ಆಸ್ಟ್ರೇಲಿಯಾ ಪ್ರವಾಸ: ದುಬೈ ತೊರೆದ ಟೀಂ ಇಂಡಿಯಾ
ಟೀಂ ಇಂಡಿಯಾ ತಂಡ ಆಸ್ಟ್ರೇಲಿಯಾ ಸರಣಿಗಾಗಿ ಬುಧವಾರ ಯುನೈಟೆಡ್ ಅರಬ್ ಎಮಿರೇಟ್ಸ್ ತೊರೆದಿದೆ.

ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ತಂಡ ದುಬೈನಿಂದ ಹೊರಡುತ್ತಿರುವ ಕ್ಷಣ (ಪೋಟೋ- ಬಿಸಿಸಿಐ ಟ್ವಿಟರ್)
ದುಬೈ: ಟೀಂ ಇಂಡಿಯಾ ತಂಡ ಆಸ್ಟ್ರೇಲಿಯಾ ಸರಣಿಗಾಗಿ ಬುಧವಾರ ಯುನೈಟೆಡ್ ಅರಬ್ ಎಮಿರೇಟ್ಸ್ ತೊರೆದಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಆಡುವುದಕ್ಕಾಗಿ ಭಾರತ ತಂಡ ಯುಎಇಯಲ್ಲಿ ಜೊತೆಯಾಗಿತ್ತು. ಸದ್ಯ ಅಲ್ಲಿಂದ ಆಸ್ಟ್ರೇಲಿಯಾಕ್ಕೆ ವಿರಾಟ್ ಕೊಹ್ಲಿ ತಂಡ ಪ್ರಯಾಣ ಬೆಳೆಸಿದೆ.
ಸೆಪ್ಟೆಂಬರ್ 19ರಂದು ಆರಂಭಗೊಂಡಿದ್ದ ಐಪಿಎಲ್ ನವೆಂಬರ್ 10ಕ್ಕೆ ಫೈನಲ್ನೊಂದಿಗೆ ಅಂತ್ಯಗೊಂಡಿತ್ತು.
ದುಬೈ ಬಿಡುವುದಕ್ಕೂ ಮುನ್ನ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಹೊರಟು ನಿಂತಿರುವ ಫೋಟೋವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಚಿತ್ರದಲ್ಲಿ ಆಟಗಾರರು ಕ್ರೀಡಾ ಪಿಪಿಇ ಕಿಟ್ ಧರಿಸಿ ಫೋಸ್ ಕೊಟ್ಟಿದ್ದಾರೆ.
ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಯು ಮೂರು ಏಕದಿನ, ಮೂರು ಟಿ20ಯ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ. ನವೆಂಬರ್ 27ರಂದು ಆರಂಭವಾಗುವ ಪ್ರವಾಸ ಸರಣಿ ಜನವರಿ 19ಕ್ಕೆ ಅಂತ್ಯವಾಗಲಿದೆ.