'ಜೀವರಕ್ಷಣೆಗಾಗಿ ಹೆಲ್ಮೆಟ್ ಧರಿಸುವುದು ಕಡ್ಡಾಯಗೊಳಿಸಬೇಕು' - ಐಸಿಸಿಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಒತ್ತಾಯ
ಬ್ಯಾಟ್ಸ್ಮನ್ಗಳ ಪ್ರಾಣದ ಹಿತ ದೃಷ್ಠಿಯಿಂದ ಬ್ಯಾಟ್ಸ್ಮನ್ಗಳಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು

ನವದೆಹಲಿ: ಬ್ಯಾಟ್ಸ್ಮನ್ಗಳ ಪ್ರಾಣದ ಹಿತ ದೃಷ್ಠಿಯಿಂದ ಬ್ಯಾಟ್ಸ್ಮನ್ಗಳಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಒತ್ತಾಯ ಮಾಡಿದ್ದಾರೆ.
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ವಿಜಯ್ ಶಂಕರ್ ತಲೆಗೆ ಚೆಂಡು ಜೋರಾಗಿ ಬಡಿದಿತ್ತು. ಅವರನ್ನು ರನೌಟ್ ಮಾಡುವ ಯತ್ನದಲ್ಲಿ ನಿಕೋಲಸ್ ಪೂರನ್ ಎಸೆದ ಚೆಂಡು ತಲೆಗೆ ತಾಗಿತ್ತು. ಆದ್ಯಾಗೂ ವಿಜಯ್ ಹೆಲ್ಮೆಟ್ ಧರಿಸಿದ್ದರಿಂದ ಯಾವುದೇ ತೊಂದರೆ ಆಗಲಿಲ್ಲ. ಈ ವಿಡಿಯೋವನ್ನು ತೆಂಡೂಲ್ಕರ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
The game has become faster but is it getting safer?
— Sachin Tendulkar (@sachin_rt) November 3, 2020
Recently we witnessed an incident which could've been nasty.
Be it a spinner or pacer, wearing a HELMET should be MANDATORY for batsmen at professional levels.
Request @icc to take this up on priority.https://t.co/7jErL3af0m
ಕ್ರಿಕೆಟ್ ವೇಗವಾಗಿ ಬೆಳೆಯುತ್ತಿದೆ. ಆದರೆ, ಪ್ರಾಣದ ಸುರಕ್ಷತೆ(?) ಇತ್ತೀಚೆಗೆ ನಾವು ಆಘಾತಕಾರಿ ಘಟನೆಯೊಂದಕ್ಕೆ ಸಾಕ್ಷಿ ಆಗಿದ್ದೇವೆ. ಎದುರಾಳಿ ಬೌಲರ್ಗಳು ಸ್ಪಿನ್ನರ್ ಅಥವಾ ವೇಗಿ ಆಗಿರಲಿ, ಬ್ಯಾಟ್ಸ್ಮನ್ಗಳು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಬೇಕು ಐಸಿಸಿ ಇದನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂದು ಸಚಿನ್ ಟ್ವಿಟ್ನಲ್ಲಿ ಹೇಳಿದ್ದಾರೆ.
Another example of why helmets need to be made mandatory.
— Sachin Tendulkar (@sachin_rt) November 3, 2020
Thank God my friend @dhawal_kulkarni was wearing one.@BoriaMajumdar https://t.co/3ZRv8fGLKe