ಸರ್ ಡೋನಾಲ್ಡ್ ಬ್ರಾಡ್ಮನ್ ಟೆಸ್ಟ್ ಕ್ಯಾಪ್ 2.51 ಕೋಟಿ ರೂ.
ಈ ಕಡುಹಸಿರುವ ಬಣ್ಣದ ಕ್ಯಾಪ್ಅನ್ನು ರೋಡ್ ಮೈಕ್ರೋಫೋನ್ಸ್ ಸಂಸ್ಥಾಪಕ ಪೀಟರ್ ಫ್ರೀಡ್ಮನ್ ಅವರು ಖರೀದಿಸಿದ್ದಾರೆ.

ಫೈಲ್ ಪೋಟೋ: ಸರ್ ಡೋನಾಲ್ಡ್ ಬ್ರಾಡ್ಮನ್ (ಎಎಫ್ಪಿ)
ಸಿಡ್ನಿ: ಕ್ರಿಕೆಟ್ನ ದಂತಕಥೆ ಸರ್ ಡೋನಾಲ್ಡ್ ಬ್ರಾಡ್ಮನ್ ಅವರ ಟೆಸ್ಟ್ ಕ್ಯಾಪ್ ಅನ್ನು ಉದ್ಯಮಿಯೊಬ್ಬರು 2.51 ಕೋಟಿ ರೂಪಾಯಿಗೆ ಖರೀಸಿದ್ದು, ಬ್ರಾಡ್ಮನ್ ಅವರ ಟೆಸ್ಟ್ ಕ್ರಿಕೆಟ್ನ ಪದಾರ್ಪಣೆಯ ಪಂದ್ಯದಲ್ಲಿ ಧರಿಸಿದ್ದ ಹಸಿರು ಬಣ್ಣದ ಕ್ಯಾಪ್ ಅನ್ನು ಹರಾಜಿಗಿಡಲಾಗಿತ್ತು.
ಸದ್ಯ ಈ ಕಡುಹಸಿರುವ ಬಣ್ಣದ ಕ್ಯಾಪ್ಅನ್ನು ರೋಡ್ ಮೈಕ್ರೋಫೋನ್ಸ್ ಸಂಸ್ಥಾಪಕ ಪೀಟರ್ ಫ್ರೀಡ್ಮನ್ ಅವರು ಖರೀದಿಸಿದ್ದಾರೆ. ಅದುವಲ್ಲದೇ ಇದೇ ಉದ್ಯಮಿ ಈಚೆಗಷ್ಟೇ 5.20 ಕೋಟಿ ರೂಪಾಯಿ ಕೊಟ್ಟು ಖ್ಯಾತ ಗಾಯಕ ಕರ್ಟ್ ಕೊಬೇನ್ ಅವರ ಗಿಟಾರ ಖರೀದಿಸಿದ್ದರು.

ಇನ್ನು ಕ್ರಿಕೆಟ್ ಸ್ಮರಣಿಕೆಗಳ ಹರಾಜಿನ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೌಲ್ಯ ಗಳಿಸಿದ್ದರಲ್ಲಿ ಬ್ರಾಡ್ಮನ್ ಕ್ಯಾಪ್ ಎರಡನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರ ಕ್ಯಾಪ್ ಈಚೆಗೆ ಸುಮಾರು 5 ಕೋಟಿ ರೂಪಾಯಿ ಮೌಲ್ಯಗಳಿಸಿತ್ತು. ವಾರ್ನ್ ಆ ಹಣವನ್ನು ಆಸ್ಟ್ರೇಲಿಯಾದ ಕಾಳ್ಮಿಚ್ಚು ಸಂತ್ರಸ್ತರ ನಿಧಿಗೆ ದೇಣಿಯಾಗಿ ನೀಡಿದ್ದರು.