ಆಸ್ಟ್ರೇಲಿಯಾ ಪ್ರವಾಸ: ಮೂರು ಫಾರ್ಮೆಟ್ನಲ್ಲಿ ಸ್ಥಾನ ಪಡೆದ ಟೀಂ ಇಂಡಿಯಾ ಆಟಗಾರರ ಪಟ್ಟಿ ಇಲ್ಲಿದೆ
ಭಾರತ ತಂಡದ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ಆಟಗಾರರನ್ನು ಪಟ್ಟಿಯನ್ನು ನಿನ್ನೆ ಬಿಡಗಡೆ ಮಾಡಿದೆ.

ಮುಂಬೈ: ಭಾರತ ತಂಡದ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ಆಟಗಾರರನ್ನು ಪಟ್ಟಿಯನ್ನು ನಿನ್ನೆ ಬಿಡಗಡೆ ಮಾಡಿದ್ದು, ಅಂದಾಜು ಮೂರು ತಿಂಗಳವರೆಗೆ ವಿರಾಟ್ ಕೊಹ್ಲಿ ಪಡೆ ಕಾಂಗರೂ ನಾಡಿನಲ್ಲಿ ಬೀಡು ಬಿಡಲಿದೆ. ಹೀಗಾಗಿ ಸುದೀರ್ಘ ಸರಣಿಗಾಗಿ, ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಷಕ್ಷ ಸುನಿಶ್ ಜೋಶಿ ಬಹಳ ಲೆಕ್ಕಾಚಾರದಲ್ಲಿ ತಂಡವನ್ನು ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಸದ್ಯ ಯುಎಇಯಲ್ಲಿ ಐಪಿಎಲ್ 2020 ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, ಟೀಮ್ ಇಂಡಿಯಾ ಮೂರು ಫಾರ್ಮೆಟ್ನ ಕ್ರಿಕೆಟ್ಗಾಗಿ(ಟಿ20, ಏಕದಿನ, ಟೆಸ್ಟ್) ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಸಜ್ಜಾಗಿದೆ. ಕೊಹ್ಲಿ ಪಡೆ ನವೆಂಬರ್ 12ರಂದು ಸಿಡ್ನಿಗೆ ತೆರಳುವ ಸಾಧ್ಯತೆಯಿದೆ.
ICYMI - #TeamIndia squads for three T20Is, three ODIs & four Test matches against Australia.#AUSvIND pic.twitter.com/HVloKk5mw0
— BCCI (@BCCI) October 26, 2020
ಮಹಾಮಾರಿ ಕೋವಿಡ್-19 ವಿಶ್ವ ವ್ಯಾಪಿಕಾಣಿಸಿಕೊಂಡ ಬಳಿಕ ಯಾವುದೇ ತಂಡವು ಬೇರೆ ರಾಷ್ಟ್ರಗಳಿಗೆ ತೆರಳಿದರೆ ಕ್ವಾರಂಟೈನ್ಗೆ ಒಳಗಾಗುತ್ತದೆ. ಹಾಗೆಯೇ ವಿರಾಟ್ ಕೊಹ್ಲಿ ನೇತೃತ್ವದ ತಂಡವು ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್ಗೆ ಒಳಗಾಗಬೇಕಿದೆ. ಕ್ವಾರಂಟೈನ್ ಮುಗಿಸಿ ಒಂದು ವಾರದ ಬಳಿಕ ಭಾರತ ಅಭ್ಯಾಸ ಮಾಡಲು ಅವಕಾಶವಿರತ್ತದೆ.
ಸದ್ಯ ಮೂರು ಫಾರ್ಮೆಟ್ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಕಾದಾಟ ನಡೆಸುವುದರಿಂದ ಆಯಾ ಫಾರ್ಮೆಟ್ನಲ್ಲಿ ಉತ್ತಮ ಆಟ ಪ್ರದರ್ಶನ ನೀಡಬಲ್ಲ ಅನುಭವಿ, ಚಾಣಾಕ್ಷ್ಯ ಆಟಗಾರರನ್ನು ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ. ಮೂರು ಫಾರ್ಮೆಟ್ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊರತುಪಡಿಸಿ ಬೇರೆ ಯಾವೆಲ್ಲ ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಕೆಳಗೆ ಮಾಹಿತಿ ಇದೆ.
1. ವಿರಾಟ್ ಕೊಹ್ಲಿ
2. ಕೆ.ಎಲ್ ರಾಹುಲ್
3. ಜಸ್ಪ್ರೀತ್ ಬುಮ್ರಾ
4. ಮಯಾಂಕ್ ಅಗರ್ವಾಲ್
5. ಮೊಹಮ್ಮದ್ ಶಮಿ
6. ನವದೀಪ್ ಸೈನಿ
7. ರವೀಂದ್ರ ಜಡೇಜಾ