Top

ಶತಕದ ಅಂಚಿನಲ್ಲಿ ಎಡವಿದ ಶುಭಮನ್​ ಗಿಲ್;​ ಭಾರತ ಎಚ್ಚರಿಕೆ ಆಡುವ ಅವಶ್ಯಕತೆ ಇದೆ

ಅಂತಿಮ ಅವಧಿಯಲ್ಲಿ ಟೀಂ ಇಂಡಿಯಾ ಎಚ್ಚರಿಕೆ ಆಟ ಆಡಬೇಕಾದ ಅವಶ್ಯಕತೆ ಇದೆ. ರನ್ ಗಳಿಕೆ ಯತ್ನದಲ್ಲಿ ಪಂದ್ಯ ಕೈಚೆಲ್ಲಿದರೆ ಸರಣಿ ಆಸೀಸ್ ಕೈವಶವಾಗಲಿದೆ.

ಶತಕದ ಅಂಚಿನಲ್ಲಿ ಎಡವಿದ ಶುಭಮನ್​ ಗಿಲ್;​ ಭಾರತ ಎಚ್ಚರಿಕೆ ಆಡುವ ಅವಶ್ಯಕತೆ ಇದೆ
X

Getty Images 

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ನಿರ್ಣಾಯಕ ದಿನದ ಆಟದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (91) ಶತಕದಿಂದ ವಂಚಿತರಾಗಿದ್ದು, ಆರಂಭದಿಂದಲೂ ವೇಗವಾಗಿ ರನ್ ಗಳಿಸುತ್ತಿದ್ದ ಗಿಲ್ ಭಾರತದ ಗುರಿ ತಲುಪುವ ಹಾದಿಗೆ ಉತ್ತಮ ಕೊಡುಗೆ ನೀಡಿದ್ದಾರೆ.

ಶುಭಮನ್​ ಗಿಲ್​ ಅವರು 146 ಎಸೆತಗಳಲ್ಲಿ 91 ರನ್ ಗಳಿಸಿದ ವೇಳೆ ನಥನ್ ಲಯೋನ್ ಬೌಲಿಂಗ್‌ನಲ್ಲಿ ಸ್ಮಿತ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಶುಭಮನ್ ಗಿಲ್ ಅಮೋಘ ಆಟದಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು ಸಹಿತ 91 ರನ್​ಗಳನ್ನು ಕಲೆಹಾಕಿದ್ದಾರೆ.

ನಾಯಕ ಅಜಿಂಕ್ಯ ರಹಾನೆ (24) ರನ್​ಗಳಿಸಿದ್ದಾಗ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಚಹಾ ವಿರಾಮದ ವೇಳೆಗಾಗಲೇ ಭಾರತ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ಭಾರತದ ಗೆಲುವಿಗೆ ಇನ್ನೂ 145 ರನ್ ಅಗತ್ಯವಿದೆ. ಚೇತೇಶ್ವರ್ ಪೂಜಾರ(43), ರಿಷಬ್ ಪಂತ್(10) ಆಟವಾಡುತ್ತಿದ್ದಾರೆ.

ಸದ್ಯ ಅಂತಿಮ ಅವಧಿಯಲ್ಲಿ ಟೀಂ ಇಂಡಿಯಾ ಎಚ್ಚರಿಕೆ ಆಟ ಆಡಬೇಕಾದ ಅವಶ್ಯಕತೆ ಇದೆ. ರನ್ ಗಳಿಕೆ ಯತ್ನದಲ್ಲಿ ಪಂದ್ಯ ಕೈಚೆಲ್ಲಿದರೆ ಸರಣಿ ಆಸೀಸ್ ಕೈವಶವಾಗಲಿದೆ. 1-1ರಿಂದ ಸರಣಿಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದು, ಈ ಪಂದ್ಯ ಗೆದ್ದ ತಂಡ ಸರಣಿ ವಶಪಡಿಸಿಕೊಳ್ಳಲಿದೆ.

Next Story

RELATED STORIES