ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದಿಕ್ಕಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಅವರು ಈ ಮೈಲುಗಲ್ಲು ತಲುಪಲು ಒಟ್ಟು 462 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ

ಸಿಡ್ನಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 89 ರನ್ಗಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 22,000 ರನ್ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ನಿನ್ನೆ ಪಂದ್ಯದಲ್ಲಿ ಕೊಹ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 89 ರನ್ಗಳಿಸಿದರು. ಪಂದ್ಯ ಸೋತರು ಭಾರತ ತಂಡದ ನಾಯಕ ಕೊಹ್ಲಿ ಅವರು ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 22,000 ರನ್ಗಳನ್ನು ಪೂರೈಸಿದರು. ಅವರು ಏಕದಿನ ಕ್ರಿಕೆಟ್ನಲ್ಲಿ 11,977, ಟೆಸ್ಟ್ನಲ್ಲಿ 7,240, ಟಿ20ಯಲ್ಲಿ 2,784 ರನ್ಗಳನ್ನು ಸಿಡಿಸಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ಅವರು ಈ ಮೈಲುಗಲ್ಲು ತಲುಪಲು ಒಟ್ಟು 462 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, 2ನೇ ಸ್ಥಾನದಲ್ಲಿ ಇರುವ ಸಚಿನ್ ತೆಂಡೂಲ್ಕರ್ 493, ವೆಸ್ಟ್ ಇಂಡಿಯನ್ಸ್ ದಂತಕಥೆ ಲಾರಾ 511, ಮೂರು ಏಕದಿನ ವಿಶ್ವಕಪ್ ಗೆದ್ದು ಆಸ್ಟ್ರೇಲಿಯಾ ತಂಡ ಮಾಜಿ ನಾಯಕ ರಿಕಿ ಪಾಂಟಿಂಗ್ 514, ಸೌತ್ ಆಫ್ರೀಕಾ ತಂಡ ಸರ್ವಕಾಲಿಕ ಶ್ರೇಷ್ಠ ಅಲ್ರೌಂಡರ್ ಜಾಕ್ ಕಾಲೀಸ್ 533, ಕನ್ನಡಿಗ ರಾಹುಲ್ ದ್ರಾವಿಡ್ 550, ಶ್ರೀಲಂಕಾ ತಂಡದ ಮಾಜಿ ವಿಕೆಟ್ ಕೀಪರ್ ಕುಮಾರ್ ಸಂಗಾಕ್ಕರ 553, ಮಹೇಲಾ ಜಯವರ್ದನೆ 606 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ 34,357 ರನ್ಗಳು, ಕುಮಾರ್ ಸಂಗಕ್ಕಾರ 28,016, ರಿಕಿ ಪಾಂಟಿಂಗ್ 27,483, ಜಯವರ್ಧನೆ 25,957, ಜಾಕ್ ಕಾಲಿಸ್ 25,534, ರಾಹುಲ್ ದ್ರಾವಿಡ್ 24,208 ರನ್ ಗಳಿಸಿದ್ದು, ಬ್ರಿಯಾನ್ ಲಾರ್ 22,358 ರನ್ ಗಳಸಿದ್ದಾರೆ. ಈಗ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ 22,000 ರನ್ ಪೂರೈಸಿದ 8ನೇ ಆಟಗಾರನಾಗಿದ್ದಾರೆ.