ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಪಾರ್ಥಿವ್ ಪಾಟೀಲ್

ನವದೆಹಲಿ: ಟೀಂ ಇಂಡಿಯಾದ ವಿಕೆಟ್ ಕೀಪರ್, ಎಡಗೈ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿರುವ ಬಗ್ಗೆ ತಮ್ಮ ಅಧಿಕೃತ ಖಾತೆಯಲ್ಲಿ ಟ್ವಿಟ್ ಮೂಲಕ ತಿಳಿಸಿದ್ದಾರೆ.
— parthiv patel (@parthiv9) December 9, 2020
ಪಟೇಲ್ 2002ರಲ್ಲಿ ತಮ್ಮ 17ನೇ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಭಾರತವನ್ನು ಪ್ರತಿನಿಧಿಸಿದರು. ಒಟ್ಟು ಇವರು ಇಲ್ಲಿಯ ವರೆಗೆ 25 ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ತಂಡದ ಪರ ಆಡಿದ್ದು, 31.13 ಸರಾಸರಿಯಲ್ಲಿ 934 ರನ್ ಗಳಿಸಿದ್ದಾರೆ.
38 ಏಕದಿನ ಮತ್ತು ಎರಡು ಟ್ವೆಂಟಿ -20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಪಾರ್ಥಿವ್ ಪಾಟೀಲ್ ಅವರು 2018ರಲ್ಲಿ ಕೊನೆಯ ಬಾರಿಗೆ ಜೋಹಾನ್ಸ್ಬರ್ಗ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.
ಇಂದು ನಾನು ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಈ 18 ವರ್ಷದ ನನ್ನ ಕ್ರಿಕೆಟ್ ಜರ್ನಿಯನ್ನು ಕೊನೆಗೊಳಿಸುತ್ತಿದ್ದೇನೆ ಜೊತೆಗೆ ಈ ಸಂದರ್ಭದಲ್ಲಿ ನಾನು ಹಲವರಿಗೆ ಕೃತಜ್ಞನಾಗಿದ್ದೇನೆ. ಭಾರತಕ್ಕಾಗಿ ಆಡಲು ಬಿಸಿಸಿಐ 17 ವರ್ಷದ ಬಾಲಕನ ಮೇಲೆ ಉದಾರವಾದ ವಿಶ್ವಾಸ ಮತ್ತು ನಂಬಿಕೆಯನ್ನು ತೋರಿಸಿದೆ. ನನ್ನ ಪ್ರಾರಂಭದ ವೃತ್ತಿಬದುಕು ಕಟ್ಟಿಕೊಳ್ಳುವ ಸಮಯದಲ್ಲಿ ಮಾರ್ಗದರ್ಶಕರಾಗಿ ಮತ್ತು ನನ್ನನ್ನು ಹಿಡಿದಿಟ್ಟುಕೊಂಡಿದ್ದಕ್ಕಾಗಿ ಅವರ ಮೇಲೆ ನನಗೆ ಅಪಾರ ಗೌರವಿದೆ ಎಂದು ಪಾರ್ಥಿವ್ ಪಾಟೀಲ್ ಅವರು ಸುಧಿರ್ಘವಾದ ಟ್ವಿಟರ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.