ನವದೀಪ್ ಸೈನಿ ಮತ್ತು ಪೃಥ್ವಿ ಶಾ ಅವರಿಗೆ ಪ್ರತ್ಯೇಕವಾಸ ಇರಲು ಸೂಚಿಸಲಾಗಿತ್ತು.

ಜನವರಿ 3ರಂದು ಟೀಮ್ ಇಂಡಿಯಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳು ಕೋವಿಡ್-19 ಆರೋಗ್ಯ ತಪಾಸಣೆಗೆ ಒಳಗಾಗಿದ್ದರು. ಈಗ ಎಲ್ಲರೂ ಜೊತೆಯಾಗಿ ಜನವರಿ 4ರಂದು ಸಿಡ್ನಿಗೆ ಪ್ರಯಾಣಿಸಲಿದ್ದಾರೆ.

ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯವು ಸಿಡ್ನಿಯಲ್ಲಿ ಜನವರಿ 7ರಂದು ಆರಂಭವಾಗಲಿದೆ.

Next Story

RELATED STORIES