Top

ಐಪಿಎಲ್​ನಲ್ಲಿ ಸುರೇಶ್​​ ರೈನಾ ದಾಖಲೆ ಬ್ರೇಕ್​ ಮಾಡಿದ ಎಂ.ಎಸ್​ ಧೋನಿ

ಮಹೇಂದ್ರ ಸಿಂಗ್​ ಧೋನಿ ಅವರು ಶುಕ್ರವಾರ 194ನೇ ಪಂದ್ಯ ಆಡಿ ತನ್ನ ಗೆಳೆಯ ಸುರೇಶ್ ರೈನಾ ಅವರ ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ.

ಐಪಿಎಲ್​ನಲ್ಲಿ ಸುರೇಶ್​​ ರೈನಾ ದಾಖಲೆ ಬ್ರೇಕ್​ ಮಾಡಿದ ಎಂ.ಎಸ್​ ಧೋನಿ
X

ದುಬೈ: ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಕ್ಯಾಪ್ಟನ್​ ಕೂಲ್​ ಮಹೇಂದ್ರ ಸಿಂಗ್ ಧೋನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ ಅವರು ಶುಕ್ರವಾರ 194ನೇ ಪಂದ್ಯ ಆಡಿ ತನ್ನ ಗೆಳೆಯ ಸುರೇಶ್ ರೈನಾ ಅವರ ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ.

ಸಿಎಸ್‌ಕೆ ತಂಡವನ್ನು ಧೋನಿಯವರು ಇಲ್ಲಿಯತನಕ 11 ಋತುಗಳಲ್ಲಿ ಪ್ರತಿನಿಧಿಸಿದ್ದಾರೆ. 2013ರ ಸ್ಪಾಟ್ ಫಿಕ್ಸಿಂಗ್‌ನಿಂದಾಗಿ ಚೈನ್ನೈ ತಂಡ 2016-2017ರಲ್ಲಿ ಅಮಾನತು ಶಿಕ್ಷೆಗೆ ಒಳಗಾಗಿತ್ತು. ಆಗ ಅವರು ಎರಡು ವರ್ಷ ಪುಣಾ ಸೂಪರ್‌ಜೈಂಟ್ಸ್‌ ತಂಡವನ್ನು ಪ್ರತಿನಿಧಿಸಿ, 30 ಪಂದ್ಯಗಳಲ್ಲಿ ಆಡಿದ್ದಾರೆ. ಸಿಎಸ್​ಕೆ ತಂಡದ ಪರವಾಗಿ 164 ಪಂದ್ಯಗಳನ್ನು ಆಡಿದ್ದಾರೆ.

ಕ್ರಮವಾಗಿ 2010, 2011 ಮತ್ತು 2018ರಲ್ಲಿ ಧೋನಿ ನಾಯಕತ್ವದಲ್ಲಿ ಚೈನ್ನೈ ತಂಡ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತ್ತು. ಒಟ್ಟು ಒಂಬತ್ತು ಫೈನಲ್‌ಗಳಲ್ಲಿ ಎಂಎಸ್​ಡಿ ಆಡಿದ್ದಾರೆ. ಒಂದೇ ತಂಡದ ಪರವಾಗಿ ಹೆಚ್ಚು ಪಂದ್ಯಗಳನ್ನು ಆಡಿರುವ ನಾಯಕರ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರಾಟ್ ಕೊಹ್ಲಿ (180 ಪಂದ್ಯ) ಅಗ್ರಸ್ಥಾನದಲ್ಲಿದ್ದಾರೆ. 13 ಆವೃತ್ತಿಗಳಲ್ಲಿಯೂ ಕೊಹ್ಲಿ ಅವರು ಆರ್‌ಸಿಬಿ ತಂಡದಲ್ಲಿಯೇ ಆಡಿದ್ದಾರೆ.

Next Story

RELATED STORIES